ದೆಹಲಿ ಬಿಜೆಪಿಗೆ ಅಭೂತ ಪೂರ್ವ ಗೆಲುವು: ಮಾನಸಿಂಗ್ ಹರ್ಷ
ತಾಳಿಕೋಟಿ 09: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಪಡೆದು ಬಿಜೆಪಿ ಪಕ್ಷವು ಅಭೂತ ಪೂರ್ವ ಗೆಲುವು ಸಾಧಿಸಿದಕ್ಕಾಗಿ ಯುವ ಮುಖಂಡ ಮಾನಸಿಂಗ್ ಕೊಕಟನೂರ ಹರ್ಷ ವ್ಯಕ್ತ ಪಡಿಸಿದ್ದಾರೆ.
ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸಿದ ಆಪ್ ಪಕ್ಷವು ಜನರ ಸಮಸ್ಯೆಗಳಿಗೆ ಸ್ಪಂದಿಸದೆ,ದೊಡ್ಡ ದೊಡ್ಡ ಹಗರಣಗಳಲ್ಲಿ ನಿರತವಾಗಿತ್ತು ಇದರಿಂದ ಸಾಮಾನ್ಯ ಜನರು ರೋಸಿ ಹೋಗಿದ್ದರು. ಅವರ ಸಮಸ್ಯೆಗಳಿಗೆ ಸ್ಪಂದಿಸದ ಈ ಕೆಟ್ಟ ಸರ್ಕಾರವನ್ನು ತೊಲಗಿಸುವ ಉದ್ದೇಶದಿಂದ ಅವರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದರು ಇದರ ಪರಿಣಾಮವಾಗಿ ಆಫ್ ನೆಲಕಚ್ಚಿದೆ. ಇದರ ನಾಯಕ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸ್ವತಃ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಪರವೇಶ್ ವರ್ಮಾ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ, ಮಾಜಿ ಉಪ ಮುಖ್ಯಮಂತ್ರಿ ಮನೀಶ ಸಿಸೋಡಿಯಾ ಕೂಡಾ ಚುನಾವಣೆಯಲ್ಲಿ ಸೋತಿದ್ದಾರೆ, ಬಿಜೆಪಿ ಪಕ್ಷದ ಈ ಅಭೂತಪೂರ್ವ ಗೆಲುವಿಗೆ ಪಕ್ಷದ ಮುಖಂಡರ ಉತ್ತಮ ತಂತ್ರಗಾರಿಕೆ ಹಾಗೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವದ ವರ್ಚಸ್ಸು ಬಹುಅಂಶ ಕಾರಣವಾಗಿದೆ, ಈ ಐತಿಹಾಸಿಕ ಗೆಲುವಿಗೆ ಕಾರಣಿಕರ್ತರಾದ ಪಕ್ಷದ ಎಲ್ಲ ಮುಖಂಡರಿಗೂ ಅಭಿನಂದಿಸುತ್ತೇನೆ ಎಂದರು.