ನಿರಂತರ ಕಲಿಕೆಗೆ ಪೂರಕ ವಾತಾವರಣ , ಕಲ್ಪಿಸಲು ಮುಂದಾಗಬೇಕು - ರಾಮಸುಂದರ್

An environment conducive to continuous learning should be created - Ramasunder

ನಿರಂತರ  ಕಲಿಕೆಗೆ ಪೂರಕ ವಾತಾವರಣ , ಕಲ್ಪಿಸಲು ಮುಂದಾಗಬೇಕು - ರಾಮಸುಂದರ್ 

ರಾಣೆಬೆನ್ನೂರ 06:  ಕಲಿಕೆಯಲ್ಲಿ ನಿಧಾನ ಮತ್ತು ಹಿಂದುಳಿದ ಮಕ್ಕಳು ಹರಸಾಹಸ ಪಡುತ್ತಿದ್ದರೆ ಅಂತಹ ಮಕ್ಕಳನ್ನು ಒಟ್ಟಿಗೆ ಸೇರಿಸಿ ಶಾಲೆಯಲ್ಲಿ ನಡೆಯುತ್ತಿರುವ ನಿರಂತರ ಕಲಿಕೆಯಲ್ಲಿ ಕಲಿಕೆಗೆ ಪೂರಕ ವಾತಾವರಣ , ಕಲ್ಪಿಸಲು ಮುಂದಾಗಬೇಕು ಎಂದು ಕ್ಷೇತ್ರ   ಶಿಕ್ಷಣಾಧಿಕಾರಿ ರಾಮಸುಂದರ್ ಅಡಿಗ ಹೇಳಿದರು.ಕ ಕ್ರಿಯಾಶೀಲತೆ - ಚಟುವಟಿಕೆ ವಾತಾವರಣ ನಿರ್ಮಾಣ ಮಾಡಿದರೆ ಅಂತಹ ಮಕ್ಕಳು ಸಹ ಸಂಪೂರ್ಣ ಕಲಿಕೆಗೆ ಒಳಪಡುತ್ತಾರೆ  ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಾಮಸುಂದರ  ಅಡಿಗ ಹೇಳಿದರು .ಅವರು ನಗರದ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಏರಿ​‍್ಡಸಲಾಗಿದ್ದ  ರಾಣೆಬೆನ್ನೂರ್ ಕ್ಲಸ್ಟರ್ - 3 ವ್ಯಾಪ್ತಿಯ ಶಾಲೆಗಳ, 1ರಿಂದ 5 ನೇ ತರಗತಿ ಓದುವ "  ಎಫ್‌. ಎಲ್‌. ಎನ್‌.  ಚಟುವಟಿಕೆಗಳ  ಮಕ್ಕಳ ಕಲಿಕಾ ಹಬ್ಬ " ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಪ್ರತಿಭೆಗೆ  ಪ್ರೋತ್ಸಾಹಿಸಿ ನೀರೆಸುವ ಮೂಲಕ ಅವರ ಪ್ರತಿಭಾ ಸಂಪನ್ನತೆ ಗುರುತಿಸಿ, ಗೌರವಿಸುವ ಕಾರ್ಯದಲ್ಲಿ ಎಲ್ಲ ಶಿಕ್ಷಕ ಸಮುದಾಯ ಮಾಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು..  

