ಅಂತರ ರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ
ಬೀಳಗಿ 20: ತಾಲೂಕಿನ ಅನಗವಾಡಿ ಶ್ರೀಬಶಂಕರಿದೇವಿ ವಿದ್ಯಾ ಸಂಸ್ಥೆ ಪ್ರತಿಷ್ಠಾನದ ಬಿ.ಎನ್.ಖೋತ ಅಂತರ ರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಜರುಗಿತು.
ಬಾಗಲಕೋಟೆ ಬಸವೇಶ್ವರ ವಿದ್ಯಾ ವರ್ಧಕ ಸಂಘದ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಎಸ್.ಎಸ್.ಬಿರಾದಾರ ಕ್ರೀಡಾ ಬಾವುಟವನ್ನು ಹಾರಿಸಿ-ವಂದಿಸಿ ಗೌರವ ಸಲ್ಲಿಸಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಾವು ಸಾಮರ್ಥ್ಯಕ್ಕೆ ಮೀರಿದ ಗುರಿಯನ್ನು ಹೊಂದಲು ಸಾಧಕರ ಬದುಕಿನ ಚರಿತ್ರೆ ನಮ್ಮ ಜೀವನಕ್ಕೆ ದಾರೀದೀಪವಾಗಿ, ಬುದ್ಧಿವಂತರ ಜೊತೆಗೆ ಹೃದಯವಂತರ ಶ್ರೀಮಂತಿಕೆ, ನಮ್ಮ ಸಮುದಾಯಕ್ಕೆ ಅತ್ಯವಶ್ಯಕವಾಗಿದೆ ಎಂದರು.
ಪ್ರಾಂಶುಪಾಲ ಸುರೇಶ ಹವಾಲ್ದಾರ ಮಾತನಾಡಿ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ನೆಲೆಸಲು ಕ್ರೀಡೆಗಳೇ ಅತ್ಯವಶ್ಯಕ ಎಂದರು.
ಕ್ರೀಡೆಯಲ್ಲಿ ವಿಜಯ ಸಾಧಿಸಿದ ಶಾಲಾ ತಂಡಗಳು ಅನುಕ್ರಮವಾಗಿ ಬಾಲಕರ ವ್ಹಾಲಿಬಾಲ್‌ದಲ್ಲಿ ಪ್ರಥಮ ಸ್ಥಾನ ಕದಂಬ, ದ್ವಿತೀಯ ಸ್ಥಾನ ಗುಪ್ತಾ ಬಾಲಕಿಯರ ಪ್ರಥಮ ಸ್ಥಾನ ಮೌರ್ಯ, ದ್ವಿತೀಯ ಸ್ಥಾನ ಚಾಲುಕ್ಯ, ಕಬ್ಬಡ್ಡಿಯಲ್ಲಿ ಬಾಲಕರ ಪ್ರಥಮ ಸ್ಥಾನ ಗುಪ್ತಾ, ದ್ವಿತೀಯ ಸ್ಥಾನ ಮೌರ್ಯ, ಬಾಲಕಿಯರ ಪ್ರಥಮ ಸ್ಥಾನ ಚಾಲುಕ್ಯ, ದ್ವಿತೀಯ ಸ್ಥಾನ ಕದಂಬ, ಕ್ರಿಕೆಟ್‌ದಲ್ಲಿ ಬಾಲಕರ ಪ್ರಥಮ ಸ್ಥಾನ ಮೌರ್ಯ, ದ್ವಿತೀಯ ಸ್ಥಾನ ಕದಂಬ ತಂಡವು ಪ್ರಶಸ್ತಿ ಪತ್ರಗಳನ್ನು ತಮ್ಮ ಮುಡಿಗೇರಿಸಿಕೊಂಡವು.
ಬನಶಂಕರಿದೇವಿ ವಿದ್ಯಾ ಸಂಸ್ಥೆ ನಿರ್ದೇಶಕ ವಿಜಯಕುಮಾರ ಖೋತ, ಖಜಾಂಚಿ ವಿಕ್ರಮ್‌ಕುಮಾರ ಖೋತ, ಕ್ರೀಡಾ ನಿರ್ಣಾಯಕರಾಗಿ ದೈಹಿಕ ಶಿಕ್ಷಕರುಗಳಾದ ಹನಮಂತ ಹೂಗಾರ, ಬನಪ್ಪ ಹಾಲನ್ನವರ, ಸಂಗಮೇಶ ಅಂಬಿಗೇರ, ಮಲ್ಲಿಕಾರ್ಜುನ ಕಂಬಾರ ಮತ್ತು ಶಿಲ್ಪಾ ಹನಮರ, ಪ್ರಗತಿ ಕೋಟಿ, ಚೇತನ ಹೂಗಾರ, ಸಹನಾ ಬನಪ್ಪನವರ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಶಾಲಾ ವಾರ್ಷಿಕ ಕ್ರೀಡೋತ್ಸವದಲ್ಲಿ ವಿಜಯ ಸಾಧಿಸಿದ ಮಕ್ಕಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಗೌರವಿಸಿದರು.