ಅಂಬೇಡ್ಕರ್ ಅವಮಾನಕರ ಹೇಳಿಕೆ ಖಂಡಿಸಿ ಅಮೀತ ಶಾ ವಜಾಕ್ಕೆ ಮನವಿ

Ambedkar's insulting statement, appeal for dismissal of Ameeta Shah

ಅಂಬೇಡ್ಕರ್ ಅವಮಾನಕರ ಹೇಳಿಕೆ ಖಂಡಿಸಿ ಅಮೀತ ಶಾ ವಜಾಕ್ಕೆ ಮನವಿ 

ಗದಗ 21: ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ರಾಜ್ಯ ಸಭೆಯಲ್ಲಿ ಅಂಬೇಡ್ಕರ ಕುರತು ಅವಮಾನಕರವಾಗಿ ಮಾತನಾಡಿರುವುದನ್ನು ಗದಗ ಜಿಲ್ಲಾ ಡಾಽಽ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಡಾಽಽ ಬಾಬು ಜಗಜೀವನರಾವ್ ಸಮಾನತೆ ಸಮಿತಿಯು ಅಮಿತ ಶಾ ವಿರುದ್ದ ದಿಕ್ಕಾರ ಕೂಗುತ್ತಾ ತೀವೃವಾಗಿ ಖಂಡಿಸಲಾಯಿತು.  

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರಾದ ಗೋವಿಂದರಾಜ ಬಳ್ಳಾರಿ ಮಾತನಾಡಿ ಅಂಬೇಡ್ಕರ್ ಬರೆದ ಸಂವಿಧಾನ ಮೂಲಕ ಅಮೀತ ಶಾ ಕೇಂದ್ರ ಗೃಹ ಸಚಿವರಾಗಿರುವುದನ್ನು ಮರೆತು ಅಂಬೇಡ್ಕರ ಬಗ್ಗೆ ಕೀಳಾಗಿ ಮಾತನಾಡಿದ್ದು ಅಮೀತ ಶಾ ಅವರು ದಲಿತ ವಿರೋಧಿಯಾಗಿವುದನ್ನು ಎತ್ತಿ ತೋರಿಸುತ್ತದೆ ಹಾಗೂ ಅವರ ಮನುವಾದಿ ಸಂಸ್ಕೃತಿಯ ಬಗ್ಗೆ ಬಯಲಾಗಿದೆ ಹಾಗೂ ಸಂವಿಧಾನವನ್ನು ಅಂಬೇಡ್ಕರವರು ಬರೆಯದೇ ಇದ್ದರೆ ಅಮೀತ ಶಾ ಅವರು ತಮ್ಮ ಊರಲ್ಲಿ ಯಾವ ಪರಿಸ್ಥಿಯಲ್ಲಿ ಬದುಕುತ್ತಿದ್ದರು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂಬೇಡ್ಕರವರು ಕೊಟ್ಟ ಸಂವಿಧಾನ  ತಮ್ಮಂತಹ, ನಮ್ಮಂತಹ ಕೋಟಿ ಕೋಟಿ ಜನತೆಗೆ ಬೆಳಕಾಗಿರುವುದು. ಹಾಗೂ ಭಾರತ ದೇಶದ ದಲಿತರಿಗೆ  ಡಾಽಽ ಬಾಬಾಸಾಹೇಬ್ ಅಂಬೇಡ್ಕರವರು ಒಬ್ಬ ಮಹಾನ ದೇವಮಾನವ ಅದಕ್ಕಾಗಿ ದಲಿತ ಸಮುದಾಯವು ಸದಾಕಾಲ ಅವರನ್ನು ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ ಹಾಗೂ ಜೈ ಭೀಮ್ ಎಂದು ಜಯಘೋಷವನ್ನು ಹಾಕುತ್ತಾ ಇರುತ್ತಾರೆ. ಆದರೆ ದಲಿತರ ಏಳಿಗೆಯನ್ನು ಸಹಿದ ಮನುವಾದಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಅಂಬೇಡ್ಕರವರ ಬಗ್ಗೆ ಕೀಳಾಗಿ ಮಾತನಾಡಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಬಿ.ಜೇ.ಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ಸರ್ಕಾರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿ ತೀವೃವಾಗಿ ಖಂಡಿಸಿದರು.  

  ಕಾರಣ ಈ ಅವಹೇಳನಕಾರಿಯಾದ ಹೇಳಿಕೆ ಮಾತನಾಡಿರುವ ಅಮೀತ ಶಾ ಅವರ ವಿರುದ್ದ ಕೇಸ ದಾಖಲಿಸಿ, ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಲು ಮತ್ತು ಅವರ ಮೇಲೆ ಕ್ರಮ ಜರುಗಿಸುವಂತೆ ಮಾನ್ಯ ಘನವೆತ್ತ ರಾಷ್ಟ್ರಪತಿ, ಭಾರತ ಸರ್ಕಾರ, ದೇಹಲಿ ರವರಿಗೆ ಮಾನ್ಯ ಉಪ ವಿಭಾಗಾಧಿಕಾರಿಗಳು ಹಾಗೂ ಉಪ ವಿಭಾಗ ದಂಡಾಧಿಕಾರಿಗಳು, ಗದಗ ಇವರ ಮುಖಾಂತರ ಮನವಿಯನ್ನು ನೀಡಲಾಯಿತು. ಹಾಗೂ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಎಂ.ಗಂಗಪ್ಪ ಉಪ ವಿಭಾಗಾಧಿಕಾರಿಗಳು ಹಾಗೂ ಉಪ ವಿಭಾಗ ದಂಡಾಧಿಕಾರಿಗಳು, ಗದಗ ಇವರು ಮಾತನಾಡಿ ಸದರಿ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು, ಗದಗ ರವರ ಮುಖಾಂತರ ರಾಷ್ಟ್ರಪತಿಯವರಿಗೆ ಕಳುಹಿಸಲಾಗುವುದೆಂದು ಬರವಸೆ ನೀಡಿದರು.  

ಈ ಸಂದರ್ಭದಲ್ಲಿ ಯುವರಾಜ ಬಳ್ಳಾರಿ, ವಿಜಯ ಕಲ್ಮನಿ, ನವೀನ ಭಂಡಾರಿ, ಪೃಥ್ವಿ ಪರಾಪೂರ, ಮಹೇಶ ನಾನಬಾಲ, ಸುಂಕಪ್ಪ ಗುತ್ತಿ, ನಾಗರಾಜ ಕಿನ್ನಾರಿ, ವಿನಾಯಕ ಹೊಸಳ್ಳಿ, ರಾಮು ಕಟ್ಟಿಮನಿ, ರಾಘು ಗೆಜ್ಜೆಳ್ಳಿ, ಈರಣ್ಣ ಗೆಜ್ಜೆಳ್ಳಿ, ವರ್ಧನ ತೌಜುಲ್, ವಿನಾಯಕ ಬಳ್ಳಾರಿ, ನಿತಿನ ಬಳ್ಳಾರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.