ಗೋಗೇರಿಯವರ ಬದುಕು-ಬರಹ ಅವಲೋಕನ ಹಾಗೂ ‘ಕವಿಗೋಷ್ಠಿ’ ಕಾರ್ಯಕ್ರಮ
ಧಾರವಾಡ 20 : ಕರ್ನಾಟಕ ವಿದ್ಯಾವರ್ಧಕ ಸಂಘವು, ಎಂ. ಡಿ. ಗೋಗೇರಿದತ್ತಿಅಂಗವಾಗಿ ದಿನಾಂಕ: 21-1-2025 ರಂದು ಮಂಗಳವಾರ ಸಂಜೆ5-30ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ‘ಎಂ. ಡಿ. ಗೋಗೇರಿಯವರ ಬದುಕು-ಬರಹ ಅವಲೋಕನ ಹಾಗೂ ‘ಕವಿಗೋಷ್ಠಿ’ ಕಾರ್ಯಕ್ರಮ ಆಯೋಜಿಸಿದೆ.
ಧಾರವಾಡಆಕಾಶವಾಣಿ ನಿಲಯ ನಿರ್ದೇಶಕರಾದಡಾ.ಬಸು ಬೇವಿನಗಿಡದ ‘ಗೋಗೇರಿಅವರ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ಹಾಗೂಧಾರವಾಡ ನಗರ ಮಾಪನಕಚೇರಿತಪಾಸಕರು, ಹಿರಿಯ ಸಾಹಿತಿಗಳು ಎ.ಎ. ದರ್ಗಾ ‘ಎಂ.ಡಿ.ಗೋಗೇರಿಅವರ ಸಾಹಿತ್ಯದಲ್ಲಿ ಹಾಸ್ಯ ವಿಡಂಬಣೆ’ ಕುರಿತುಉಪನ್ಯಾಸ ನೀಡುವರು.
ಧಾರವಾಡದ ಹಿರಿಯ ಮಕ್ಕಳ ಸಾಹಿತಿ ನಿಂಗಣ್ಣಕುಂಟಿ(ಇಟಗಿ) ಅಧ್ಯಕ್ಷತೆ ವಹಿಸುವರು.
ಹುಬ್ಬಳ್ಳಿಯ ತೌಶೀಫ್ ಗೋಗೇರಿ ಉಪಸ್ಥಿತರಿರುವರು.
ಕವಿಗೋಷ್ಠಿಯಲ್ಲಿ ಶಿವು ಬನ್ನೂರ, ಶಾಹೀನಬಾನು ಬಳ್ಳಾರಿ, ಅಕ್ಬರಲಿ ಸೋಲಾಪೂರ, ಆರ್.ಎನ್. ದರ್ಗಾದವರ, ಸುಹಾಸಿನಿ ಕುಕಡೋಳ್ಳಿ, ಶ್ರೀನಿವಾಸ ಪಾಟೀಲ, ಜಯಶ್ರೀ ಪಾಟೀಲ, ಸುಧಾಕಬ್ಬೂರ, ಅಶ್ಪಾಕ ಪೀರಜಾದೆ, ಲೈಲಾ. ಜಿ ಭಾಗವಹಿಸುವರು.ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿಕೋರಿದ್ದಾರೆ.ಎಂ. ಡಿ. ಗೋಗೇರಿಯವರು ದಿನಾಂಕ 21-1-1942ರಲ್ಲಿ ಗೋಗೇರಿ ಗ್ರಾಮದಲ್ಲಿ ಜನಿಸಿದರು. ಸರ್ವಧರ್ಮಗಳ ಆರಾಧಕರಾಗಿದ್ದರು. ಅವರ ಸಹೃದಯತೆ, ಸೌಜನ್ಯ ಶೀಲತೆ, ಹಿತಮಿತ ನುಡಿಗಳು, ಕಾರ್ಯತತ್ಪರತೆಗಳು ಇವರನ್ನು ಯಾವುದೇ ಒಂದು ಜನಾಂಗಕ್ಕೆ ಸೀಮಿತಗೊಳಿಸದೆ ಒಬ್ಬ ಮಾನವತಾವಾದಿ ಎಂದು ಪರಿಗಣಿಸಲ್ಪಡುವಂತೆ ಮಾಡುತ್ತದೆ.