'ಬದುಕಿನ ಎಲ್ಲ ರೀತಿ-ನೀತಿ ಜಾನಪದ ಸಾಹಿತ್ಯದಲ್ಲಿ ವ್ಯಕ್ತವಾಗಿವೆ'

ಲೋಕದರ್ಶನ ವರದಿ

ಬೆಳಗಾವಿ 29:  ಜಾನಪದ ಸಂಸ್ಕೃತಿಯಲ್ಲಿರುವ ಸಂಪ್ರದಾಯಗಳು, ಆಚಾರ-ವಿಚಾರಗಳು ನಮ್ಮ ಬದುಕಿನಲ್ಲಿ ಮೌಲ್ಯಗಳನ್ನು ತುಂಬುತ್ತವೆ. ಬುದ್ಧಿ ಮನಸ್ಸುಗಳು ವಿಕಾಸವಾದಂತೆಲ್ಲಾ ಜಾನಪದ ಕಲೆಗಳು ಹೊರಹೊಮ್ಮುತ್ತವೆ. ಮನುಷ್ಯನ ನಾಲಗೆಯ ಮೇಲೆ ಮಾತು ಕುಣಿದಾಗಲೇ ಜಾನಪದ ಸಾಹಿತ್ಯ ಉದ್ಭವವಾಗುತ್ತದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪೂರ ಇದರ ಅಧ್ಯಕ್ಷರಾದ ಬಾಳನಗೌಡ ಪಾಟೀಲ ಅಭಿಪ್ರಾಯ ಪಟ್ಟರು. 

ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಬೆಳಗಾವಿ ಜಿಲ್ಲಾ ಘಟಕ ಹಮ್ಮಿಕೊಂಡ ಸನ್ಮಾನ ಹಾಗೂ ಜಾನಪದ ಜೋಗುಳ ಕಾರ್ಯಕ್ರಮದಲ್ಲಿ ಉಪನ್ಯಾಸಕ ಸ್ಥಾನದಿಂದ ಮಾತನಾಡುತ್ತಾ ಜಾನಪದ ಸಂಸ್ಕೃತಿಯನ್ನು ಮುಂದಿನ ಯುವಪೀಳಿಗೆಗೆ ದೇಶೀಯ ಶೈಲಿಯಲ್ಲಿ ಜೀಣರ್ೋದ್ಧಾರ ಮಾಡುವ ಅವಶ್ಯಕತೆ ಇಂದು ಇರುತ್ತದೆ. ಅದನ್ನು ಭವಿಷ್ಯದ ಹೊಸ ಪೀಳಿಗೆಗೆ ಕೊಂಡೊಯ್ಯಬೇಕಾದ ಜವಾಬ್ದಾರಿ ಭಾರತೀಯ ಸಂಸ್ಕೃತಿ ಹೊಂದಿದ ನಮ್ಮೆಲ್ಲರ ಮೇಲಿದೆ ಇದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಉದ್ಗಾರ ಕೈಗೊಂಡರು. 

