ವಾರ್ಷಿಕ ಸ್ನೇಹ ಸಮ್ಮೇಳನ: ‘ಜ್ಞಾನಶ್ರೀ ಉತ್ಸವ’ಕ್ಕೆ ದೀಪ ಬೆಳಗಿಸಿ ಚಾಲನೆ
ಕಾಗವಾಡ 02: ನಾಲ್ಕು ದಶಕಗಳ ಹಿಂದೆ ನಗರ ಪ್ರದೇಶಗಳಿಗೆ ಸಿಮೀತವಾಗಿದ್ದ ಇಂಗ್ಲೀಶ್ ಶಾಲೆಗಳ ಕಾಲದಲ್ಲಿ ಶಿರಗುಪ್ಪಿಯಂತಹ ಗ್ರಾಮೀಣ ಭಾಗದಲ್ಲಿ ಇಂಗ್ಲೀಶ ಶಾಲೆ ಪ್ರಾರಂಭಿಸಿ, ಮಕ್ಕಳಿಗೆ ಇಂಗ್ಲೀಶ್ ಶಿಕ್ಷಣ ನೀಡುವ ದೂರದೃಷ್ಟಿಯೊಂದಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿರುವ ದಿ. ಎಸ್.ಕೆ. ಶೆಟ್ಟಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆಂದು ಡೈಟ್ ಕಾಲೇಜಿನ ಉಪನ್ಯಾಸಕ ಮಹಾವೀರ ಬಿಲ್ ತಿಳಿಸಿದ್ದಾರೆ.
ಅವರು, ಶುಕ್ರವಾರ ದಿ. 31 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಜ್ಞಾನಪೀಠ ಶಿಕ್ಷಣ ಸಮಿತಿಯ ಆಚಾರ್ಯಾ ವಿದ್ಯಾಸಾಗರ ಇಂಗ್ಲೀಶ ಮಾಧ್ಯಮ ಪ್ರಾಥಮಿಕ ಮತ್ತು ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ‘ಜ್ಞಾನಶ್ರೀ ಉತ್ಸವ’ಕ್ಕೆ ದೀಪ ಬೆಳಗಿಸಿ, ಚಾಲನೆ ನೀಡಿ ಮಾನತಾಡುತ್ತಿದ್ದರು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಟ್ಟಿ ವಹಿಸಿದ್ದರು. ಉದ್ಯಮಿ ಎ.ಸಿ. ಶೆಟ್ಟಿ, ಮುಖಂಡ ಅಭಯ ಅಕಿವಾಟೆ, ದರೆಪ್ಪಾ ಕುಸನಾಳೆ, ವಿದ್ಯಾಸಾಗರ ಚೌಗುಲೆ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಸಂಸ್ಥೆಯ ಸಚಿವ ವ್ಹಿ.ಎಸ್. ಶೆಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಳೆದ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಪ್ರೌಡಶಾಲೆಯ ಮುಖ್ಯೋದ್ಯಾಪಕ ಎಸ್.ಎಸ್. ವಂಟಗೂಡೆ, ಪ್ರಾಥಮಿಕ ಶಾಲೆಯ ಮುಖ್ಯೋದ್ಯಾಪಕ ಎಸ್.ಕೆ. ಮಾಂಜರೆ ಸೇರಿದಂತೆ ಶಿಕ್ಷಕ ವೃಂದದವರು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.