ಪಾವಣಸ್ಕರ್ ಮ್ಯೂಜಿಕ ಫೌಂಡೇಷನ್ ವತಿಯಿಂದ ಅಹೋರಾತ್ರಿ ಸಂಗೀತೋತ್ಸವ

ಲೋಕದರ್ಶನ ವರದಿ

ಕೊಪ್ಪಳ 13: ತಾಲೂಕಿನ ಕಾಟ್ರಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಪಾವಣಸ್ಕರ್ ಮ್ಯೂಜಿಕ ಫೌಂಡೇಷನ್ ಕೊಪ್ಪಳ ವತಿಯಿಂದ ಆಷಾಢ ಏಕಾದಶಿ ನಿಮಿತ್ಯ ಅಹೋರಾತ್ರಿ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು. 

ಸ್ಥಳೀಯ ಕಲಾವಿದರಾದ ಮಾರುತಿ ಚಿತ್ರಗಾರ, ಸಮೀರ ಬಂಡಿಹಾಳ, ಪ್ರಭಾಕರ್ ಪಟವಾರಿ, ವೆಂಕಟೇಶ್ ಜ್ಯೋಷಿ, ಆಂಜನೇಯ ಗಾಂಡಿವ್ ನಾರಾಯಣದಾಸ ಸಂತೆಕಲ್ಲೂರ್ ಅಹೋರಾತ್ರಿ ಪ್ರಯುಕ್ತ ಗಾಯನ ಹಾಡಿದರೆ, ಗುರುರಾಜ್ ದಾಸ್, ಅನಂತ ಪಾವಣಸ್ಕರ, ನೇಮರಾಜ್ ಹವಳೆ ತಬಲಾ ಸಾಥಿಯಾಗಿ ಸಾಥ್ ನೀಡಿದರು. ಆಂಜನೇಯ ಗಾಂಡಿವ್, ಪ್ರಭಾಕರ್ ಪಟವಾರಿ ಹಾಮರ್ೋನಿಯಂ ನುಡಿಸಿದರು. ಬಿ.ಪಿ.ಮರಿಗೌಡರ್ ಮೂಲವಾಧ್ಯ ನುಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಾವಣಸ್ಕರ್ ಮೂಜಿಕ್ ಫೌಂಡೇಷನ್ ಸಂಸ್ಥಯ ಶ್ಲಾಘಿಸಿದರು. ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಹಿಸಲು ಪ್ರತಿಯೊಬ್ಬ ಸಹಕಾರ ಅಗತ್ಯವಾಗಿದೆ ಎಂದರು.

ಕೊಪ್ಪಳ ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಾರ್ಕಂಡೆಪ್ಪ ಮಂಗಳಾಪುರ್ ಕಾಟ್ರಳ್ಳಿ, ಪರಸಪ್ಪ ಕರೆಕುರಿ, ಸೇರಿದಂತೆ ಕಾಟ್ರಳ್ಳಿ ಗ್ರಾಮದ ಹಿರಿಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಅಪಾರ ಮೆಚ್ಚಿಗೆ ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯದಶರ್ಿ ಅನಂತ ಪಾವಣಸ್ಕರ್ ರವರು ಕೊನೆಯಲ್ಲಿ ಮಾತನಾಡಿ ತಮ್ಮ ಸಂಸ್ಥೆಯ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೆ ಅಭಿನಂದಿಸಿದರು.