ಅಂಬಾ ಭವಾನಿ ದೇವಸ್ಥಾನ ನೂತನ ಮೂರ್ತಿಗಳ ಭವ್ಯ ಮೆರವಣಿಗೆ
ತಾಳಿಕೋಟಿ, 17; ಪಟ್ಟಣದ ಶ್ರೀ ಅಂಬಾಭವಾನಿ ಗೊಂದಳಿ ಸಮಾಜದ ನೂತನ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಗಳ ಭವ್ಯ ಮೆರವಣಿಗೆ ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಮುಂಜಾನೆ 10:00 ಘಂಟೆಗೆ ಪಟ್ಟಣದ ಭೀಮನಭಾವಿ ತಟದ ಮೇಲೆ ಗಂಗಸ್ಥಳದ ಕಾರ್ಯಕ್ರಮಗಳು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅರ್ಚಕ ಸಂತೋಷ್ ಭಟ್ ರ ನೇತೃತ್ವದಲ್ಲಿ ಜರುಗಿದವು. ನಂತರ ಅಲ್ಲಿಂದ ಸಕಲವಾದ್ಯ ಮೇಳ ಕಳಸ ಕುಂಭಗಳೊಂದಿಗೆ ಆರಂಭವಾದ ಮೂರ್ತಿಗಳ ಮೆರವಣಿಗೆಯು ಪಟ್ಟಣದ ಶ್ರೀ ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ವಿಠಲ ಮಂದಿರ ಮುಂಭಾಗದ ರಸ್ತೆ, ಕತ್ರಿ ಬಜಾರ್ ಮಾರ್ಗವಾಗಿ ಮತ್ತೆ ಗೊಂದಳಿ ಸಮಾಜದ ಶ್ರೀ ಅಂಬಾಭವಾನಿ ದೇವಸ್ಥಾನಕ್ಕೆ ತಲುಪಿತು. ಮಧ್ಯಾಹ್ನ 1 ಗಂಟೆಗೆ ಮಹಾ ಪ್ರಸಾದ ಜರುಗಿತು. ಸಂಜೆ 5:00 ಘಂಟೆಗೆ ಮೂರ್ತಿಗಳ ಜಲವಾಸ, ಧಾನ್ಯವಾಸ,ಹಾಗೂ ಶಯ್ಯಾದಿವಾಸ ನಡೆಯಿತು. ಇಂದು ಕಾರ್ಯಕ್ರಮದಲ್ಲಿ ಗೊಂದಳಿ ಸಮಾಜದ ಅಧ್ಯಕ್ಷ ವಿಠ್ಠಲ್ ಸೂರ್ಯವಂಶಿ, ಉಪಾಧ್ಯಕ್ಷ ಶಿವಾಜಿ ಸೂರ್ಯವಂಶಿ, ಗೌರವಾಧ್ಯಕ್ಷ ತುಕಾರಾಂ ಸೂರ್ಯವಂಶಿ, ಗಣ್ಯರಾದ ರಾಜು ವಾಗ್ಮರೆ, ಅಶೋಕ್ ಮುತ್ತೋದ್ಕರ್, ಪರುಶುರಾಮ್ ಪಾರುಗೆ, ಹನುಮಂತ್ ವಾಸ್ಟರ್, ಅಪ್ಪಣ್ಣ ಸೂರ್ಯವಂಶಿ ಗೋವಿಂದ ಸೂರ್ಯವಂಶಿ ಸಾಯಿಬಣ್ಣ ಮೋದಕರ್ ಸದಾಶಿವ ನಾಯಕ್, ಕುಂಡಲೀಕ ಪಾರಿಗೆ ಹಾಗೂ ನಾಮದೇವ್ ಮಾಸ್ಟರ್ ಇದ್ದರು.