ಅಮೀತಕುಮಾರ್ ರೆಡ್ಡಿ.ಎ ಅವರಿಗೆ ಪಿಹೆಚ್‌ಡಿ ಪದವಿ

Ameetakumar Reddy.A Ph.D

ಅಮೀತಕುಮಾರ್ ರೆಡ್ಡಿ.ಎ ಅವರಿಗೆ ಪಿಹೆಚ್‌ಡಿ ಪದವಿ 

ಬಳ್ಳಾರಿ 20: ಗಂಗಾವತಿಯ ಸಂಕಲ್ಪ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಅಮೀತಕುಮಾರ್ ರೆಡ್ಡಿ ಎ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿ ಘೋಷಿಸಿದೆ. 

ಅಮೀತಕುಮಾರ್ ರೆಡ್ಡಿ ಅವರು, ವಾಣಿಜ್ಯಶಾಸ್ತ್ರ  ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೇಘರಾಜ ಬಿ ಅವರ ಮಾರ್ಗದರ್ಶನದಲ್ಲಿ “ವರ್ಚುವಲ್ ಬ್ಯಾಂಕಿಂಗ್ ಪ್ರಾಕ್ಟೀಸ್ ಆಫ್ ಪಬ್ಲಿಕ್ ಅ್ಯಂಡ್ ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್‌; ಎ ಕೇಸ್ ಸ್ಟಡಿ ಆಫ್ ಬಳ್ಳಾರಿ ಸಿಟಿ” ಎಂಬ ವಿಷಯ ಕುರಿತು ಸಂಶೋಧನೆ ನಡೆಸಿ ಸಿದ್ಧಪಡಿಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಘೋಷಿಸಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.