ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅಪ್ಪಾಜಿಗೋಳ ಮರು ಆಯ್ಕೆ
ಚಿಕ್ಕೋಡಿ 29: ಚಿಕ್ಕೋಡಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸರ್ವಾನುಮತದಿಂದ ನ್ಯಾಯವಾದಿ ಸತೀಶ ಅಪ್ಪಾಜಿಗೋಳ ಅವರನ್ನು ಮರು ಆಯ್ಕೆ ಮಾಡಲಾಯಿತು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾಧ್ಯಕ್ಷ ಚುನಾವಣೆಯಲ್ಲಿ ಜಿಲ್ಲಾ ಚುನಾವಣಾದಿಕಾರಿ ಮಾಜಿ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ನ್ಯಾಯವಾದಿ ಸತೀಶ ಅಪ್ಪಾಜಿಗೋಳ ಮೂರು ವರ್ಷದ ಅವಧಿಗೆ ಮರು ಆಯ್ಕೆಯಾದರು.
ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸತೀಶ ಅಪ್ಪಾಜಿಗೋಳ ಮಾತನಾಡಿ ಕಳೆದ ಒಂದು ವರ್ಷದಲ್ಲಿ ನಾನು ಜಿಲ್ಲಾಧ್ಯಕ್ಷನಾಗಿ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿತ್ತು. ಈಗ ಮತ್ತೊಮ್ಮೆ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಲು ಎಲ್ಲರು ಸರ್ವಾನುಮತದಿಂದ ಮರು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿಯ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಭಯ ಮಾನ್ವಿ, ಸಂಜು ಪಾಟೀಲ, ಅಮೃತ ಕುಲಕರ್ಣಿ, ರಮೇಶ ಕಾಳನ್ನವರ ಡಾ, ರಾಜೇಶ ನೇರ್ಲಿ ಮುಂತಾದವರು ಇದ್ದರು.