ವಾರ್ಷಿಕ ಸ್ನೇಹ ಸಮ್ಮೇಳನ: ಪತ್ರಕರ್ತರಿಗೆ ಸನ್ಮಾನ
ತಾಳಿಕೋಟಿ 03: ಪಟ್ಟಣದ ಹಡಗಿನಾಳ ರಸ್ತೆ, ಭಾಗ್ಯವಂತಿ ಗುಡಿ ಹತ್ತಿರ ಇರುವ ಶ್ರೀ ಸುಗೂರೇಶ್ವರ ವಿದ್ಯಾವರ್ಧಕ ಸಂಘ ಇದರ ಶಿಕ್ಷಣ ಸಂಸ್ಥೆಯಾದ ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯ 2024- 25 ನೇ ಸಾಲಿನ ಶಾಲಾ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾರ್ಚ್ 5ಕ್ಕೆ ನಡೆಯಲಿವೆ. ಅಂದು ಸಂಜೆ 5 ಗಂಟೆಗೆ ಸರಸ್ವತಿ ಪ್ರಾಥಮಿಕ ಶಾಲೆ ಆವರಣರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕ ಎಸ್.ಎಸ್.ಗಡೇದ, ಹಿರಿಯ ಪತ್ರಕರ್ತ ಜಿ.ಟಿ. ಘೋರೆ್ಡ ಆಗಮಿಸಲಿದ್ದು ಸರಸ್ವತಿ ವಿದ್ಯಾ ಮಂದಿರ ಹಿ.ಪ್ರಾ. ಶಾಲೆ ಅಧ್ಯಕ್ಷ ಮುರುಗೇಶ ಕಡಕೋಳ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ, ತಾಳಿಕೋಟಿ ಶಿಕ್ಷಣ ಸಂಯೋಜಕ ಸುರೇಶ ಹಿರೇಮಠ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಸುರೇಶ ವಾಲಿಕರ, ಸಿ.ಆರಿ್ಸ. ರಾಜು ವಿಜಾಪುರ, ಎಚ್.ಎಲ್. ಶಿಕ್ಷಣ ಸಂಸ್ಥೆ ಮೂಕಿಹಾಳ ಅಧ್ಯಕ್ಷ ಕೆ.ಎಚ್.ಪಾಟೀಲ, ವಿ ವಿ ಸಂಘ ಕಾರ್ಯದರ್ಶಿ ಮುರಿಗೆಪ್ಪ ಸರಶೆಟ್ಟಿ, ಜೆ ಎಸ್ ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾಹೇಬಗೌಡ ಗಬಸಾವಳಗಿ, ಜ್ಞಾನ ಬಿಂದು ಪಬ್ಲಿಕ್ ಸ್ಕೂಲ್, ಡಂಬಳ ಅಧ್ಯಕ್ಷ ಪ್ರಕಾಶ ನಾಯಕ್,ಸಾಹಿತಿ ಬಸವರಾಜ ಗೊರಜಿ, ಭಾಗ್ಯವಂತಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕರ ಸೋನೂನೆ, ಸಮಾಜ ಸೇವಕ ಈರಣ್ಣ ಕಲಬುರ್ಗಿ, ಮಹೇಶ್ ದೇವಶೆಟ್ಟಿ, ಶರಣಪ್ಪ ಇಲಕಲ್ಲ ಮೈಲೇಶ್ಟರ, ವೀರೇಶ್ ಮೇಟಿ,ಜಯರಾಜ್ ತಂಬಾಕೆ, ಪಿಕೆಪಿಎಸ್ ಅಧ್ಯಕ್ಷ ಶಂಕರಗೌಡ ಪಾಟೀಲ ಆಗಮಿಸಲಿದ್ದು, ಸಂಸ್ಥೆಯ ಕಾರ್ಯದರ್ಶಿ ಪಲ್ಲವಿ ಎಂ ಕಡಕೋಳ, ಉಪಾಧ್ಯಕ್ಷ ರಮೇಶ ಮದ್ದರಕಿ, ಮುಖ್ಯ ಶಿಕ್ಷಕ ಬಿ.ವೈ. ಚವನಭಾವಿ ಉಪಸ್ಥಿತರಿರುವರು. ಪತ್ರಕರ್ತರಾದ ಬಸವರಾಜ ಕಟ್ಟಿಮನಿ, ಅಬ್ದುಲಗನಿ ಮಕಾನದಾರ, ಶ್ರೀಶೈಲ ಬಿರಾದಾರ, ಸಂಜಯಸಿಂಗ್ ರಜಪೂತ ಹಾಗೂ ನಜೀರ ಚೋರಗಸ್ತಿ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.