ಗದಗ 09: ಅನಿಶ್ಚಿತ ಮಳೆ, ಹವಾಮಾನದ ವೈಪರಿತ್ಯ, ಮಳೆಯಾಗಿ ಬೇಳೆ ಬಂದರೂ ಮಾರುಕಟ್ಟೆ ಉತ್ತಮ ಬೆಲೆ ಸಿಗದೇ ಕೃಷಿ ಇಂದು ಜೂಜಾಟ ತೆರವಾಗಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಪಶುಸಂಗೋಪನೆಯ ಉಪಕಸಬು ಅವರ ಆಥರ್ಿಕ ಸಬಲೀಕರಣದ ಉತ್ತಮ ಉಪಾಯವಾಗಿದ್ದು ಪಶು ವೈದ್ಯರು ರೈತರಿಗೆ ರಾಜ್ಯ ಸಕರ್ಾರದ ಹಲವಾರು ಯೋಜನೆಗಳ ಸೌಲಭ್ಯಗಳ ಸದುಪಯೋಗ ಕುರಿತು ಮನವರಿಕೆ ಅಗತ್ಯವಿದೆ ಎಂದು ರಾಜ್ಯದ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವರಾದ ವೆಂಕಟ್ರಾವ್ ನಾಡಗೌಡ ನುಡಿದರು.
ಗದಗ ಹೊಂಬಳ ರಸ್ತೆಯಲ್ಲಿರುವ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು. ರೈತರ ಆತ್ಮಹತ್ಯ ಕಾರಣಗಳ ಸಮೀಕ್ಷೆಯೊಂದರ ರೀತ್ಯ ಪೂರಕ ಕಸಬುಗಳನ್ನು ಹೊಂದಿರುವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಕುರಿ, ಕೋಳಿ ಹಾಗೂ ಮೀನುಗಾರಿಕೆ ಸಾಕಾಣಿಕೆ ಬಹುಪಯೋಗಿಯಾಗಿದ್ದು ರೈತರ ಎಂತಹ ವಾತಾವರಣದಲ್ಲೂ ಕೂಡಾ ಆಥರ್ಿಕ ಸಬಲೀಕರಣಕ್ಕೆ ಹೊಸ ಅವಕಾಶ ಒದಗಿಸುತ್ತವೆ. ಸಾಂಪ್ರದಾಯಿಕ ಕೃಷಿಯಲ್ಲಿ ಇದ್ದ ಪಶು ಸಂಪತ್ತು ಯಾಂತ್ರಿಕರಣದಿಂದಾಗಿ ನಶಿಸುತ್ತಿದ್ದು ಇದನ್ನು ಪರಿವತರ್ಿಸಿ ಅವರ ಪಶುಸಂಪತ್ತಿನ ವೃದ್ದಿಗೆ ಪಶುವೈದ್ಯಕೀಯ ವಿದ್ಯಾಲಯಗಳು, ವೈದ್ಯರು ಹಾಗೂ ಇಲಾಖೆಗಳು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಅಗತ್ಯವಾದಷ್ಟು ಪಶುವೈದ್ಯರು ರಾಜ್ಯದಲ್ಲಿ ಇಲ್ಲ. ಸಕರ್ಾರಿ ಸೇವೆಗೆ ಸೇರಿದ ವೈದ್ಯರು ಬೇರೆ ಇಲಾಖೆಗಳ ಅಧಿಕಾರಿಗಳಾಗಿ ನಿಯೋಜನೆಗೊಂಡಿರುವುದು, ನಗರದಲ್ಲಿ ಪಶುವೈದ್ಯ ವೃತ್ತಿ ಹೆಚ್ಚು ಲಾಭದಾಯಕವಾಗಿರುವುದು ಇಲಾಖೆಯಲ್ಲಿನ ಪಶುವೈದ್ಯರ ಕೊರತೆಗೆ ಕಾರಣಗಳಾಗಿವೆ. ಪಶುವೈದ್ಯಕೀಯ ಶಿಕ್ಷಣಕ್ಕೆ ಬರುವ ವಿದ್ಯಾಥರ್ಿಗಳು ಹಳ್ಳಿಗಳಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸುವ ಮನೋಭಾವ ಉಳ್ಳವರಾಗಿದ್ದರೆ ರೈತಾಪಿ ಜನಕ್ಕೆ ಅದರಿಂದ ಹೆಚ್ಚು ಪ್ರಯೋಜನವಾಗಲಿದೆ ಎಂದು ಸಚಿವರು ನುಡಿದರು. ಗದಗ ಪಶುವೈದ್ಯಕೀಯ ವಿದ್ಯಾಲಯದ ಮೊದಲನೇ ವರ್ಷದ ವಿದ್ಯಾಥರ್ಿಗಳಿಗೆ ಭಾರತೀಯ ಪಶು ವೈದ್ಯಕೀಯ ಸಮಿತಿಯ ಮನ್ನಣೆ ಸಿಗದಿರುವ ಕುರಿತು ಅನ್ಯಥಾ ಆಂತಕಗೊಳ್ಳಬಾರದು ಆ ಮನ್ನಣೆ ಸಿಗುವಂತೆ ನೋಡಿಕೊಳ್ಳುವದು ಸಕರ್ಾರದ ಜವಾಬ್ದಾರಿಯಾಗಿದೆ. ವಿದ್ಯಾಲಯಕ್ಕೆ ಸುಸಜ್ಜಿತ ಗ್ರಂಥಾಲಯ, 2ನೇ ಹಂತದ ಮೂಲಭೂತ ಅಭಿವೃದ್ಧಿಗಾಗಿ ಈಗಾಗಲೇ ಸಕರ್ಾರಕ್ಕೆ ಸಲ್ಲಿಕೆಯಾದ 60 ಕೋಟಿ ರೂ.