ಲೋಕದರ್ಶನ ವರದಿ
ಬೆಳಗಾವಿ 21: ಯೋಗವು ಮನುಷ್ಯನ ಶಾರೀರಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಬಹುಮೌಲಿಕ ಪಾತ್ರವಹಿಸುತ್ತದೆ. ಅವನ ಆಧ್ಯಾತ್ಮಿಕ ಶಕ್ತಿಗೂ ಪ್ರಯೋಜನಕಾರಿಯಾಗಿದೆ ಎಂದು ರಿಚಾ ರಾವ್ ನುಡಿದರು. ಅವರು ಲಿಂಗರಾಜ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದಿನನಿತ್ಯದ ಬದುಕಿಗೆ ಯೋಗವು ಅಗತ್ಯವಾಗಿ ಬೇಕಾಗಿದೆ. ಇಂದಿನ ಒತ್ತಡದ ಜೀವನದಲ್ಲಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವುದರಿಂದ ಶರೀರದ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ವಿದ್ಯಾಥರ್ಿಗಳ ಮಾನಸಿಕ ಏಕಾಗ್ರತೆಗೆ ಯೋಗ ಒಂದು ವರದಾನ. ಜೀವನದ ನಲಿವಿಗೆ ಯೋಗವನ್ನು ಮಾಡಲೇಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ, ಪಪೂ ಪ್ರಾಚಾರ್ಯ ಸುಮಿತ್ರಾ ಚೋಬಾರಿ, 26 ಕನರ್ಾಟಕ ಎನ್ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಮನೋಜಕುಮಾರ, ಕ್ಯಾಫ್ಟನ್ ಮಹೇಶ ಗುರನಗೌಡರ, ಚೀಫ್ಆಫೀಸರ್ ದೇವಋಷಿ, ಸುಬೇದಾರ ಮೇಜರ್ ಚಂಗಪ್ಪಾ ಪಾಟೀಲ, ಸಿ.ರಾಮರಾವ್, ಲಿಂಗರಾಜ, ಬಿಕೆ ಕಾಲೇಜು, ಜಿಎ ಹೈಸ್ಕೂಲಿನ ಎನ್ಸಿಸಿ ಘಟಕದ ನೂರಾರು ಕೆಡೆಟ್ಗಳು ಯೋಗದಲ್ಲಿ ಪಾಲ್ಗೊಂಡಿದ್ದರು.