ಸಿಟಿಇ ಸಂಸ್ಥೆಯ ಮೈದಾನದಲ್ಲಿ ಗಮನ ಸೆಳೆದ ಅನ್ನೋತ್ಸವ

Annotsava attracted attention in the ground of CTE institution

ಸಿಟಿಇ ಸಂಸ್ಥೆಯ ಮೈದಾನದಲ್ಲಿ ಗಮನ ಸೆಳೆದ ಅನ್ನೋತ್ಸವ 

ಚಿಕ್ಕೋಡಿ 11: ಚಿಕ್ಕೋಡಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿಟಿಇ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ಅನ್ನೋತ್ಸವ ವಿವಿಧ ಬಗೆ ಬಗೆ ಖಾದ್ಯಗಳ ಘಮಲ ಘಮ್ಮೇಂದು ಪರಿಮಳ ಪಸರಿಸಿದವು. 

ಆಹಾರ ಮೇಳದಲ್ಲಿ ಉತ್ತರ ಕರ್ನಾಟಕ ಗಿರಮಿಟ್, ಮಿರ್ಚಿ ಬಜಿ, ತುಪ್ಪ ಸವರಿದ ಶೇಂಗಾ ಹೋಳಿಗೆ,  ಸಜ್ಜಿ ರೋಟ್ಟಿ, ಜುನಕಾ, ಪಾನಿ ಪುರಿ, ದಾಬೇಲಿ, ಬೆಣ್ಣೆ ದೋಸಾ, ಸಮೋಸಾ ಸೇರಿದಂತೆ ಮುಂತಾದ ಖಾಧ್ಯಗಳು ಅನಾವರಣಗೊಂಡವು. 

ಇಂದಿರಾ ನಗರದ ಸ್ವಾಮಿ ಸಮರ್ಥ ತಯಾರಿಸಿದ ಕಾಂದಾ ಭಜ್ಜಿ. ಮಹಾಲಕ್ಷ್ಮೀ ಪೂಜೇರಿ ಮತ್ತು ಸುಮನ್ ಪಾಟೀಲ ತಯಾರಿಸಿದ ದಾಭೆಲಿ ಮತ್ತು ಬೆಣ್ಣೆ ದೋಸೆಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಬಾಯಿ ಚಪ್ಪರಿಸಿ ಸವಿದರು.  

ವಿದ್ಯಾರ್ಥಿ ಸಪ್ಪಲ್ಲ ಪೀರಜಾದೆ ತಯಾರಿಸಿದ ಮಿಲ್ಕಶೇಕ್ ರುಚಿಯಾಗಿತ್ತು.ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ, ಉಪಾಧ್ಯಕ್ಷ ವಿಜಯ ಮಾಂಜ್ರೇಕರ, ನಿರ್ದೇಶಕರಾದ ಅರುಣ ಕುಲಕರ್ಣಿ, ವಿ.ಟಿ.ಶೆಡಬಾಳೆ, ಸಂಜಯ ಅಡಕೆ, ಓಂಕಾರ ಕುಲಕರ್ಣಿ, ಸಂಕೇತ ಮಾಂಜ್ರೇಕರ, ಆಡಳಿತಾಧಿಕಾರಿ ಎಸ್‌.ಜಿ.ಜಹಾಗೀರದಾರ, ಜಂಟಿ ಕಾರ್ಯದರ್ಶಿ ಮಿಥುನ ದೇಶಪಾಂಡೆ ಮುಂತಾದವರು ಇದ್ದರು.