ಧಾರವಾಡ 20 : ಭಾರತ ಸರ್ವ ಧರ್ಮಗಳ ನಾಡು, ಭಾವೈಕ್ಯತೆಯ ಬೀಡು. ಆದ್ದರಿಂದ ಎಲ್ಲ ಧರ್ಮಗಳನ್ನು ಆದರದಿಂದ ಕಾಣಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ನುಡಿದರು.
ಅವರು ಜಸ್ನೆ ಮಿಲಾದುನ್ನಬಿ ಪ್ರಯುಕ್ತ ಅಂಜುಮನ್ ಇಸ್ಲಾಂ ಸಂಸ್ಥೆಯ ಆವರಣದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಒತ್ತು ನೀಡಿ, ವಿದ್ಯಾಕಾಶಿಯಲ್ಲಿ ತಾಂತ್ರಿಕ, ವೈದ್ಯಕೀಯ, ಉದರ್ು, ಸಂಸ್ಕೃತ, ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾಲಯಗಳಿದ್ದು, ಕನಿಷ್ಠ ಪದವಿಯಾದರು ಮಾಡಬೇಕೆಂಬ ಹಂಬಲ ನಿಮ್ಮದಾಗಿರಬೇಕೆಂದರು. ಶಿಕ್ಷಣದಲ್ಲಿ ಲಿಂಗ ತಾರತಮ್ಯ ಸಲ್ಲ. ಧರ್ಮ ಗ್ರಂಥ ಓದುವದರೊಂದಿಗೆ ಅದರಲ್ಲಿರುವ ಅಂಶಗಳನ್ನು ನಿಮ್ಮಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಹೊಂದಿರಿ. ಉದರ್ು ಭಾಷೆಯೊಂದಿಗೆ ಇತರ ಭಾಷೆಗಳನ್ನು ಕಲಿಯಲು ಪ್ರಯತ್ನಿಸಿ. ಕೆಲವೇ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಹಿತಿಗಳ, ಕವಿಗಳ ಚಿಂತನೆಯನ್ನು ಆಲಿಸಿರಿ. ಯಾವುದೇ ಭಾಷೆಯನ್ನು ಕಲಿಯಲು ಮೂರು ತಿಂಗಳು ಸಾಕು. ಇದಕ್ಕೆ ಕಠಿಣ ಪರಿಶ್ರಮ, ಏಕಾಗ್ರತೆ ಅವಶ್ಯಕ ಎಂದರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಅಲ್ ಹಜ್ ಅಬ್ದುಲ ಅಜೀಜ ದಾಸನಕೊಪ್ಪ ಮಾತನಾಡಿ ಪಾಲಕರು ಶಿಕ್ಷಣದೊಂದಿಗೆ ನಮ್ಮ ಧರ್ಮದ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ನೀಡಿ. ಕುರಾನನಲ್ಲಿ ಹೇಳಿದ ಹಾಗೆ ಚಾಚು ತಪ್ಪದೆ ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದೇ ಆದಲ್ಲಿ ನೀವು ಉತ್ತಮ ನಾಗರಿಕರಾಗಲು ಸಾಧ್ಯ ಎಂದರು. ಈ ಧರ್ಮ ಗ್ರಂಥದಲ್ಲಿ ತಂದೆ ತಾಯಿ, ಗುರು, ಗೆಳೆಯರು ಹಾಗೂ ಇತರ ಸಮಾಜ ಬಾಂಧವರೊಂದಿಗೆ ಸಹಬಾಳ್ವೆಯ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ, ಉದರ್ು, ಇಂಗ್ಲಿಷ ವಿಷಯದ ಚಚರ್ಾ ಸ್ಪಧರ್ೆ, ನಿಬಂಧ ಸ್ಪಧರ್ೆ, ಭಾಷಣ ಸ್ಪಧರ್ೆ, ಕುರಾನ ಪಠಣ, ಹಫೀಜಸ್ಪಧರ್ೆ, ನಾತ ಸ್ಪಧರ್ೆಗಳಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾಥರ್ಿ ಹಾಗೂ ವಿಧ್ಯಾಥರ್ಿನಿಯರಿಗೆ ಪಾರಿತೋಷಕದೊಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಡಾ. ಅಬೇದಾಖಾನಂ ಸವಣೂರ, ದಿಲಾವರ ದೇಸಾಯಿ, ಕೆ.ಜಿ.ಹಳ್ಯಾಳ, ಅಬ್ದುಲ್ ಸತ್ತಾರ ಶೇಖ, ಅಬ್ದುಲ ರಶೀದ ಜಕಾತಿ, ಸಮೀರ ಪಾಗೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯದಶರ್ಿ ನಜೀರ ಹುಸೇನ ಮನಿಯಾರ, ಜಂಟಿ ಕಾರ್ಯದಶರ್ಿ ರಫೀಕ ಅಹಮ್ಮದ ಶಿರಹಟ್ಟಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಅಬ್ದುಲ ರೇಹಮಾನ ಹರಿಹರ, ಪ್ರೌಢಶಾಲೆಯ ಪ್ರಾಂಶುಪಾಲ ಆಯ್.ಎಮ್.ಮುಲ್ಲಾ, ಎಸ್.ಎಸ್.ಸೌದಾಗರ, ಖಲೀಲ ಅಹಮ್ಮದ ದಾಸನಕೊಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಖುರಾನ ಪಠಣ ಹಾಫೀಜ ಫೈಜ್ ಅಹಮ್ಮದ, ಕಾರ್ಯಕ್ರಮ ನಿರೂಪಣೆ ಅಲ್ತಾಪ ಅಗಸಿಮನಿ, ಸ್ವಾಗತ ಕೌಸರ ಬಿಜಾಪೂರ, ವಂದನಾರ್ಪಣೆ ಮಹಮ್ಮದ ಗೌಸ ಮಕಾನದಾರ ಮಾಡಿದರು.