ವಿಶ್ವಕ್ಕೆ ಅತೀ ದೊಡ್ಡ ಸಂವಿಧಾನ ಕೊಟ್ಟ ಮಹಾನ ವ್ಯಕ್ತಿ ಅಂಬೇಡ್ಕರ್ : ಯಲ್ಲನಗೌಡ ಪಾಟೀಲ
ಮಹಾಲಿಂಗಪುರ 15: ಭಾರತೀಯ ಸಂವಿಧಾನದ ಪಿತಾಮಹ "ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕ ಸಮಾನತೆಯ ಹರಿಕಾರ ಭಾರತದ ಪ್ರಜಾಪ್ರಭುತ್ವಕ್ಕೆ ಅತೀ ದೊಡ್ಡ ಸಂವಿಧಾನ ಕೊಟ್ಟರು ಆ ಸಂವಿಧಾನ ಅಡಿಯಲ್ಲಿ ಇಂದು ಭಾರತ ವಿಶ್ವ ಗುರುವಿನ ಸ್ಥಾನದಲ್ಲಿದೆ. ಇದರ ಅಭಿವೃದ್ಧಿ ಹರಿಕಾರ ವಿಶ್ವದ ಮಹಾನ್ ವ್ಯಕ್ತಿ ಭಾರತ ರತ್ನ ಭೀಮರಾವ ಅಂಬೇಡ್ಕರ ಎಂದು ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ಪುರಸಭೆಯಲ್ಲಿ ನಡೆದ ಡಾ ಬಿ ಆರ್ ಅಂಬೇಡ್ಕರ ಅವರ 134 ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಅಸ್ಪೃಶ್ಯತೆ ವಿರುದ್ದದ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು ತಮ್ಮ್ ಜೀವನವನ್ನೇ ಮುಡಿಪಾಗಿಟ್ಟರು.ಜಾತಿ ವ್ಯವಸ್ಥೆ ಆಳವಾಗಿ ಬೆರೂರಿದ್ದ ಕಾಲಘಟ್ಟದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿ ಜಾತಿ ವ್ಯವಸ್ಥೆಯ ಭೂತವನ್ನು ಬಡಿದೋಡಿಸಿದವರೇ ಭೀಮರಾವ. ಸಮಾಜಕ್ಕೆ ಅಂಟಿದ್ದ ಮೇಲು ಕಿಳಿನ ತಾರತಮ್ಯವನ್ನು ಕತ್ತಿಯನ್ನು ಹಿಡಿದು ಯುದ್ಧ ಮಾಡುವುದರಿಂದ ಹೋಗಲಾಡಿಸಲು ಸಾಧ್ಯವೆ ಇಲ್ಲ. ಶಿಕ್ಷಣದಿಂದ ಮಾತ್ರ ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿ. ಸಮಾನತೆಯ ಮಂತ್ರವನ್ನು ಸಾರಿದ್ದ ಡಾ. ಬಿ ಆರ್ ಅಂಬೇಡ್ಕರ ಎಂದರು.
ನಂತರ ಮಾಜಿ ಶಾಸಕ ಬಿ ಜಿ ಜಮಖಂಡಿ,ಪಿಎಸ್‌ಐ ಕಿರಣ್ ಸತ್ತಿಗೆರಿ, ಪುರಸಭೆ ಸದಸ್ಯ ಶೇಖರ ಅಂಗಡಿ, ರವಿ ಹಲಸಪ್ಪಗೊಳ, ಸೇರಿದಂತೆ ಹಲವರು ಮಾತನಾಡಿದರು.
ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇಯ ಜಯಂತಿ ಅಂಗವಾಗಿ ಭೀಮ ಆರ್ಮಿ ಮತ್ತು ದಲಿತ ಸಂಘಟನೆಗಳ ವತಿಯಿಂದ ಪೌರ ಕಾರ್ಮಿಕರಕರಿಗೆ, ಪತ್ರಕರ್ತರಿಗೆ, ಮತ್ತು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪೊಲೀಸ್ ಇಲಾಖೆ, ಹೆಸ್ಕಾಂ, ಸೈನಿಕರನ್ನು, ನ್ಯಾಯವಾದಿಗಳನ್ನು ಸತ್ಕರಿಸಲಾಯಿತು.
