ಲಾಟರಿ ಮೂಲಕ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ

Allotment of plots to civil servants through lottery

ಲಾಟರಿ ಮೂಲಕ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ  

ಕೊಪ್ಪಳ 24: ನಗರಸಭೆ ಸಭಾಂಗಣದಲ್ಲಿ  ಪೌರ ಕಾರ್ಮಿಕರ ಸಮ್ಮುಖದಲ್ಲಿ 15 ಜನ ಖಾಯಂ ಪೌರ ಕಾರ್ಮಿಕರಿಗೆ ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಕಟ್ಟಿಮನಿ, ಉಪಾಧ್ಯಕ್ಷ ಮಾರುತಿ ದೊಡ್ಡಮನಿ, ರಾಜ್ಯ ಪರಿಷತ್ ಸದಸ್ಯ ದುರ್ಗಪ್ಪ ಕಂದಾರಿ, ಶಾಖಾ ಅಧ್ಯಕ್ಷ ಮೈಲಪ್ಪ ಕಾರಟಗಿ, ಪೌರಾಯುಕ್ತ ಗಣಪತಿ ಪಾಟೀಲ್, ಕಚೇರಿ ವ್ಯವಸ್ಥಾಪಕ ಮುನಿಸ್ವಾಮಿ, ನಗರಸಭೆಯ ಕಂದಾಯ ನೀರೀಕ್ಷಕ ಜೆ.ಉಜ್ವಲ್, ನಗರಸಭೆಯ ವಸತಿ ವಿಷಯ ನಿರ್ವಾಹಕ, ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.