ಬೆಕ್ಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವ ಹಾಗೂ ವಾರ್ಷಿಕ ಸನ್ಮಾನ ಕಾರ್ಯಕ್ರಮ
Amrutha Mahotsava and annual felicitation program at Bekkoda Government Higher Primary School
ಮುಂಡಗೋಡ 02: ಮುಂಡಗೋಡ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಕ್ಕೋಡದಲ್ಲಿ ಶಾಲಾ ಅಮೃತ ಮಹೋತ್ಸವವು ಬೆಳಿಗ್ಗೆ 10 ಗಂಟೆಗೆ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮವನ್ನು ಶಾಸಕರಾದ ಶಿವರಾಮ್ ಹೆಬ್ಬಾರ್ ಉದ್ಘಾಟಿಸಿ, ಶಾಲೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ. ಅಜಿತ್ ಜೀ ವೇದಶ್ರೀ (ಸತ್ಸಂಗ, ಬೆಂಗಳೂರು), ರಾಶಿಕಾ ಶೆಟ್ಟಿ (ಬಿಗ್ ಬಾಸ್ ಸ್ಪರ್ಧಿ), ತೆಜಸ್ ಗೌಡ್ (ಅಣ್ಣಯ್ಯ ಧಾರಾವಾಹಿ ನಟ), ಎಚ್.ಎಂ. ನಾಯ್ಕ, ಕೃಷ್ಣ ಹಿರೆಹಳ್ಳಿ, ವಿ.ಎಸ್. ನಾಯ್ಕ, ಕಂತರಾಜ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರು ಶಿಸ್ತಿನಿಂದ ಯಶಸ್ವಿಯಾಗಿ ನಡೆಸಿದರು. ಸಾಯಂಕಾಲದ ವಾರ್ಷಿಕ ಸ್ನೇಹ ಹಿ2025-26 ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಮುಂಚಿನ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಾಲೆಯನ್ನು ಮುಂಚೆ ಓದಿದ ಮತ್ತು ಈಗ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳಿಗೂ ಗೌರವ ನೀಡಲಾಯಿತು. ಅವರು ತಮ್ಮ ಅನುಭವಗಳನ್ನು ಮತ್ತು ಸಲಹೆಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಮುಕುಂದ ಕನ್ನ ನಾಯ್ಕ ದೀಪ ಪ್ರಜ್ವಲನದಿಂದ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಭಾಕರ್ ಬಸಪ್ಪ ನಾಯ್ಕ, ನಾಗರಾಜ್ ಎನ್. ನಾಯ್ಕ, ಶಿವಪ್ಪ ನಾಯ್ಕ, ಶ್ರೀರಾಮಚಂದ್ರ ಜೈನ್, ಹನುಮಂತ್ ಕಬ್ಬೂರ್, ಸಂಜೀವ್ ನಾಯ್ಕ, ನಾರಾಯಣ ಜೋಗಿ, ಮಾರಿಕಾಂಬ ಅಂಬುಲೆನ್ಸ್ ಶಿರಸಿ, ರಘುವೀರ್ ನಾಯ್ಕ, ಕೃಷ್ಣ ಬರ್ತ್ನಳ್ಳಿ, ಸವಿತಾ ಪಿ. ನಾಯ್ಕ, ಕಲಾವತಿ ನಾಯ್ಕ, ಪೂರ್ಣಿಮಾ ನಾಯ್ಕ, ಚಿತ್ರಾವತಿ ಲಕ್ಷ್ಮಣ್ ನಾಯ್ಕ, ಮನೋಹರ್ ನಾಯ್ಕ, ಶಶಿ ಅಂಡಗಿ, ಶಬ್ಬೀರ್ ಕಾಳೆಬೈಲ, ಅರುಣ್ ಹೆಗಡೆ (ಶಾನವಳ್ಳಿ) ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮವು ಶಾಲೆಯ ಶಿಕ್ಷಕರ ಶಿಸ್ತಿನ ನಿರ್ವಹಣೆಯಲ್ಲಿ ಯಶಸ್ವಿಯಾಗಿ ನಡೆಯಿತು ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 