ಲೋಕದರ್ಶನ ವರದಿ
ಶಿರಹಟ್ಟಿ 25: ತಾಲೂಕು ಯಾವಾಗಲೂ ಅಭಿವೃದ್ಧಿ ಕುಂಠಿತಗಳಲ್ಲಿ ಉಳಿದುಕೊಳ್ಳದೇ ಇನ್ನು ಮುಂದೆಯಾದರೂ ಪಟ್ಟಣದ ಸಮಗ್ರ ಅಭಿವೃದೀಯಾಗಬೇಕು ಹಾಗೂ ಸಮರ್ಪಕ ಸೌಲಭ್ಯಗಳು ದೊರೆಯಬೇಕು, ಅಭಿವೃದ್ಧಿಗೆ ಹಿನ್ನಡೆಯಾಗಬಾರದು ಎಂಬುದು ಸರಕಾರದ ಆಶಯ. ಅದರಂತೆ ಪಟ್ಟಣದ ಜನರ ಜೀವನ ಮಟ್ಟ ಸುಧಾರಿಸಲು ಹಾಗೂ ಸಕಲ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಮಾದರಿ ಕೇತ್ರವನ್ನಾಗಿ ರೂಪಿಸಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಸ್ಥಳೀಯ ಜ.ಫಕ್ಕೀರೇಶ್ವರ ಮಠದ ಹಿಂದೆ ಸರಕಾರಿ ಪ್ರಾಥಮಿಕ ಉದರ್ು ಮಾದರಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸಕರ್ಾರ ಸಾಕಷ್ಟು ಶ್ರಮಿಸುತ್ತಿವೆ. ಮತ್ತು ಯಾವೋಂದು ಮಕ್ಕಳು ಶಿಕ್ಷಣ ಕಲಿಕೆಯಿಂದ ವಂಚಿತರಾಬಾರದು ಎಂಬ ಉದ್ದೇಶದಿಂದ. ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ, ವಿದ್ಯಾಥರ್ಿ ವೇತನ, ಸಮವಸ್ತ್ರ, ಪಠ್ಯ ಪುಸ್ತಕ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಮತ್ತು ಹಿಂದುಳಿದ ಪಟ್ಟಣಗಳ ಅಭಿವೃದ್ಧಿಗೆ ಹಲವು ಯೋಜನೆಗಳ ಮೂಲಕ ವಿಶೇಷ ಅನುದಾನ ನೀಡುತ್ತಿದ್ದು. ಇದರಿಂದ ಹಿಂದುಳಿದ ಪಟ್ಟಣಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸಲಾಗುವುದು. ಅಲ್ಲದೆ ಎಸ್ಸಿ.ಎಸ್ಟಿ ಕಾಲೋನಿಗಳಿಗೂ ಸಹ ಸಿಸಿ ರಸ್ತೆ, ಚರಂಡಿ ವ್ಯವಸ್ತೆ, ಕುಡಿಯುವ ನೀರು ಒದಗಿಸಲಾಗುತ್ತಿದೆ. ಮತ್ತು ಆಥರ್ಿಕವಾಗಿ ಹಿಂದುಳಿದ ಜನರಿಗೆ ಬಡವರ ಬಂಧು, ಉಚಿತ ಗ್ಯಾಸ್. ಶೂನ್ಯ ದರದಲ್ಲಿ ಸಾಲ, ಕೃಷಿ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಈ ಎಲ್ಲ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳುವುದರ ಮೂಲಕ ಆಥರ್ಿಕವಾಗಿ ಬೆಳೆಯಬೇಕು. ಮತ್ತು ಮಕ್ಕಳು ಸಹ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಪದವಿಯನ್ನು ಪಡೆದುಕೊಳ್ಳುವುದರ ಮೂಲಕ ಊರಿಗೆ ಮತ್ತು ಶಾಲೆಗೆ ಕೀತರ್ಿ ತರಬೇಕು ಎಂದು ಹೇಳಿದರು.
ಮಾಜಿ ಜಿಪಂ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಮಾಜಿ ಪಪಂ ಅಧ್ಯಕ್ಷ ರಾಮಣ್ಣ ಡಂಬಳ. ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಅನಿಲ ಮಾನೆ, ನಾಗರಾಜ ಲಕ್ಕುಂಡಿ, ಶ್ರೀನಿವಾಸ ಬಾರಬಾರ, ಸಿ.ಕೆ. ಮುಳಗುಂದ, ಇಸಾಕ್ ಆದ್ರಳ್ಳಿ, ಪರಶುರಾಮ ಡೊಂಕಬಳ್ಳಿ, ಅಕ್ಬರ ಯಾದಗಿರಿ, ಮಾಬುಸಾಬ ಕನಕವಾಡ, ಮಹ್ಮದಲ್ಲಿ ಮನಿಯಾರ, ಅಂಜಾದ ಆದ್ರಳ್ಳಿ, ಅಬ್ದುಲ ರಜಾಕ್ ಆದ್ರಳ್ಳಿ ಸೇರಿದಂತೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.