ಗೋಗೇರಿ ಅವರು ವ್ಯಕ್ತಿಗಳೊಂದಿಗೆ, ಸಮಾಜದೊಂದಿಗೆ ಕಂಡುಕೊಂಡದಾರಿ ಶರಣರದ್ದಾಗಿದೆ.ಹಿತಮಿತ ನುಡಿಗಳು, ಕಾರ್ಯತತ್ಪರತೆಗಳು ಇವರನ್ನು ಯಾವುದೇ ಒಂದು ಜನಾಂಗಕ್ಕೆ ಸೀಮಿತಗೊಳಿಸದೆ ಒಬ್ಬ ಮಾನವತಾವಾದಿ ಎಂದು ಪರಿಗಣಿಸಲ್ಪಡುವಂತೆ ಮಾಡುತ್ತದೆ. ಗೋಗೇರಿ ಅವರು ವ್ಯಕ್ತಿಗಳೊಂದಿಗೆ, ಸಮಾಜದೊಂದಿಗೆ ಕಂಡುಕೊಂಡದಾರಿ ಶರಣರದ್ದಾಗಿದೆ. ಕನ್ನಡದ ಪ್ರಜ್ಞೆ-ಪರಿಸರ-ಜೀವನ ಶೈಲಿಗೆ ಹೊಂದಿಕೊಂಡು ವಿನಯ-ಓನ್ನತ್ಯಗಳಿಂದ ಅರಳಿದ “ಬಯಲು ಸೀಮೆಯ ಬೆಳ್ಳಿಚೇತನ” ಎಂ.ಡಿ.ಗೋಗೇರಿ ಅವರು ಕನ್ನಡ ನೆಲದ ಜಾನಪದ ಗಟ್ಟಿ ಪದರಿನ ಸತ್ವಯುತ ಕವಿ. ಸ್ವಾತಂತ್ರೋತ್ತರಕಾಲದರಮ್ಯ ನವ್ಯಗಳ ಮಧ್ಯಂತರದ ಕೂಡುದಾರಿಯಲ್ಲಿ ಸಾಹಿತ್ಯ ರಚಿಸಿದವರು.ಇವರ ಸಾಹಿತ್ಯದ ಅಂತರಾಳಕ್ಕೆ ಇಳಿದಾಗ, ಜೀವನ, ಪರಿಸರ, ಶಿಕ್ಷಕ ವೃತ್ತಿಯ ಬದುಕು, ಆರ್ಥಿಕವಾಗಿ ಸಾಮಾನ್ಯ ಮನೆತನದ ಸರಳ ಜೀವನ, ಕರುಳು-ಕಕ್ಕುಲಾತಿಯಿಂದ ತುಂಬಿದ ನೈಜ ಮಾತುಗಳು ಕಂಡು ಬರುತ್ತವೆ. ಹಾಗೆಯೇ ಭಾವೈಕ್ಯತೆ, ನಿರಂತರ ಹೋರಾಟದ ಕ್ರೀಯಾಶೀಲ ಬದುಕಿನ ಅಶೋತ್ತರಗಳು, ನೋವು-ನಲಿವು, ನೆಮ್ಮದಿ ತುಂಬಿದ ಸರಳ ಬದುಕು.ಅಂತೆಯೇಅವರ ಸಾಹಿತ್ಯೋದ್ಯಮವು ಅಷ್ಟೇ ನೈಜ, ಸುಂದರ. ತೆರೆದಿಟ್ಟ ಕನ್ನಡಿಯಾದ ಇವರ ಬದುಕಿನ ಆಳಗಳಲ್ಲಿ ಮುಗ್ಧ-ಮಧುರತೆ-ಅಶೋತ್ತರ ಬೇರುಗಳು ಒಂದೊಂದಾಗಿ ಕಾಣಸಿಗುತ್ತವೆ. ಒಟ್ಟು 35 ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. 2010 ರಲ್ಲಿ ಈ ದತ್ತಿ ಸ್ಥಾಪಿಸಿದ ಅವರು ದಿನಾಂಕ 24-4-2021 ರಂದು ನಿಧನರಾದರು.