ಲೋಕದರ್ಶನ ವರದಿ
ಬೆಳಗಾವಿ 31: ಕೆಎಲ್ಇ ಸಂಸ್ಥೆಯ ಸ್ಥಳೀಯ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 2018-19ನೇ ಸಾಲಿನ ವಾಷರ್ಿಕ ಸ್ನೇಹ ಸಮ್ಮೇಳನ "ಅಂಕುರಮ್ ಕಾರ್ಯಕ್ರಮದ ನಿಮಿತ್ತವಾಗಿ ಬುಧವಾರದಂದು ಮಕ್ಕಳ ಪ್ರತಿಭಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅನೇಕ ಬಗೆಯ ಹೂಗಳ ಅಲಂಕಾರ, ತರಕಾರಿ ಅಲಂಕಾರ, ಕರಕುಶಲ ಅಲಂಕಾರ, ವಿಜ್ಞಾನ ವಸ್ತು ಪ್ರದರ್ಶನ, ಗಣಿತ ವಸ್ತು ಪ್ರದರ್ಶನ, ರಂಗೋಲಿ ಹೀಗೆ ನಾನಾ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ನಿಪ್ಪಾಣಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ರಾಮನಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆಯ ಉಪಕಾಯರ್ಾಧ್ಯಕ್ಷ ಅಶೋಕ ಬಾಗೇವಾಡಿ, ಪ್ರಾಚಾರ್ಯ ಡಾ.ಎಮ್.ಬಿ.ಕೋಥಳೆ, ಪ್ರಾ.ಎಸ್.ಬಿ.ಸೊಲಬನ್ನವರ, ಸಮೂಹ ಸಂಪನ್ಮೂಲ ವ್ಯಕ್ತಿ ಬಾಹುಬಲಿ ಲಕ್ಕನ್ನವರ, ಮುಖ್ಯೋಪಾಧ್ಯಾಯ ಬಿ.ಎಚ್. ಪರಮಾನಟ್ಟಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.