ಬಾಗಲಕೋಟೆ: ಶ್ರೀಕ್ಷೇತ್ರ ಯಲಗೂರದ ಯಲಗೂರೇಶ ದೇವಸ್ಥಾನ ಟ್ರಸ್ಟ ಸಮಿತಿಯ ಅಧ್ಯಕ್ಷರಾಗಿ ನಗರದ ಬ.ವಿ.ವ. ಸಂಘದ ಲೆಕ್ಕಾಧಿಕಾರಿ ಅನಂತ ಓಂಕಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೇವಸ್ಥಾನ ಸಮಿತಿ, ಅನ್ನದಾಸೋಹ ಸಮಿತಿ, ಜಾತ್ರಾ ಸಮಿತಿಯ ಸದಸ್ಯರು, ದೇವಸ್ಥಾನದ ಭಕ್ತರು ಹಾಗೂ ಗ್ರಾಮದ ಪ್ರಮುಖರು ಸೇರಿದ್ದ ಸಭೆಯಲ್ಲಿ ಓಂಕಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಅಧ್ಯಕ್ಷರಾಗಿದ್ದ ನಾರಾಯಣರಾವ ಪರ್ವತಿಕರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಓಂಕಾರ ಅವರು ಆಯ್ಕೆಯಾಗಿದ್ದಾರೆ.
ದೇವಸ್ಥಾನದ ಟ್ರಸ್ಟ ಗುರುರಾಜ ಪರ್ವತಿಕರ, ಗುಂಡು ಕುಲಕಣರ್ಿ, ಗುಂಡಪ್ಪ ಪೂಜಾರ, ಶ್ಯಾಂ ಪಾತ್ರದ, ಚನ್ನಬಸು ಚನ್ನಿಗಾವಿ, ಶ್ರೀಶೈಲ ಡಂಗಿ, ಭೀಮಣ್ಣ ಪೂಜಾರ, ಯಲಗೂರದಪ್ಪ ಪೂಜಾರ, ಭೀಮಣ್ಣ ಅವಟಗೇರ, ಲಕ್ಷ್ಮಣಗೌಡ ಪಾಟೀಲ, ಬಸವರಾಜ ಜಿಗಣಿ, ಗುಂಡಪ್ಪ ತಳವಾರ, ಮಹಾಂತೇಶ ಡಂಗಿ, ಪ್ರಕಾಶ ಕಾರಿ, ಭೀಮಣ್ಣ ತಳವಾರ, ನಾರಾಯಣ ದಾಸರ ಉಪಸ್ಥಿತರಿದ್ದರು. ಓಂಕಾರ ಅವರ ಆಯ್ಕೆಯನ್ನು ಸ್ವಾಗತಿಸಿರುವ ವಿಶ್ವ ಮಧ್ವ ಮಹಾ ಪರಿಷತ್ ಅಧ್ಯಕ್ಷ, ನ್ಯಾಯವಾದಿ ಕೆ.ಎಸ್. ದೇಶಪಾಂಡೆ, ಶ್ರೀನಿಕೇತನ ಪತ್ತಿನ ಸಹಕಾರಿ ಸಂಘದ ಸ್ಥಾನಿಕ ನಿದರ್ೆಶಕ ಶ್ರೀನಿವಾಸ ಮನಗೂಳಿ, ಬಾಗಲಕೋಟೆ ಅರ್ಬನ ಬ್ಯಾಂಕ್ ಅಧ್ಯಕ್ಷ ಜಯಂತ ಕುರಂದವಾಡ, ವಿದ್ಯಾ ಪ್ರಸಾರಕ ಮಂಡಳದ ಕಾಯರ್ಾಧ್ಯಕ್ಷೆ ಶ್ರೀಲತಾ ಹೆರಂಜಲ, ಕಾರ್ಯದಶರ್ಿ ಸಂದೀಪ ಕುಲಕಣರ್ಿ, ಹಿರಿಯರಾದ ಎಸ್.ಬಿ. ಸತ್ಯನಾರಾಯಣ, ಸಿ.ಎನ್. ದಾಸ, ಶ್ರೀನಾಥ ಮಳಗಿ ಅವರುಗಳು ಓಂಕಾರ ಅವರನ್ನು ಅಭಿನಂದಿಸಿದ್ದಾರೆ.