ಅನ್ನ ದಾನವು ಶ್ರೇಷ್ಠವಾದದ್ದು: ಎಸ್.ಆರ್. ಹೆಗಡೆ

ಮೂಡಲಗಿ 08: ಮನುಷ್ಯನಿಗೆ ಗಾಳಿ, ನೀರಿನ ಅವಶ್ಯಕತೆಯಂತೆ ಅನ್ನ ಸಹ ಅಮೂಲ್ಯವಾಗಿದೆ ಎಂದು ಎಸ್.ಆರ್. ಹೆಗಡೆ ಹೇಳಿದರು. 

     ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ರೋಗಿಗಳಿಗೆ ಏರ್ಪಡಿಸಿದ್ದ 37ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅನ್ನದಾನ ಮತ್ತು ಧರ್ಮ ಕಾರ್ಯಗಳು ಪುಣ್ಯದ ಕೆಲಸವಾಗಿದ್ದು ಮನಸ್ಸಿಗೆ ನೆಮ್ಮದಿ ನೀಡುವಂತವು ಎಂದರು.

ಮೂಡಲಗಿಯ ಲಯನ್ಸ್ ಕ್ಲಬ್ದ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.

ಲಯನ್ಸ್ ಕ್ಲಬ್ ಪರಿವಾರ ಕಾರ್ಯದಶರ್ಿ ಶ್ರೀಶೈಲ್ ಲೋಕನ್ನವರ ತಮ್ಮ ಪುತ್ರಿ ದಿವ್ಯಾಳ 18ನೇ ವರ್ಷದ ಜನ್ಮ ದಿನ ಅಂಗವಾಗಿ ರೋಗಿಗಳಿಗೆ ಅನ್ನದಾಸೋಹ ಏರ್ಪಡಿಸಿದ್ದರು. 

ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಅತಿಥಿಯಾಗಿದ್ದರು.  

ಗಿರೀಶ ಆಸಂಗಿ ಪ್ರಾಸ್ತಾವಿಕ ಮಾತನಾಡಿದರು. 

ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷ ವೆಂಕಟೇಶ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ಅಬ್ದುಲ್ ಬಾಗವಾನ, ಶಿವಾನಂದ ಗಾಡವಿ, ಮಹಾಂತೇಶ ಹೊಸೂರ, ಚೇತನ ನಿಶಾನಿಮಠ ಇದ್ದರು.   

ಅನ್ನದಾಸೋಹದಲ್ಲಿ ಸಮುದಾಯ ಆರೋಗ್ಯ ಕೇಂದ್ರದ 400ಕ್ಕೂ ಅಧಿಕ ಸಂಖ್ಯೆಯ ಒಳ ಮತ್ತು ಹೊರರೋಗಿಗಳು ಭಾಗವಹಿಸಿದ್ದರು. 

ಬಾಲಶೇಖರ ಬಂದಿ ನಿರೂಪಿಸಿದರು