ತೊಟ್ಟಿಲು ತೂಗುವ ಮೂಲಕ ಮಗುವಿನ ನಾಮಕರಣ ಮಾಡುವ ಹುಮ್ಮನಸ್ಸಿನ ಕಾರ್ಯಕ್ರಮ ಉದ್ಘಾಟಿಸಿ ಜಾನಪದ ವಿದ್ವಾಂಸ ಪ್ರೊ.ಕೆ.ಎಸ್.ಕೌಜಲಗಿ ಮಾತನಾಡುತ್ತಾ ಜಾನಪದ ನಮ್ಮ ಬದುಕಿನ ಎಲ್ಲ ರೀತಿ-ನೀತಿಗಳನ್ನು ಜಾನಪದ ಸಾಹಿತ್ಯದಲ್ಲಿ ವ್ಯಕ್ತವಾಗಿವೆ ಅಲ್ಲದೆ ಶ್ರಮಜೀವಿಗಳು ತಮ್ಮ ಬದುಕಿನ ಆಗುಹೋಗುಗಳನ್ನು ಸುಖ-ದುಃಖಗಳನ್ನು ಕನಸು-ಕಲ್ಪನೆಗಳನ್ನು ಹಾಡಿನ ರೂಪದಲ್ಲಿ ಹಾಡು, ನೃತ್ಯ ಹಾಗೂ ನಾಟಕ, ಆಟ ಮೊದಲಾದವುಗಳ ಮುಖಾಂತರ ಅಭಿವ್ಯಕ್ತಿಪಡಿಸಿದ್ದಾರೆ ಅಂದರು. ಅವರು ಮುಂದುವರೆದು ಸ್ವಾವಲಂಬಿ ಬದುಕನ್ನು ಬದುಕಲು ಮತ್ತು ನೈತಿಕತೆಯಿಂದ ಬಾಳಲು ಭಾವೈಕ್ಯತೆಯಿಂದ ಕೂಡಲು ಜಾನಪದ ಸಾಹಿತ್ಯ ಪ್ರೇರಣೆ ನೀಡುತ್ತದೆ, ಹಾಸ್ಯ ಬೌದ್ದಿಕತೆ, ಚಿಂತನೆ ಮೊದಲಾದ ವಿಚಾರಗಳು ಜಾನಪದ ಸಾಹಿತ್ಯದಲ್ಲಿ ಮೂಡಿಬಂದಿವೆ. ಇದೂ ಅಲ್ಲದೆ ಜಾನಪದರು ಪ್ರಚಾರಕ್ಕಾಗಿ ತಮ್ಮ ಪ್ರತಿಷ್ಟೆಗಾಗಿ ಯಾವುದೇ ಲಾಭಕ್ಕಾಗಿ ಈ ಜಾನಪದ ಸಾಹಿತ್ಯವನ್ನು ರಚನೆ ಮಾಡಿಲ್ಲ, ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಲು ಮನಸ್ಸಿನ ನೆಮ್ಮದಿಯನ್ನು ಶ್ರೇಯಸ್ಸುಗೊಳಿಸಿ ಎತ್ತರಕ್ಕೆ ತೆಗೆದುಕೊಂಡು ಶ್ರಮವನ್ನು ಪರಿಹಾರಮಾಡಿಕೊಳ್ಳಲು ಕೂಡಿಬಾಳಲು ಹಬ್ಬು, ಜಾತ್ರೆ, ಮದುವೆ ಮೊದಲಾದವುಗಳ ಉತ್ಕೃಷ್ಟವಾದ ಸಮಾರಂಭಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಆಚರಣೆಗಳ ಪ್ರಚಾರ ಮಾಡಲು ಈ ಸಾಹಿತ್ಯ, ಭಾಷೆ ಆಕಾಂಕ್ಷೆ ಹೆಮ್ಮೆ ಪಡುತ್ತದೆ ಅಂದರು. ಜಾನಪದ ಸಾಹಿತ್ಯ ಜನಸಾಮಾನ್ಯರ ಸಂವಿಧಾನವಾಗಿದೆ ಎಂದು ಹಲವಾರು ವಿಚಾರಗಳನ್ನು ಎಳೆ ಎಳೆಯಾಗಿ ಉದಾಹರಣೆಗಳೊಂದಿಗೆ ಸಂದಭರ್ೋಚಿತವಾಗಿ ವಿವರಿಸಿದರು. 

