ಬಿಜೆಪಿ ಆಗ್ರನಾಯಕರ ಪ್ರಶಂಸೆಗೆ ಪಾತ್ರವಾದ ಅಮಿತ್ ಶಾ ..!

ನವದೆಹಲಿ,  ೧೩ಅಮಿತ್ ಶಾ ....  ಮತ್ತೆ ಪರಿಚಯಿಸುವ  ಅಗತ್ಯವಿಲ್ಲದ ನಾಯಕ. ಕಳೆದ  ಕೆಲ  ವರ್ಷಗಳಿಂದ   ದೇಶದ  ರಾಜಕೀಯ  ಚದುರಂಗದಲ್ಲಿ  ಪ್ರಶ್ನಾತೀತ ಬಿಜೆಪಿ ರಾಜಕಾರಣಿ.  ಕೇವಲ ಬಿಜೆಪಿ ಪಕ್ಷ  ರಾಜಕಾರಣದಲ್ಲಿ   ಮಾತ್ರವಲ್ಲ... ಸರ್ಕಾರ  ಹಾಗೂ ಆಡಳಿತ ವಲಯದಲ್ಲೂ  ಅದ್ಬುತವಾಗಿ  ನಿಭಾಯಿಸುತ್ತಿರುವ  ಪ್ರಚಂಡ ರಾಜಕಾರಣಿ.    ಸಂವಿಧಾನದ ೩೭೦ ನೇ ವಿಧಿ ರದ್ದತಿಯಿಂದ ಆರಂಭಗೊಂಡು,  ಸಂಸತ್ತಿನಿಂದ  ಇತ್ತೀಚಿಗೆ  ಅನುಮೋದನೆಪಡೆದುಕೊಂಡ    ರಾಷ್ಟ್ರೀಯ ಪೌರತ್ವ ತಿದ್ದುಪಡಿ ವಿಧೇಯಕದವರೆಗೆ,  ಅಮಿತ್ ಷಾ  ಸಾಧಿಸಿರುವ   ಯಶಸ್ಸಿನ ಬಗ್ಗೆ  ಬಿಜೆಪಿ ನಾಯಕರು  ಈಗ ಕೊಂಡಾಡುತ್ತಿದ್ದಾರೆ.     ಅವರು ಪಕ್ಷದ ರಾಜಕೀಯದಲ್ಲಿ  ನಿರ್ವಿವಾದದ ನಾಯಕರಷ್ಟೇ ಅಲ್ಲ, ಸರ್ಕಾರಿ, ಸಂಸದೀಯ   ಕಾರ್ಯಕಲಾಪಗಳಲ್ಲೂ   ನಿರ್ವಿವಾದದ  ನಾಯಕರಾಗಿ  ಹೊರಹೊಮ್ಮಿರುವ   ಅಮಿತ್ ಶಾ   ಎಲ್ಲರನ್ನೂ   ಬೆಚ್ಚಿಬೀಳಿಸಿದ್ದಾರೆ. ಇದಕ್ಕೂ  ಮೊದಲು ಅವರು ಬಿಜೆಪಿಯಲ್ಲಿ ಗುಜರಾತ್  ನಲ್ಲಿ ರಾಜ್ಯ  ಮಟ್ಟದಲ್ಲಿ  ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು, ಆದರೆ, ಇದೇ  ಮೊದಲ ಬಾರಿಗೆ  ಕೇಂದ್ರ ಸಂಪುಟ ಸಚಿವರಾಗಿದ್ದರೂ, ಅಮಿತ್ ಶಾ   ಸರ್ಕಾರದ  ಆಡಳಿತದಲ್ಲಿ   ಪ್ರಮುಖ ನಾಯಕರಾಗಿ  ಎಲ್ಲವನ್ನೂ  ನಿಭಾಯಿಸುತ್ತಿದ್ದಾರೆ.ನರೇಂದ್ರ ಮೋದಿ ಸಂಪುಟದಲ್ಲಿ ಎರಡನೇ ಸ್ಥಾನದಲ್ಲಿ   ವಿಜೃಂಭಿಸಿ,   ಸಂವಿಧಾನದ  ೩೭೦ ನೇವಿಧಿಯಿಂದ ಈಗಿನಪೌರತ್ವ ತಿದ್ದುಪಡಿವಿಧೇಯಕ ಮಂಡಿಸಿ, ಅಂಗೀಕಾರ ಪಡೆಯುವವರೆಗೂ,  ಅವರು ಎಲ್ಲಿಯೂ   ತಪ್ಪು  ಹೆಜ್ಜೆ  ಇರಿಸಲಿಲ್ಲ.   ಎಲ್ಲವನ್ನೂ  ಖರಾರುವಕ್ಕಾಗಿ  ನಿಭಾಯಿಸಿ  ಸೈ  ಎನಿಸಿಕೊಂಡಿದ್ದಾರೆ.  ಮೊದಲ ಬಾರಿಗೆ ಕ್ಯಾಬಿನೆಟ್ ಮಂತ್ರಿಯಾಗಿದ್ದರೂ,  ಮಹತ್ವದ ಮಸೂದೆಗಳ  ಕುರಿತು ಚಾಕಚಕ್ಯತೆಯಿಂದ ನಿಭಾಯಿಸಿದ್ದಾರೆ.  