ಜ. 3 ರಂದು ಗುರುಕೃಪಾ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

Annual Friendship Conference of Gurukrupa School on Jan. 3rd

ಸಿಂದಗಿ,31: ಇಲ್ಲಿಯ ಉತ್ತಮ ಜ್ಞಾನಾರ್ಜನೆ ನೀಡುತ್ತಿರುವ ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವು ಜನೇವರಿ 3 ರಂದು ಶುಕ್ರವಾರ ಸಾಯಂಕಾಲ 5 ಗಂಟೆಗೆ ಸೋಂಪೂರ ರಸ್ತೆಯ ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ಆವರಣದಲ್ಲಿ ಜರುಗಲಿದೆ ಎಂದು ಶ್ರೀ ಗುರು ಕೃಪಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಚ್‌. ಜಿ. ಪೊದ್ದಾರ ತಿಳಿಸಿದ್ದಾರೆ. 

ಶ್ರೀ ಗುರುಕೃಪಾ ಇಂಗ್ಲೀಷ್ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ವಿಜಯಪುರ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಬಿ.ಇ.ಒ ಸದಸ್ಯ ಮಂಜುನಾಥ ಜುನಗೊಂಡ ಅವರು ಆಗಮಿಸಲಿದ್ದು, ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹಾಂತೇಶ ಯಡ್ರಾಮಿ,  ಅಥರ್ಗಾದ ಜ್ಞಾನ ಭಾರತಿ ಶಾಲೆಯ ಆಡಳಿತಾಧಿಕಾರಿ ಆರ್‌.ಬಿ.ಪುರೋಹಿತ, ಬಸವ ಸಮಿತಿ ಅಧ್ಯಕ್ಷರಾದ ಎನ್‌.ಎಸ್‌. ಪಾಟೀಲ, ಹಾಗೂ ಪಾಲಕರ ಪ್ರತಿನಿಧಿಯಾಗಿ ಸಿಂದಗಿಯ ಪದ್ಮರಾಜ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಮಹಾಂತೇಶ ನೂಲನವರ ಅವರುಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್‌. ಟಿ. ಕುಲಕರ್ಣಿ ಅವರು ವಹಿಸಲಿದ್ದಾರೆ. 

ವಿದ್ಯಾರ್ಥಿಗಳಿಂದ ಮನೆರಂಜನಾ ಕಾರ್ಯಕ್ರಮವನ್ನು ಏರಿ​‍್ಡಸಲಾಗಿದ್ದು, “ವಿಶ್ವ ಶಾಂತಿ” ಎಂಬ ವಿಷಯದ ಆಧಾರದ ಮೇಲೆ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಈ ವರ್ಷದ ಶಾಲೆಯ ಪ್ರಧಾನ ಕಾರ್ಯದರ್ಶಿ ಕುಮಾರಿ ಅಪೂರ್ವಾ ಹೊಸಮನಿ ಹಾಗೂ ಶ್ರೀ ಗುರು ಕೃಪಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ  ಎಚ್‌. ಜಿ. ಪೊದ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.