ಅಂಬೇಡ್ಕರ್ ವಿಚಾರಗಳು ಬದುಕಿಗೆ ದಾರೀದೀಪ
ಹೂವಿನ ಹಡಗಲಿ: ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳು ಬದುಕಿಗೆ ದಾರೀದೀಪ ಎಂದು ಮುಖ್ಯ ಗುರುಗಳಾದ ದಾವಲ್ ಸಾಬ್ ಎ ನೀಲಗುಂದ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಅಡವಿಮಲ್ಲನಕೆರೆ ಎಂ ಪಿ ಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಸಿಂಚನ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಸಂವಿಧಾನ 75 ಓದು ಜನಮೇಜಯ ಅಭಿಯಾನದ ಅಂಗವಾಗಿ ವಾಣಿ ಪೆರಿಯೋಡಿ ರವರ ಮಕ್ಕಳಿಗಾಗಿ ಸಂವಿಧಾನ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂಬೇಡ್ಕರ್ ಪುಸ್ತಕ ಪ್ರೇಮಿ ಆಗಿದ್ದರು. ಅವರಲ್ಲಿ ಇದ್ದಂತಹ ಓದಿನ ಹವ್ಯಾಸ ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ತಿಳಿಸಿದರು.ಪತ್ರಕರ್ತ ವೀರೇಶ್ ಕಲ್ಮಠ ಮಕ್ಕಳಿಗಾಗಿ ಸಂವಿಧಾನ ಪುಸ್ತಕಗಳನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿತರಿಸಿ ಸಂವಿಧಾನ ಆಶಯಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಸರ್ವಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್ ಮಾತನಾಡಿ ಗ್ರಾಮೀಣ ಪ್ರದೇಶದ ಕನ್ನಡ ಶಾಲೆಯ ಮಕ್ಕಳಿಗೆ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ಸಂಕಲ್ಪ ಶ್ಲಾಘನೀಯ ಎಂದರು.ಪತ್ರಕರ್ತ ಎಂ ದಯಾನಂದ ಮಾತನಾಡಿ ಗ್ರಂಥಾಲಯ ಸದ್ಭಳಕೆ ಮಾಡಿಕೊಂಡು ಉನ್ನತ ಸ್ಥಾನಕ್ಕೆ ಹೋಗುವ ಕನಸು ಕಾಣಿರಿ ಎಂದು ಹೇಳಿದರು.ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಶಾಲಾ ಕಾಲೇಜುಗಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ತಾಲೂಕಿನ ಶಾಲೆಗಳಿಗೆ ಅಂಬೇಡ್ಕರ್ ವಿಚಾರಧಾರೆಗಳನ್ನು ತಲುಪಿಸುವ ಕೆಲಸ ನಿರಂತರವಾಗಿ ಮಾಡುವುದಾಗಿ ತಿಳಿಸಿದರು. ಪ್ರೌಢಶಾಲಾ ಗ್ರಂಥಾಲಯಕ್ಕೆ ಪ್ರಕಾಶನದ ವತಿಯಿಂದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್, ಎಸ್ ಡಿ ಎಂ ಸಿ ಅಧ್ಯಕ್ಷ ಗಂಗಪ್ಪ ಹುರುಳಿಹಾಳ, ಶಾಲಾ ಶಿಕ್ಷಕರಾದ ಮುಮ್ತಾಜ್ ಬೇಗಂ,ಬಿ ಕೆ ಗೋಣಿಬಸಪ್ಪ, ತೇಜಸ್ವಿನಿ ಎಚ್ ಇತರರು ಉಪಸ್ಥಿತರಿದ್ದರು.