ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಅಮ್ಜದ್ ಪಟೇಲ್ ಸೂಚನೆ
ಕೊಪ್ಪಳ 08: ಕಲ್ಯಾಣ ನಗರದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣದ ಕಾಮಗಾರಿ ಸ್ಥಳಕ್ಕೆ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಭೇಟಿ ಮಾಡಿ ಕಾಮಗಾರಿಯನ್ನು ಪರೀಶೀಲಿಸಿದರು. ನಗರಸಭೆಯ ಕಿರಿಯ ಅಭಿಯಂತರರಾದ ಸೋಮಲಿಂಗಪ್ಪ ಸಹ ಇದ್ದರು. ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ರಸ್ತೆ ಕಾಮಗಾರಿ ಸ್ಥಳದಲ್ಲಿ ಉಪಸ್ಥಿತರಿದ್ದ ಗುತ್ತಿಗೆದಾರರಿಗೆ ಹಾಗೂ ಅಭಿಯಂತರಿಗೆ ಕೂಡಲೇ ಕಾಮಗಾರಿಯನ್ನು ತೀವ್ರಗತಿಯಲ್ಲಿ ಆಗಬೇಕು ಮತ್ತು ಒಳ್ಳೆಯ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ನಗರಸಭೆಯ ಸಿಬ್ಬಂದಿಯವರಾದ ವಸಂತ್ ಬೆಲ್ಲಾದ್ ಪಿಎಂಸಿ ಇಂಜಿನಿಯರ್ ಮಗದುಮ್ ಮತ್ತು ಇನ್ನು ಅನೇಕರು ಉಪಸ್ಥಿತರಿದ್ದರು