 ಕ್ಷೇತ್ರ ಸಮನ್ವಯ ಅಧಿಕಾರಿ ಎಲ್‌. ಮಂಜನಾಯ್ಕ ಅವರು ಮಾತನಾಡಿ ಕಲಿಕಾ ಹಬ್ಬದ ವಿಶೇಷತೆ ಕುರಿತು ವಿವರವಾಗಿ ತಿಳಿಸಿದರು.ಕಲಿಕಾ  ನಿರ್ವಹಣೆಯಲ್ಲಿ ಶಿಕ್ಷಕರ ಮತ್ತು ಮಕ್ಕಳ ಜವಾಬ್ದಾರಿ   ಕುರಿತು ಮತ್ತೋರ್ವ  ಅತಿಥಿಯಾಗಿದ್ದ, ಶಿಕ್ಷಕ ಬಿ. ಪಿ. ಶಿಡೇನೂರ ಉಪನ್ಯಾಸ ನೀಡಿದರು. ಎಸ್‌. ಡಿ. ಎಂ.ಸಿ.ಉಪಾಧ್ಯಕ್ಷ ಶ್ರೀಮತಿ ಶಿರಿನ್ ಭಾನು  ದಾವಣಗೆರೆ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ  ಬಿ. ಆರ್‌. ಪಿ.ಎನ್‌. ನಾಗರಾಜ,ಸಿ ಆರ್  ಪಿ.ಗಳಾದ ಬಿ. ಎಸ್‌. ಮೂಕನಗೌಡ್ರ , ರಾಜು ಉಕ್ಕುಂದ, ತುಳಜಾಭವಾನಿ , ಶಿಕ್ಷಕರಾದ ಎನ್ ಎಚ್ ಕರೆಗೌಡ್ರು ,ಹೆಚ್ ಎಂ ಸುತಾರ್ ,ಬಿ. ಎಸ್‌. ಕರಿಮಲ್ಲಣ್ಣನವರ , ಬಿ. ಕೆ. ಬಿಷ್ಟಣ್ಣನವರ, ಜಿ ಟಿ.ಬಾಲಣ್ಣನವರ, ಎಸ್‌. ಎಸ್‌. ಅಳಲಗೇರಿ , ಎಸ್,ಆರ್‌. ಉದಗಟ್ಟಿ, ಭಕ್ತ ವತ್ಸಲ , ಆನಂದ ಹಾವನೂರ, ಎಸ್‌.ಡಿ.ಎಂ. ಸಿ. ಯ ಸರ್ವ ಸದಸ್ಯರು ಸೇರಿದಂತೆ ಕ್ಲಸ್ಟರ್ ನ  ಶಿಕ್ಷಕ ವೃಂದ - ವಿದ್ಯಾರ್ಥಿಗಳು ಭಾಗವಹಿಸಿದ್ದರು , ಕವಿತಾ ಸಂಗಡಿಗರು ಪ್ರಾರ್ಥಿಸಿದರು.   ಮುಖ್ಯೋಪಾಧ್ಯಾಯ ಎಂ. ಎಫ್‌. ಈಳಿಗೇರ ಸ್ವಾಗತಿಸಿದರು , ಶಿಕ್ಷಕ ಎಚ್‌. ಆರ್‌.ಯಲಿವಾಳ  ನಿರೂಪಿಸಿ, ಎಂ. ಎಚ್‌. ಸಾವಂತಲವರ ವಂದಿಸಿದರು. ನಂತರ ಎಫ್‌. ಎಲ್‌. ಎನ್‌. ಚಟುವಟಿಕೆಗಳು ಮಕ್ಕಳಿಗಾಗಿ ಇದ್ದ .. ಗಟ್ಟಿ ಓದು, ಜ್ಞಾಪಕ ಶಕ್ತಿ, ಕೈಬರಹ. ರಸ ಪ್ರಶ್ನೆ, ಕಥೆ ಹೇಳುವುದು, ಸಂತೋಷದಾಯಕ ಗಣಿತ ಮುಂತಾದ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಜರುಗಿದವು. ಕಲಿಕಾ ಹಬ್ಬ ನಡೆಯುವ ಸಂದರ್ಭದಲ್ಲೇ ಅನೀರೀಕ್ಷಿತವಾಗಿ ಸಂದರ್ಶಿಸಿದ  ಹಾವೇರಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎಂ ಶಶಿಕಲಾ , ವಿಜಯಾ ಪಾಟೀಲ , ಬಿ ಆರ್ ಪಿ ರಾಜೇಶ  ಮುದ್ದಿ ಅವರುಗಳು ಸ್ಪರ್ದಾ ವಿಜೇತ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.