ಎಲ್ಲೊ ಲೈನ್ ಮೂಲಕ ತಂಬಾಕು ಮುಕ್ತ ಪ್ರದೇಶವನ್ನಾಗಿಸಲು ವಿರುಪಕ್ಷರಡ್ಡಿ ಕರೆ
ಗದಗ 06: ಜಿಲ್ಲಾ ತಂಬಾಕು ನಿಷೇಧ ಕೋಶ ಗದಗದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ದಿ. 06ರಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ಶಿಕ್ಷಣಸಂಸ್ಥೆ ಹಾಗೂ ಕಛೇರಿಗಳು ಕಡ್ಡಾಯವಾಗಿ ಆವರಣದಲ್ಲಿ (ಙಜಟಟಠತಿ ಟಟಿಜ) ಎಲ್ಲೊ ಲೈನ್ ಹಾಕುವದರ ಮೂಲಕ ತಂಬಾಕು ಮುಕ್ತ ಪ್ರದೇಶವನ್ನಾಗಿಸಲು ಕರೆ ನೀಡಿದರು. ಹಾಗೂ ಕಾನೂನು ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರು ದಂಡ ವಿಧಿಸುವುದರ ಮೂಲಕ ಕ್ರಮಕೈಕೊಳ್ಳಲು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿಗಳು ಹಾಗೂ ಸದಸ್ಯ ಕಾರ್ಯದಶರ್ಿಗಳಾದ ಡಾ.ವಿರುಪಕ್ಷರಡ್ಡಿ ಮಾದಿನೂರುರವರು ಸಭೆಗೆ ಸ್ವಾಗತಿಸಿ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಸತೀಶ ಸಿ.ಬಸರೀಗಿಡದ ಜಿಲ್ಲಾ ಸಮೀಕ್ಷಣಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿಗಳು ಇವರು ಜಿಲ್ಲೆಯಲ್ಲಿ ಕಾರ್ಯಕ್ರಮದ ಭೌತಿಕ ಹಾಗೂ ಆಥರ್ಿಕ ಪ್ರಗತಿ ಕುರಿತು ವಿವರವಾದ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈವರೆಗೆ 249 ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ, ತಂಬಾಕು ನಿಯಂತ್ರಣ ಕುರಿತು ಮಾಡಲಾದ ಐ.ಇ.ಸಿ. ಕಾರ್ಯಕ್ರಮಗಳ ಕುರಿತು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆಯವರು ಮಾತನಾಡಿ ಜಿಲ್ಲೆಯ ಪ್ರತಿಯೊಂದು ವ್ಯಾಪಾರಸ್ಥರು ಸೆಕ್ಷನ್ 4 ಹಾಗೂ ಸೆಕ್ಷನ್ 6 ಅಂದರೆ ಧೂಮಪಾನ ನಿಷೇಧ ಹಾಗೂ 18 ವರ್ಷದೊಳಗಿವರಿ ತಂಬಾಕು ಮಾರಾಟ ನಿಷೇಧ ಎಂಬ ನಾಮಫಲಕ ಕಡ್ಡಾಯವಾಗಿ ಬಿತ್ತರಿಸಲು ಸೂಚಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು. ಹಾಗೂ ಲೈಸನ್ಸನಲ್ಲಿ ಈ ಷರತ್ತು ಕಡ್ಡಾಯವಾಗಿ ಸೇರಿಸಲು ತಿಳಿಸಿದರು. ತಹಶೀಲ್ದಾರರ ನೇತೃತ್ವದ ತಾಲೂಕಾ ಮಟ್ಟದ ತನಿಖಾದಳದ ಮೂಲಕ ಇನ್ನು ಹೆಚ್ಚಿನ ಕಾಯರ್ಾಚರಣೆ ನಡೆಸುವದರ ಮೂಲಕ ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಟಾನ ಮಾಡಲು ಸೂಚಿಸಿದರು. ಬೀಡಿ ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು (ಕಡ್ಡಿ ಪುಡಿ)ಯನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಕೊಳ್ಳಲು ಆದೇಶಿಸಿದರು.
ಧೂಮಪಾನ ಮಾಡುವ ಅಡ್ಡಗಳ ಮೇಲೆ ಕಾನೂನು ರೀತಿ ಶಿಸ್ತಿನ ಕ್ರಮ ಕೈಕೊಳ್ಳಲು ಸೂಚಿಸಿದರು. ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗರವರು ಜಿಲ್ಲೆಯಲ್ಲಿ ಸುಮಾರು 625 ತಂಬಾಕು ವ್ಯಸನಿಗಳು ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಲಭ್ಯವಿರುವ ನಿಕೋಟಿನ್ ಗಮ್ಸ ಹಾಗೂ ನಿಕೋಟಿನ್ ಪ್ಯಾಚಸ್ಸಗಳ ಸದುಪಯೋಗ ಪಡೆದಿರುವ ಕುರಿತು ತಿಳಿಸಿದರು.
ಸಭೆಯಲ್ಲಿ ನಗರಸಭೆ ಆಯುಕ್ತ ಮನ್ಸೂರ ಅಲಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಗಣೇಶ, ಅಬಕಾರಿ ಇಲಾಖೆ, ತೆರಿಗೆ ಇಲಾಖೆ, ಶಿಕ್ಷಣ ಇಲಾಖೆ, ಜೆ.ಟಿ. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸಿ. ಲಿಂಗಾರೆಡ್ಡಿ, ಪ್ರಾಚಾರ್ಯರಾದ ಡಾ. ಬಿ.ಜಿ. ಹಿರೇಮಠ, ಆಹಾರ ಸುರಕ್ಷತಾಧಿಕಾರಿ ಡಿ.ಎಸ್. ಅಂಗಡಿ, ಆರ್.ಎನ್. ಗಡಾದ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 