ಸಂಗಮೇಶ ಬೊಮ್ಮಾಯಿಯವರ ಹತ್ತಿರ ಕ್ಷಮೆಯಾಚಿಸಲಿ : ಹೊನ್ನಣ್ಣವರ
ಶಿಗ್ಗಾವಿ 07 : ಬಸವರಾಜ ಬೊಮ್ಮಾಯಿಯವರ ಮೇಲೆ ಕೆ.ಸಿ.ಸಿ ನಿರ್ದೇಶಕ ಸಂಗಮೇಶ ಕಂಬಾಳಿಮಠ ಆರೋಪ ಮಾಡಿರುವುದು ಸುಳ್ಳು ಆರೋಫ ಸತ್ಯಕ್ಕೆ ದುರವಾಗಿದ್ದು ಆದ್ದರಿಂದ ಭಾಜಪ ಪಕ್ಷದ ವತಿಯಿಂದ ಖಂಡಿಸುತ್ತೇವೆ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಶೀಧರ ಹೊನ್ನಣ್ಣವರ ಖಂಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಭಾಜಪ ಅಭ್ಯರ್ಥಿ 87 ಸಾವಿರ ಮತಗಳನ್ನು ಪಡೆದಿದ್ದಾರೆ ಅಲ್ಲದೇ ಗ್ಯಾರಂಟಿ ಭಾಗ್ಯಗಳ ಕಾರಣ ಕಾಂಗ್ರೆಸ್ ಸರ್ಕಾರ ಈ ಉಪ ಚುನಾವಣೆಯಲ್ಲಿ ಜಯಸಾಧಿಸಿದೆ ಆದ್ದರಿಂದ ಸ್ವಾಗತಿಸುತ್ತೇವೆ ಎಂದರು.ಕೆ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿಯವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ವಾಮ ಮಾರ್ಗದಿಂದ ಗೆದ್ದಿದ್ದಾರೆ. ಪ್ರತಿಯೊಂದು ವಿಚಾರದಲ್ಲಿ ಆಣೆ ಪ್ರಮಾಣದ ಬೇಡಿಕೆಯನ್ನು ದಮ್ಮ ಹಾಗೂ ತಾಕತ್ತ ಇದ್ದರೆ ಧರ್ಮಸ್ಥಳ ಮಂಜುನಾಥ ದೇವಾಲಯ ಬಂದರೆ ನಾವು ಆಣೆ ಪ್ರಮಾಣ ಮಾಡಲು ತಯಾರಿದ್ದೇವೆ ಎಂದು ಆಗ್ರಹಿಸಿದರು. ಶಿವಪ್ರಸಾದ ಸುರಗೀಮಠ ಮಾತನಾಡಿ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಕಾರಣ ಸಂಗಮೇಶ ಕಂಬಾಳಿಮಠ, ಶ್ರೀಕಾಂತ ದುಂಡಿಗೌಡ್ರ ಮುಖಂಡರನ್ನು ರಾಜ್ಯದ ನಾಯಕರು, ಮುಖಂಡರು ಸೇರಿ ಇನ್ನೂ ಹಲವರನ್ನು ಉಚ್ಚಾಟನೆ ಮಾಡುವರಿದ್ದಾರೆ ಎಂದರು. ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ಮಾತನಾಡಿ ಸಂಗಮೇಶ ಕಂಬಾಳಿಮಠ ಒಬ್ಬ ಸಮಯಸಾಧಕ ಹಾಗೂ 2008 ರಿಂದ ಚೀಟರಾಗಿ ಕಾರ್ಯನಿರ್ವಹಿಸಿತಾ ಇದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು. ಭಾಕ್ಸ ಸುದ್ದಿ : ಈ ಹಿಂದೆ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಇದ್ದಾಗ 300 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದರು. 300 ಕೋಟಿಯ ಆದೇಶ ಕಾಫಿಯ ಪ್ರತಿ ತಂದು ಕ್ಷೇತ್ರದ ಜನತೆಗೆ ಕೃತ್ಯಗ್ಙತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಬೇಕುಈ ಸಂದರ್ಭದಲ್ಲಿ ರೇಣಕನಗೌಡ ಪಾಟೀಲ, ಪ್ರತೀಕ ಕೊಳೇಕರ, ಅನಿಲ ಸಾತಣ್ಣವರ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.