ಗಳ ಪ್ರಸ್ತಾವನೆ ಮಂಜುರಾತಿ ಕುರಿತು ಭರವಸೆ ನೀಡಿದ ಸಚಿವರು ಪಶು ಮಹಾವಿದ್ಯಾಲಯದ ಮೂಲಭೂತ ಸೌಲಭ್ಯಕ್ಕೆ ಅನುಗುಣವಾಗಿ ಪ್ರತಿ ವರ್ಷ ಪ್ರವೇಶ ಪಡೆಯುವ ವಿದ್ಯಾಥರ್ಿಗಳ ಸಂಖ್ಯೆಯನ್ನು ಈಗಿರುವ 45ಕ್ಕಿಂತ ಹೆಚ್ಚಿಗೆ ಮಾಡುವ ಚಿಂತನೆಯಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಉತ್ತಮ ವಿದ್ಯಾರ್ಜನೆಯ ಸಾಮಥ್ರ್ಯವೃದ್ಧಿಗೆ ಆ ಮೂಲಕ ಈ ಭಾಗದ ರೈತರಿಗೆ ಹೆಚ್ಚಿನ ಸೌಲಭ್ಯ ನೀಡಲು ಅನುಕೂಲವಾಗುವ ಹಿತದೃಷ್ಟಿಯಿಂದ 2ನೇ ಹಂತದ ಮೂಲಭೂತ ಸೌಕರ್ಯ ವೃದ್ಧಿಗಾಗಿ 60 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಕರ್ಾರಕ್ಕೆ ಸಲ್ಲಿಸಿದ್ದು ಅದರ ಮಂಜುರಾತಿಗೆ ಆಗ್ರಹಿಸಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗದಗ ಜಿಲ್ಲೆಯಲ್ಲಿನ ಶಿಕ್ಷಣ ಕೇಂದ್ರಗಳ ಸಹಕಾರದೊಂದಿಗೆ ಗದಗ ಪಶುವ್ಯದ್ಯಕೀಯ ಮಹಾವಿದ್ಯಾಲಯವು ರ್ಯತರ ಕೃಷಿ ಹಾಗೂ ಪೂರಕ ಆಥರ್ಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಬೇಕಿದೆ ಎಂದು ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.
ಸಚಿವ ವೆಂಕಟ್ರಾವ್ ನಾಡಗೌಡ ಹಾಗೂ ಶಾಸಕ ಎಚ್.ಕೆ.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2ಮಹಾವಿದ್ಯಾಲಯದ ಪ್ರಥಮ ಸಂಸ್ಥಾಪನಾ ನೆನಪಿನ ಕಲರವ ಸ್ಮರಣ ಸಂಚಿಕೆಯನ್ನು ಬಿಡುಗಡೆಯಾಯಿತು.
ಗದಗ ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ಜಿ.ಪಂ. ಸದಸ್ಯರುಗಳಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಬೀದರ ಕನರ್ಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಡಿ. ನಾರಾಯಣಸ್ವಾಮಿ, ವ್ಯವಸ್ಥಾಪಕ ಮಂಡಳಿ ಸದಸ್ಯರುಗಳಾದ ಈರೇಶ ಅಂಚಟಗೇರಿ, ಲುಂಬಿನಿ ಗೌತಮ, ಪ್ರೊ. ಕೆ.ವೆಂಕಟರೆಡ್ಡಿ, ಟಿ.ಮುಕುಂದ ವಮರ್ಾ, ಕುಲಸಚಿವ ಪ್ರೊ. ಹೆಚ್.ಆರ್.ವಿ.ರೆಡ್ಡಿ ಹಾಗೂ ಗದಗ ಪಶುವ್ಯದ್ಯಕೀಯ ಮಹಾವಿದ್ಯಾಲಯದ ಡೀನ ಪ್ರೊ.ಆರ್.ನಾಗರಾಜ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿಗಳು ಹಾಗೂ ಗಣ್ಯರು, ನಿವೃತ್ತ ಅಧಿಕಾರಿಗಳು ಸಮಾರಂಭದಲ್ಲಿದ್ದರು.