ನವದೆಹಲಿ, ಏ 30 - ಪ್ರಸಕ್ತ ಸಾಲಿನ ಏಷ್ಯನ್ ಕ್ರೀಡಾಕುಟದಲ್ಲಿ ನಲ್ಲಿ ಸ್ವರ್ಣ ಸಾಧನೆ ಮಾಡಿರುವ ಬಾಕ್ಸರ್ ಅಮಿತ್ ಪಂಗಲ್ ಅವರ ಹೆಸರನ್ನು ಬಾಕ್ಸಿಂಗ್ ಸಂಸ್ಥೆ ಅರ್ಜುನಪ್ರಶಸ್ತಿಗೆ ಶಿಫಾರಸು ಮಾಡಿದೆ. 'ಸಂಸ್ಥೆ ತನ್ನ ಹೆಸರನ್ನು ಅಜರ್ುನ ಪ್ರಶಸ್ತಿಗೆ ಶಿಫಾರಸು ಮಾಡಿದ್ದು ಸಂತಸ ತಂದಿದೆ. ಈ ಬಾರಿ ನನಗೆ ಅರ್ಜುನಪ್ರಶಸ್ತಿ ಲಭಿಸುವ ನಂಬಿಕೆ ಇದೆ. ಸತತ ಉತ್ತಮ ಪ್ರದರ್ಶನ ನೀಡಿ, ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಸಾಧನೆ ಮಾಡಿದ್ದೇನೆ' ಎಂದು ಅಮಿತ್ ಪಂಗಲ್ ಮಂಗಳವಾರ ಇಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಹೇಳಿದ್ದಾರೆ. ಕಳೆದ ಬಾರಿಯೂ ಸಂಸ್ಥೆ ಪಂಗಲ್ ಹೆಸರನ್ನು ಅರ್ಜುನಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಆದರೆ 2012ರಲ್ಲಿ ಉದ್ದೀಪನ ಮದ್ದು ಸೇವಿಸಿದ ಆರೋಪದಡಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಕಳೆದ ವರ್ಷ ಭರ್ಜರಿ ಪ್ರದರ್ಶನ ನೀಡಿ ಅಮಿತ್ ಎಲ್ಲರ ಚಿತ್ತ ಕದ್ದಿದ್ದಾರೆ. 2020ರ ಒಲಿಂಪಿಕ್ಸ್ ಪದಕದ ಕನಸು ಕಾಣುತ್ತಿರುವ ಅಮಿತ್ ಅವರ ಹೆಸರನ್ನು ಬಾಕ್ಸಿಂಗ್ ಸಂಸ್ಥೆ ಅರ್ಜುನ ಪ್ರಶಸ್ತಿಗೆ ಸೂಚಿಸಿದೆ.