ಭಯೋತ್ಪಾದನೆ  ವಿರುದ್ಧ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ- ಎನ್ ಐ ಎ   ಅಧಿಕಾರ   ನೀಡುವುದು,  ಭಯೋತ್ಪಾದನೆ ತಡೆ ಕಾಯ್ದೆಯ ವ್ಯಾಪ್ತಿ  ವಿಸ್ತರಿಸಿರುವುದು, ವಿಧಿ  ೩೭೦ ರದ್ದುಪಡಿಸುವುದು, ಎಸ್‌ಪಿಜಿ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ  ಮಂಡಿಸಿ, ಉಭಯ ಸದನಗಳಲ್ಲಿ ಅಂಗೀಕಾರವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿಗೆ  ಹೇಳಿಕೊಳ್ಳುವಂತಹ  ಸಂಖ್ಯಾಬಲವಿಲ್ಲದಿದ್ದರೂ,    ಅಲ್ಲಿಯೂ ಕೂಡಾ   ಯಾವುದೇ  ಅಡ್ಡಿ  ಆತಂಕಗಳಿಲ್ಲದೆ  ತಂತ್ರಗಾರಿಗೆ  ರೂಪಿಸಿ   ವಿಧೇಯಕಗಳು ಅಂಗೀಕಾರವಾಗುವಂತೆ  ನೋಡಿಕೊಂಡು  ಬಿಜೆಪಿಯ ಆಗ್ರ ನಾಯಕರ ನಾಯಕರ   ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವೆಲ್ಲವನ್ನೂ  ಅಮಿತ್ ಶಾಒಬ್ಬರೇ  ನಿಭಾಯಿಸಿದ್ದಾರೆ. ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ  ಸಮರ್ಥವಾಗಿ ಉತ್ತರನೀಡಿ  ಅಮಿತ್ ಶಾ   ತಮ್ಮಲ್ಲೂ   ಸಂಸದೀಯ  ಜಾಣ್ಮೆಯಿದೆ ಎಂಬುದನ್ನು  ತೋರಿಸಿಕೊಟ್ಟಿದ್ದಾರೆ. ಅಮಿತ್ ಶಾ  ಓರ್ವ  ರಾಜಕೀಯ ತಂತ್ರಗಾರ ಮಾತ್ರ, ಸಂಪುಟ ಸಚಿವರಾಗಿ  ಸಂಸತ್ತಿನಲ್ಲಿ ಸಂಸದೀಯ ವ್ಯವಹಾರಗಳಿಗೆ  ಒಗ್ಗುವುದಿಲ್ಲ ಎಂಬ ಕುಹಕದ ಮಾತುಗಳಿಗೆ ಯಾವುದೇ  ಸ್ಥಾನವಿಲ್ಲ  ಎಂಬುದನ್ನು ರುಜುವಾತುಪಡಿಸಿದ್ದಾರೆ.    ವಿಧೇಯಕಗಳ  ಮೇಲಿನ  ಚರ್ಚೆಯ ವೇಳೆ   ಪ್ರತಿಪಕ್ಷ  ನಾಯಕರ ಪ್ರತಿಯೊಂದು   ಆಕ್ಷೇಪಗಳಿಗೂ ಸಮರ್ಥ ಉತ್ತರ ನೀಡುವ  ಮೂಲಕ ಬಾಯಿ ಮುಚ್ಚಿಸಿದ್ದಾರೆ.  ಇಂತಹ  ನಿರ್ಣಾಯಕ ಮಸೂದೆಗಳನ್ನು  ಮಂಡಿಸುವಾಗ, ಚರ್ಚೆಯ ಸಂದರ್ಭದಲ್ಲಿ  ಪ್ರಧಾನಿ  ನರೇಂದ್ರ ಮೋದಿ  ಅವರಾಗಲಿ, ಇತರ ಹಿರಿಯ ಸಂಪುಟ  ಸಚಿವರಾಗಲಿ  ಎಲ್ಲಿಯೂ ಕಾಣಿಸಲಿಲ್ಲ ಎಂಬುದು  ಇಲ್ಲಿ ಗಮನಾರ್ಹ ಅಂಶವಾಗಿದೆ.