ಲೋಕದರ್ಶನ ವರದಿ
ಕೊಪ್ಪಳ 06: ಬಾಬಾ ಸಹೇಬ್ ಅವರು ಪಡೆದುಕೊಂಡ ಅಪ್ರತಿಮ ಜ್ಞಾನದ ಫಲವಾಗಿ ದೇಶಕ್ಕೆ ಅತ್ಯುನ್ನತ ಸಂವಿಧಾನವನ್ನು ಕೊಡುಗೆಯಾಗಿ ನೀಡಲಾಯಿತು ಎಂದು ಡಾ. ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ. ಬಿ.ಜ್ಞಾನಸುಂದರ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ 62ನೇ ವರ್ಷದ ಪರಿನಿಬ್ಬಾಣ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಗೌರವಿಸಿ ಮಾತನಾಡಿದರು.
ಅಂಬೇಡ್ಕರ್ ಈ ದೇಶದ ಸಾಮಾನ್ಯ ಜನರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುವ ಅವಕಾಶವನ್ನು ಸಂವಿಧಾನದ ಮೂಲಕ ಮಾಡಿಕೊಟ್ಟಿದ್ದಾರೆ. ಅವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಅವರ ವಿಚಾರಧಾರೆಗಳು ವಿಶ್ವ ವ್ಯಾಪಿಯಾದುದು. ಅವರನ್ನು ವಿಶ್ವದಾದ್ಯಂತ ಜನ ಸ್ಮರಿಸುತ್ತಿದ್ದಾರೆ. ಅವರ ತತ್ತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಅವರು ಚಿಂತನೆಗಳು ಸದಾ ಬಡವರು, ಶೋಷಿತರು ಹಾಗೂ ದುರ್ಬಲರ ಪರವಾಗಿತ್ತು. ಅವರು ಸಂವಿಧಾನದ ಮೂಲಕ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಿದ್ದಾರೆ. ಮಾನವಿ?ಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕನರ್ಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಕಾರ್ಯದಶರ್ಿ ಬಸವರಾಜ ಚಿಲವಾಡಗಿ, ದಲಿತ ಮುಖಂಡರಾದ ರಾಮಣ್ಣ ಕಂದಾರಿ, ರಮೇಶ ಬೆಲ್ಲದ, ಬಸವರಾಜ ಪತ್ತಾರಿ, ಈರಪ್ಪ ಬೆಲ್ಲದ, ಖಾದರ ಸೈಕಲ್ ಶಾಪ್, ಸಚಿನ್ ಬೆಲ್ಲದ, ಶರಣಪ್ಪ ಬೆಲ್ಲದ ಹಾಗೂ ಅನೇಕರು ಉಪಸ್ಥಿತರಿದ್ದರು.