ಲೋಕದರ್ಶನ ವರದಿ
ಬೆಳಗಾವಿ 21: ಭಾವಸಾರ ವ್ಹಿಜನ್ ಇಂಡಿಯಾ ಸಮಾಜ ಸೇವಾ ಸಂಸ್ಥೆಯ 14ನೇ ವಾಷರ್ಿಕ ಅಧಿವೇಶನ ಶಿವಮೊಗ್ಗಾ ನಗರದ 'ಪ್ರೇರಣಾ' ಕನವೆನಶನ್ ಸಭಾಗೃಹದಲ್ಲಿ ಇತ್ತೀಚೆಗೆ ಸಿದ್ದು ಮಾಳದಕರ ಇವರ ನೇತೃತ್ವದಲ್ಲಿ ಎರಡು ದಿನ ನಡೆದ ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬೆಳಗಾವಿ ಭಾವಸಾರ ಕ್ಷತ್ರಿಯ ಸಮಾಜದ ಪ್ರಮುಖರು ಪ್ರಸಿದ್ಧ ಇಂಜನೀಯರ, ಕ್ಷೇತ್ರ 101 ರ ಪ್ರಾಂತೀಯ ಸಮಾವೇಶದ ಚೇರಮನ್ ಹಾಗೂ ಸಮಾಜದ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ಅನುಪ ಜವಳಕರರವರಿಗೆ ಸಂಸ್ಥೆಯ ವತಿಯಿಂದ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾ.ವ್ಹಿ.ಇಂ. ಬೆಳಗಾವಿ ಕ್ಲಬ್ನ ಅಧ್ಯಕ್ಷ ಎಂ.ಆರ್. ಹಂಚಾಟೆರವರಿಗೆ ಗವ್ಹರ್ನರ್ಸ್ ಕಪ್, ಅದೇ ರೀತಿ ರೂಪೇಶರವರಿಗೆ ಬೆಸ್ಟ ಪ್ರೊಜೆಕ್ಟ ಡೈರೆಕ್ಟರ, ಸಾರಿಕಾ ಜವಳಕರರವರಿಗೆ ಬೆಸ್ಟ ಚೈಲ್ಡ ಸವರ್ಿಸ್ ಡೈರೆಕ್ಟರ ಅಸ್ಮಿತಾ ಗೋಜೆರವರಿಗೆ ಬೆಸ್ಟ ವ್ಹಿಜನ್ ಡೈರೆಕ್ಟರ್ ಮಹೇಶ ರಂಗದಳರವರಿಗೆ ಬೆಸ್ಟ ಕ್ಯಾಪ್ಟನ್ ಎಕ್ಸಟ್ರಾ ಆಡರ್ಿನಂ ಪ್ರೊಜೆಕ್ಟಗಾಗಿ ಹರಿಭಾವು ಸರೋದೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ತಮ ನೃತ್ಯ ಪ್ರದರ್ಶನಕ್ಕಾಗಿ ಎಸ್.ಜಿ. ಮಾಳದಕರ ದಂಪತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾವೇಶದಲ್ಲಿ ಭಾವಸಾರ ವ್ಹಿಜನ್ ಇಂಡಿಯಾದ ಸಂಸ್ಥಾಪಕರಾದ ಸಮಾಜ ಭೂಷಣ ನಾರಾಯರಾಣರಾವ ತಾತೂಸ್ಕರ, ಮಹಾಸಭೆಯ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಸಮಾಜದ ಸಾವಿರಾರು ಬಂಧು ಭಗಿನಿಯರು ಉಪಸ್ಥಿತರಿದ್ದರು.