ಲೋಕದರ್ಶನ ವರದಿ
ಮುಧೋಳ:ಇತ್ತೀಚಿಗೆ ತಾಲೂಕಿನ ಉತ್ತೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಿತ್ರ ಮಂಡಳಿಯವರು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ರವರ ಹಾಗೂ ಡಾ.ಬಾಬು ಜಗಜೀವನರಾಮ್ರವರ ಜಯಂತಿ ಉತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಅನ್ನ ಸಂತರ್ಪಣೆ ಹಾಗೂ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯೂ ಗ್ರಾಮದ ಡಾ.ಅಂಬೇಡ್ಕರ್ ಭವನದಿಂದ ಪ್ರಾರಂಭವಾಗಿ ಬಸಯ್ಯ ಅಜ್ಜನವರ ಸರ್ಕಲ್ ವರೆಗೆ ಬಂದು ಮುಕ್ತಾಯವಾಯಿತು.
ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ಕೊಟ್ಟು ಮಾತನಾಡಿದ ಮುಧೋಳ ಠಾಣಾ ಸರ್ಕಲ್ ಇನ್ಸಪೆಕ್ಟರ್ ಕರೆಪ್ಪ ಬನ್ನೆರವರು, ಅಂಬೇಡ್ಕರರವರು ಭಾರತ ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ದೇಶದಲ್ಲಿರುವ ಎಲ್ಲಾ ಜಾತಿ ಜನಾಂಗದವರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಬಾಬಾಸಾಹೇಬ ಅಂಬೇಡ್ಕರ್ರು ಕೊಟ್ಟ್ ಸಂವಿಧಾನವೇ ಕಾರಣ. ಕೇವಲ ಅವರು ದಲಿತರಿಗಷ್ಟೆ ಸೀಮಿತರಲ್ಲ. ದೇಶದಲ್ಲಿರುವ ಎಲ್ಲರೂ ಕೂಡ ಅವರನ್ನು ಸ್ಮರಿಸಬೇಕು, ಅವರ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.ಇಡೀ ವಿಶ್ವವೇ ಅವರನ್ನು ಹಾಡಿ ಹೊಗಳುತಿದೆ.ಅವರ ಜನುಮ ದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿದೆ ಎಂದು ಯುವ ಸಮೂಹಕ್ಕೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಯಾಗಿ ಆಗಮಿಸಿದ ತಾಲುಕಾ ಪಂಚಾಯತ ಕಾರ್ಯ ನಿವರ್ಾಹಕ ಅಧಿಕಾರಿಗಳಾದ ಬಿ.ಎಸ್ ರಾಠೋಡ್ರವರು ಗ್ರಾಮೀಣ ಭಾಗದಲ್ಲಿರುವ ಪರಿಶಿಷ್ಟ ಜಾತಿ,ಜನಾಂಗದವರು ಸರಕಾರದಿಂದ ಸಿಗುವ ಸಹಾಯ ಸವಲತ್ತು ಪಡೆದುಕೊಂಡು ಅಭಿವೃಧ್ದಿ ಹೊಂದಬೇಕು ಎಂದರು.ಈ ಸಂದರ್ಭ ದಲ್ಲಿ ಡಾ.ಜಗಜೀವನರಾಮರು ಸ್ವತಂತ್ರ ಹೋರಾಟಗಾರರಾಗಿ, ರಾಜಕಾರಣಿಯಾಗಿ ಸಾಕಷ್ಟು ದುಡಿದಂತ ಧೀಮಂತ ನಾಯಕ ಅವರ ಕಾರ್ಯ ಶ್ಲಾಘನೆಯಿಂದಾಗಿ ಹಸಿರು ಕ್ರಾಂತಿಯ ಹರಿಕಾರರಾಗಿ ಹೊರ ಹೊಮ್ಮಿದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಉಪ ನೊಂದಣಿ ಅಧಿಕಾರಿ ಎಸ್ ಆರ್ ಕಟ್ಟಿಮನಿ, ತಾ.ಪಂ. ಸಹಾಯಕ ನಿದರ್ೆಶಕರಾದ ಬಿ.ಡಿ ತಳವಾರ, ಪಶು ವೈದ್ಯರಾದ ಬಿ.ಕೆ.ಹೊಸೂರ, ಗ್ರಾ.ಪಂ.ಪಿ.ಡಿ.ಒ. ಎಮ್ ಎಸ್ ಚಿನಿವಾಲ್. ಆಯ್.ಸಿ.ಪಿ.ಎಲ್ ಕಾಖರ್ಾನೆ ಸಿ.ಆಯ್.ರಾಮಕೃಷ್ಣ ಹೊಸಕೋಟಿ, ಶ್ರೀಕಾಂತ ಬ ಪೂಜಾರ, ಸುನೀಲ ಕೇಳಗೇರಿ, ಸಂಜು ಟಕ್ಕಳಕಿ, ರಾಜೀವ ಎಳೆಂಟಿ, ಶಶಿ ಟಕ್ಕಳಕಿ, ಸಂಜೀವ ಹಾದಿಮನಿ ಇತರರು ಇದ್ದರು.