ಅಂಬೇಡ್ಕರ ಸರ್ಕಲನಲ್ಲಿ : ನಗರದ ಭೀಮರಾವ ಅಂಬೇಡ್ಕರ ಸರ್ಕಲನಲ್ಲಿ ಹೂವುಗಳಿಂದ ಅಲಂಕರಿಸಿದ ಅಂಬೇಡ್ಕರ ಮೂರ್ತಿಗೆ ಪೂಜೆ ಸಲ್ಲಿಸಿ ನಗರದ ಪ್ರಮುಖ ಬಿದಿಗಳಲ್ಲಿ ಬೈಕ ರಾಲಿ ಮೂಲಕ ಅಂಬೇಡ್ಕರ ಬುದ್ಧ, ಬಸವ ಮತ್ತು ಬಾಬು ಜಗಜೀವನರಾಮ್ ಅವರು ಫೋಟೋ ಮೆರವಣಿಗೆ ಅದ್ದೂರಿಯಾಗಿ ಸಾಗಿ ಬಸವೇಶ್ವರ ವೃತ್ತ, ಕಾಳಿನ ಬಜಾರ, ನಡುಚೌಕಿ, ಜವಳಿ ಬಜಾರ, ಗಾಂಧಿ ವೃತ್ತ, ಚನ್ನಮ್ಮ ಸರ್ಕಲ,ಹೇಮರಡ್ಡಿ ಮಲ್ಲಮ್ಮ ಸರ್ಕಲ, ಸಂಗೊಳ್ಳಿ ರಾಯಣ್ಣ ಸರ್ಕಲ ಮೂಲಕ ಮತ್ತೆ ಅಂಬೇಡ್ಕರ ಸರ್ಕಲಗೆ ಬಂದು ಮುಕ್ತಾಯಗೊಳಿಸಿದರು. ಯುವಕರ ಬೈಕ್ ರಾಲಿ ಗಮನ ಸೆಳೆಯಿತು.
ಕೆಂಗೇರಿಮಡ್ಡಿಯಲ್ಲಿ: ಸಾಯಿ ಸರ್ಕಲ್ ಬಳಿ ಇರುವ ಭೀಮರಾವ ಅಂಬೇಡ್ಕರ ಭಾವಚಿತ್ರಕ್ಕೆ ಹೂವುಗಳಿಂದ ಅಲಂಕರಿಸಿ ಅಂಬೇಡ್ಕರ ಮೂರ್ತಿಗೆ ಪೂಜೆ ಸಲ್ಲಿಸಿದ್ದರು
ಪಿ.ಕೆ.ಪಿ.ಎಸ್ ಅಧ್ಯಕ್ಷ ಬಸಣ್ಣಗೌಡ ಪಾಟೀಲ, ಪುರಸಭೆಯ ಉಪಾಧ್ಯಕ್ಷರಾದ ಶೀಲಾ ಭಾವಿಕಟ್ಟಿ ಸದಸ್ಯರಾದ ಬಲವಂತಗೌಡ ಪಾಟೀಲ, ಸಜ್ಜನಸಾಬ ಪೆಂಡಾರಿ, ರಾಜು ಚೆಮಕೇರಿ, ಮುಸ್ತಾಕ ಚಿಕ್ಕೋಡಿ, ಅಬ್ದುಲ್ ಭಾಗವಾನ, ವಿನೋದ್ ಸಿಂಪಿ, ಪಾಪ ನಾಲಬಂಧ, ಆನಂದ ಬಂಡಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಹೆಸ್ಕಾಂ ಅಧಿಕಾರಿ ರಾಜೇಶ ಬಾಗೋಜಿ, ಮುಖಂಡರಾದ ಶಂಕರಗೌಡ ಪಾಟೀಲ,ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ರಾಜು ಕೋಳಿಗುಡ್ಡ, ಮಹಾಲಿಂಗ ಕುಳೊಳ್ಳಿ, ರಾಜೇಶ ಭಾವಿಕಟ್ಟಿ, ಅರ್ಜುನ್ ಹಲಗಿಗೌಡರ, ಅರ್ಜುನ ದೊಡ್ಡಮನಿ, ಲಕ್ಷಣ ಮಾಂಗ, ಪರಶು ಮೇತ್ರಿ, ಜಯರಾಜ ಗಸ್ತಿ, ನಜೀರ ಝಾರೆ, ಮಹಾಲಿಂಗ ಮಾಳಿ, ಪ್ರಶಾಂತ ಮುಕ್ಕೇನ್ನವರ, ಶ್ರೀಶೈಲ ದೊಡಮನಿ, ಮಹಾಲಿಂಗ ಶಿವಣಗಿ, ಬಸವರಾಜ ಮಾವಿನಹಿಂಡಿ, ಭೀಮಶಿ ಮಾವಿನಹಿಂಡಿ, ಚೆನ್ನಪ್ಪ ಮೇತ್ರಿ, ನಾಗರಾಜ ಭಜಂತ್ರಿ, ತಿಪ್ಪಣ್ಣ ಬಂಡಿವಡ್ಡರ, ಸಿರಾಜ ಪಾಂಡು, ಡಾ ಹುಕ್ಕೇರಿ, ಮಹಾಲಿಂಗಪ್ಪ ಗೋಂಕಾವಿ, ಶಿವಾನಂದ ಹುಣಶ್ಯಾಳ, ರಾಮಣ್ಣ ಹಟ್ಟಿ, ವಿಜಯ ಸಬಕಾಳೆ, ರಮೇಶ ಮಾಂಗ ಸೇರಿದಂತೆ ಪುರಸಭೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.