ಕೂಡ್ಲಿಗಿ28: ಗಂಗಾವತಿ ತಾಲೂಕಿನ ಹಂಪಿಬಳಿ ಇರುವ ಶ್ರೀಅಂಜನಾಧ್ರಿ ಬೆಟ್ಟದಲ್ಲಿರುವ ಆಂಜನೇಯ ಸ್ವಾಮಿ ದರ್ಶನವನ್ನು ಪಡೆಯಲು ರಾಜ್ಯ ಬೇರೆ ರಾಜ್ಯಗಳಿಂದಲೂ ನಿತ್ಯ ಆಗಮಿಸುತ್ತಿದ್ದು,ಇತ್ತೀಚೆಗೆ 85ವರ್ಷದ ಕೊಪ್ಪಳ ತಾಲೂಕಿನ ಬಸಮ್ಮ ಎಂಬ 85ವರ್ಷದ ವೃದ್ಧೆಯೋರ್ವಳು 575 ಮೆಟ್ಟಿಲುಗಳನ್ನು ಹತ್ತಿ ಆಂಜನೇಯಸ್ವಾಮಿ ದರ್ಶನ ಪಡೆಯುವ ಮೂಲಕ ಆಂಜನೇಯನ ಪವಾಡಕ್ಕೆ ಸಾಕ್ಷಿಯಾಗಿದ್ದಾಳೆ. ಹಣ್ಣು ಹಣ್ಣು ಮುದುಕಿಯೋರ್ವಳು ಬಿರು ಬಿಸಿನಲ್ಲಿ ಶ್ರೀರಾಮ ಹಾಗೂ ಆಂಜನೇಯನ ಜಪ ಮಾಡುತ್ತಾ ಮೆಟ್ಟಿಲುಗಳನ್ನು ಏರುತ್ತಿರುವುದನ್ನು ಗಮನಿಸಿದ ಇತರೆ ಭಕ್ತರೂ ಕೂಡ ಭಕ್ತಿ ಪರವಶರಾಗಿ ತುಂಬಾ ಉತ್ಸುಕರಾಗಿ ಮೆಟ್ಟಿಲುಗಳನ್ನು ಏರಹತ್ತಿದರು. ಇದು ಆಂಜನೇಯನ ಪವಾಡವೇ ಸರಿ ಎನ್ನುತ್ತಾರೆ ನಾಣ್ಯಾಪುರ ಬಾಗಳಿ ಗುರುಶಾಂತಮ್ಮ.
ಯುವಕರು ಮಾತ್ರವಲ್ಲ ವೃಧ್ದರು ಮಕ್ಕಳು ಕೂಡ ದೇವರ ದರ್ಶನಕ್ಕಾಗಿ ಮೆಟ್ಟಿಲುಗಳನ್ನು ಹತ್ತಿ ಬರುತ್ತಿರುವುದು ಎಂತಹವರನ್ನೂ ಸೋಜಿಗಗೊಳಿಸುತ್ತದೆ, ಸುಮಾರು 575 ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟವನ್ನು ಹತ್ತಿ ದೇವರ ದರ್ಶನ ಪಡೆಯುತ್ತಿದ್ದಾರೆ. ಮಾತೆ ಅಂಜನಾದೇವಿ ಆಶೀವರ್ಾದದೊಂದಿಗೆ ಶ್ರೀಆಂಜನೇಯನಲ್ಲಿ ಬೇಡಿಕೊಂಡು ಮೆಟ್ಟಿಲು ಹತ್ತಿ ಸೇವೆಗೈದರೆ ಸಕಲ ಕಷ್ಟಗಳು, ಶತೃಭಾದೆ, ರೋಗ ಋಜನಿಗಳು, ದೂರವಾಗಿ ನೆಮ್ಮದಿ ದೊರಕುತ್ತದೆ ಎಂಬ ನಂಬಿಕೆ ನಮ್ಮಲಿದೆ ಮತ್ತು ಆನಂಬಿಕೆ ಇಲ್ಲಗೆ ಬರುವ ಸಕಲರಲ್ಲಿ ಮನೆ ಮಾಡಿದೆ ಆದುದರಿಂದಾಗಿ ಭಕ್ತರ ದಂಡು ದಿನೇ ದಿನೇ ಹೆಚ್ಚಾಗಿದೆ ಎನ್ನುತ್ತಾರೆ ಭಕ್ತರು.ಅಂಜನಾದ್ರಿ ಬೆಟ್ಟ ಆದ್ಯಾತ್ಮ ಕೇಂದ್ರ ಮಾತ್ರವಲ್ಲ ಸಿನಿಮಾ ಶೂಟಿಂಗ್ ಗಳಿಗೆ ಅಗತ್ಯವಾಗುವ ಎಲ್ಲಾ ಸನ್ನಿವೇಶಗಳನ್ನು ಶೂಟ್ ಮಾಡಲು ಅನುವಾಗುವ ಸುಂಸದರ ದೃಶ್ಯಾವಳಿಗಳು ಇಲ್ಲ ಪ್ರಕೃತಿದತ್ತವಾಗಿ ದೊರಕುತ್ತವೆ.