ವಿಶ್ರಾಂತ ಪ್ರಾಚಾರ್ಯ ಎಮ್.ಆರ್. ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಾಹಿತ್ಯವಾಗಲಿ ಕಲೆಯಾಗಲಿ ಜಾನಪದ ಸಂಪ್ರದಾಯ ಕುಟುಂಬ ಅದು ಬಹುದೊಡ್ಡದು ಅಷ್ಟೆ ವ್ಯಾಪಕವಾದುದು ಅದರ ಬೇರುಗಳು ಪ್ರಾಚೀನತೆಯ ಗಭರ್ಾಂತರಾಳದಲ್ಲಿ ಹುದುಗಿಕೊಂಡಿರುವಂತೆಯೇ ಅದರ ಕೊಂಬೆಗಳು ಸಂಕೀರ್ಣ ಸ್ವರೂಪದ ಆಧುನಿಕತೆಯಲ್ಲಿ ಲಯವಾಗಿವೆ. ಅದು ಪ್ರವೇಶಿಸದ ಜೀವನ ವ್ಯಾಪಾರವೇ ಇಲ್ಲ. ಅದು ಸಂಸ್ಕೃತಿಯ ಪ್ರತಿಬಿಂಬವಾಗಿ ಗೋಚರಿಸುತ್ತಾ ಇರುತ್ತದೆ. ಅದಕ್ಕೆ ದೇವರು ಪ್ರತಿಭೆ ಎನ್ನುವ ಮಾನದಂಡವನ್ನು ಬಾಜನವಾಗಬೇಕೆನ್ನುವ ಸತತ ಪ್ರಯತ್ನ ಫಲಶ್ರತಿಗಳಿಗೆ ಮಾನದಂಡವನ್ನಾಗಿ ಮಾಡಿದ್ದಾನೆ ಅಂದರು. ಜಾನಪದವು ಅವರ್ಾಚೀನದ ಅದಮ್ಯ ಶಕ್ತಿಯೂ ಹೌದು, ಪ್ರಾಚೀನದ ಪ್ರತಿಧ್ವನಿಯೂ ಹೌದು. ಇದು ಸಾವಿಲ್ಲದ ಸೋಲಿಲ್ಲದ ಒಂದು ನಿರಂತರ ಶಕ್ತಿ, ಮಾನವ ಸಂಸ್ಕೃತಿಯ ಆರಂಭದಿಂದ ತನ್ನ ಆಗಮನವನ್ನು ಕಂಡುಕೊಂಡ ಜಾನಪದ ಮಾನವ ಕುಲ ಉಳಿದಿರುವವರೆಗೆ ಅವನ ಜತೆಯಲ್ಲಿ ಉಳಿಯುತ್ತದೆ ಎಂಬ ಉದ್ಗಾರವನ್ನು ವ್ಯಕ್ತಪಡಿಸಿದರು. ಸನ್ಮಾನ ಹಾಗೂ ಜಾನಪದ ಜೋಗುಳ ಈ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಕನ್ನಡ ಜಾನಪದ ಪರಿಷತ್ತಿನ ಉತ್ತರ ಕನರ್ಾಟಕದ ಸಂಚಾಲಕರಾಗಿ ನೇಮಕಗೊಂಡ ಪ್ರೊ. ಕೆ.ಎಸ್. ಕೌಜಲಗಿ, ಬಾಳನಗೌಡ ಪಾಟೀಳ, ಶಿವಾನಂದ ಮಂಗಾನವರ, ಜ್ಯೊತಿಲರ್ೀಂಗ ಹೊನಕಟ್ಟಿ, ಮೋಹನ ಗುಂಡ್ಲುರ, ಪ್ರೊ:ಎಮ್.ಆರ್.ಉಳ್ಳೇಗಡ್ಡಿ ಸರ್ವರನ್ನೂ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜ್ಯೋತಿ ಭಾವಿಕಟ್ಟಿ ಚಂದ್ರಶೇಖರ ಕೊಪ್ಪದ, ಜಗಾಪೂರ, ರಾಮಲಿಂಗ ಕಾಡಪ್ಪನವರ, ಶಿವಾನಂದ ಸಂಜೀವಗೋಳ, ಶಂಕರ ಗುಡಗನಟ್ಟಿ, ಶಂಕರ ಕುಂದ್ರಾಳ ಇತರರು ಆಸೀನರಾಗಿದ್ದರು. ಪ್ರಾರಂಭದಲ್ಲಿ ಗಾಯನಾ ಹೊನಕಟ್ಟಿ ಇವಳಿಂದ ಪ್ರಾರ್ಥನೆಯೊಂದಿಗೆ ಮೋಹನ ಜಿ. ಗುಂಡ್ಲೂರ, ಅಧ್ಯಕ್ಷರು, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಬೆಳಗಾವಿ ಇವರಿಂದ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳೊಂದಿಗೆ ಆರ್. ಪಿ. ಪಾಟೀಲ ವಂದನೆಗಳೊಂದಿಗೆ ಸುನಂದಾ ಎಮ್ಮಿ ನಿರೂಪಣೆ ಮೇರೆಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.