ಅನಸೂಯಾ ಮದನಬಾವಿಗೆ ರಾಣಿ ಅಬ್ಬಕ್ಕ ದೇವಿ ರಾಜ್ಯ ಪ್ರಶಸ್ತಿ ಪ್ರದಾನ
Anasuya Madanbavi conferred with Rani Abbakka Devi State Award
ಅನಸೂಯಾ ಮದನಬಾವಿಗೆ ರಾಣಿ ಅಬ್ಬಕ್ಕ ದೇವಿ ರಾಜ್ಯ ಪ್ರಶಸ್ತಿ ಪ್ರದಾನ
ಬೆಳಗಾವಿ 09: ಸವದತ್ತಿ ತಾಲೂಕಿನ ಸಿಂದೋಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನಸೂಯಾ ಶಂಕರ್ಪ ಮದನಬಾವಿಯವರಿಗೆ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ ಆಶ್ರಯದಲ್ಲಿ ಕಲಬುರಗಿ ಯಲ್ಲಿ ಡಾ ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್ ನಲ್ಲಿ ಜರುಗಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿಯನ್ನು ಗಣ್ಯರು ನೀಡಿ ಗೌರವಿಸಿದರು. ವಿಧಾನಪರಿಷತ್ ಸದಸ್ಯರಾದ ಶಶಿಲ್ ನಮೋಸಿ, ಕಲಬುರಗಿ ಅಕ್ಕಮಹಾದೇವಿ ಆಶ್ರಮದ ಮಾತೋಶ್ರಿ ಪ್ರಭು ತಾಯಿ, ರಾಜ್ಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರಮಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಡಾ. ಶೈಲಜಾ, ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ನಂದಿನಿ ಸನಬಾಳ್, ಬೆಳಗಾವಿ ಜಿಲ್ಲೆಯ ಶಿಕ್ಷಕ ಸಾಹಿತಿ ವಾಯ್.ಬಿ.ಕಡಕೋಳ, ಮದನಬಾವಿಯವರ ಪತಿ ರಾಜು ಈರ್ಪ ಹಟ್ಟಿ, ಸಹೋದರನಾದ ಸಮಾಜ ಸೇವಕ ಸೋಮಲಿಂಗ ಮದನಬಾವಿ, ಆಕಾಶವಾಣಿ ಕಾರ್ಯ ಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ, ಜಿಲ್ಲಾ, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಂಡಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಡಾ.ರವಿಕಾಂತಿ.ಕ್ಯಾತನಾಳ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು . ಉಪಸಂಪಾದಕಿ ರಶ್ಮಿ ಹಾಗೂ ಕಲಬುರಗಿ ಜಿಲ್ಲೆಯ ಜಿಲ್ಲಾ ಆಪರ ಸರಕಾರಿ ವಕೀಲ ಶರಣಮ್ಮ ಪಾಟೀಲ ಉಪನ್ಯಾಸ ನೀಡಿದರು. ನಾಗರತ್ನ ಹಾಗೂ ರೇಣುಕಾ ನಿರೂಪಣೆ ಮಾಡಿದರು. ಜಮುನಾ ಟಿಳೆ ವಂದಿಸಿದರು.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 