ಚಂಡೀಗಡ, ಡಿಸೆಂಬರ್ , 2- ಕರ್ತಾರ್ಪುರ ಕಾರಿಡಾರ್ ಬಗ್ಗೆ ಪಾಕಿಸ್ತಾನದ ರೈಲ್ವೆ ಸಚಿವರು ನೀಡಿರುವ ಹೇಳಿಕೆ ನಿಜವಾಗಿಯೂ ಅವರ ಕೊಳಕು ಮನಸ್ಸು , ಅಸಹ್ಯಕರ ಷಡ್ಯಂತ್ರ ಬಟ್ಟಂ ಬಯಲು ಮಾಡಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ| ಅಮರಿಂದರ್ ಸಿಂಗ್ ದೂರಿದ್ದಾರೆ .
ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್, ‘ಕರ್ತಾರ್ಪುರ ಯೋಜನೆ ಸೇನಾ ಮುಖ್ಯಸ್ಥರಾದ ಜನರಲ್ ಖಮರ್ ಬಜ್ವಾ ಅವರ ಕನಸಿನ ಯೋಜನೆ ದೀರ್ಘಾವಧಿಯಲ್ಲಿ ಇದು ಭಾರತಕ್ಕೆ ಮರೆಯಲಾಗದಂತಹ ಗಾಯ ಉಂಟು ಮಾಡಲಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ‘ಯೋಜನೆಯು ಜಾರಿಯಾಗಿರುವುದಕ್ಕೆ ಭಾರತ ಅಭಾರಿಯಾಗಿದೆ. ಆದರೆ, ನಮ್ಮ ನಡೆ, ಸೌಜನ್ಯವನ್ನು ಪಾಕ್ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದೂ ಸಿಂಗ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟ್ ಪಟು ನವ ಜೋತ್ ಸಿಂಗ್ ಸಿಧು ಅವರು ಇಮ್ರಾನ್ ಖಾನ್ ಜತೆಗೆ ಹೊಂದಿರುವ ಬಾಂಧವ್ಯದ ಬಗ್ಗೆ ಎಚ್ಚರಿಕೆಯಿಂದಲೂ ಇರಬೇಕು ಎಂದೂ ಅವರು ಕಿವಿಮಾತು ಹೇಳಿದ್ದಾರೆ.