ಜ.19ರಂದು ಭಾರತೀತೀರ್ಥ ಸಭಾಭವನ ಉದ್ಘಾಟನೆಗೆ ಸಕಲ ಸಿದ್ಧತೆ- ಬಿ.ಕೆ.ಬಿ.ಎನ್‌.ಮೂರ್ತಿ

All preparations for the inauguration of Bharatithirtha Sabhabhavan on January 19- B. K. B. N. Murt

ಜ.19ರಂದು ಭಾರತೀತೀರ್ಥ ಸಭಾಭವನ ಉದ್ಘಾಟನೆಗೆ ಸಕಲ ಸಿದ್ಧತೆ- ಬಿ.ಕೆ.ಬಿ.ಎನ್‌.ಮೂರ್ತಿ

ಬಳ್ಳಾರಿ 06: ದಕ್ಷಿಣಾಮ್ನಾಯ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಅನಂತ ವಿಭೂಷಿತ ಜಗದ್ಗುರು ಭಾರತೀತೀರ್ಥ ಮಹಾ ಸನ್ನಿಧಾನಂಗಳವರ ಪರಮಾನುಗ್ರಹದಿಂದ ತತ್ಕರಕಮಲ ಸಂಜಾತರಾದ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರ ವಿಜಯ ಯಾತ್ರೆ ಹಾಗೂ ಭಾರತೀ ತೀರ್ಥ ಸಭಾಭವನ ಉದ್ಘಾಟನಾ ಸಮಾರಂಭ ಇದೇ ಜ.19 ರಿಂದ 3 ದಿನಗಳ ಕಾಲ ಜರುಗಲಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶ್ರೀಮಠದ ಸಂಚಾಲಕರಾದ ಬಿ.ಕೆ.ಬಿ.ಎನ್‌.ಮೂರ್ತಿ ತಿಳಿಸಿದರು. ಸಂಗನಕಲ್ಲು ರಸ್ತೆಯ ಶೃಂಗೇರಿ ಶಂಕರಮಠದ ಆವರಣದಲ್ಲಿ ಭಾನುವಾರ ಸಂಜೆ ನಡೆದ ತೃತೀಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜ.19ರಂದು ಬಳ್ಳಾರಿಯ ಭಕ್ತ ಜನರ ಪ್ರಾರ್ಥನೆಯನ್ನು ಮನ್ನಿಸಿ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರು ಬಳ್ಳಾರಿ ಪುರ ಪ್ರವೇಶ ಮಾಡಲಿದ್ದಾರೆ.  

ಈವೇಳೆ ವಿವಿಧ ಕಲಾ ತಂಡಗಳಿಂದ ಶೋಭಾ ಯಾತ್ರೆ ಜರುಗಲಿದೆ. ಆಸ್ತಿಕ ಜನರ ಶ್ರದ್ಧಾಕೇಂದ್ರವಾಗಿ ರಾರಾಜಿಸುತ್ತಿರುವ ಸಂಗನಕಲ್ಲು ರಸ್ತೆಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶಾರದಾ ಚಂದ್ರಮೌಳೀಶ್ವರ ಪೂಜೆ ನೆರವೇರಿಸಿ ಭಕ್ತರಿಗೆ ದರ್ಶನ ಹಾಗೂ ಅನುಗ್ರಹ ಭಾಷಣದ ಮೂಲಕ ಆಶೀರ್ವದಿಸಲಿದ್ದಾರೆ. ಜಗದ್ಗುರು ಭಾರತೀತೀರ್ಥ ಮಹಾಸನ್ನಿಧಾನಂಗಳವರ ಸನ್ಯಾಸಾಶ್ರಮ ಸ್ವೀಕರಿಸಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಿರ್ಮಾಣಗೊಂಡಿರುವ ಭಾರತೀ ತೀರ್ಥ ಸಭಾಭವನವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಿದ್ದಾರೆ. 

ಅಂದು ಬೆಳಿಗ್ಗೆ 7.30 ರಿಂದ ಗುರು ಪ್ರಾರ್ಥನೆ, ಗೋಪೂಜೆ, ಗಣಪತಿ ಪೂಜೆ, ಪುಣ್ಯಾಹವಾಚನೆ ವಾಸ್ತು ಪೂಜೆ ಹಾಗೂ ನವಗ್ರಹ ಪೂಜೆ ಜರುಗಲಿದೆ. ಬೆ.10.00 ರಿಂದ ಗಣ ಹೋಮ, ನವಗ್ರಹ ಹೋಮ ಹಾಗೂ ವಾಸ್ತು ಹೋಮ ನಡೆಸಲಾಗುವುದು. ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಜರುಗುವುದು. ಸಂಜೆ 6 ಗಂಟೆಗೆ ಜಗದ್ಗುರುಗಳ ಪುರ​‍್ರವೇಶ ಶೋಭಾಯಾತ್ರೆಯ ಮೂಲಕ ಸ್ವಾಗತಿಸಲಾಗುತ್ತಿದೆ. 7 ಗಂಟೆಗೆ ಶೃಂಗೇರಿ ಶಂಕರ ಮಠದಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಮಾಡಲಾಗುತ್ತಿದೆ. 7.30 ಗಂಟೆಗೆ ಜಗದ್ಗುರುಗಳಿಂದ ಜ್ಯೋತಿ ಬೆಳಗಿಸುವುದರ ಮೂಲಕ ಭಾರತೀತೀರ್ಥ ಸಭಾ ಭವನದ ಉದ್ಘಾಟನೆ, ರಾತ್ರಿ 8 ಗಂಟೆಗೆ ಭಾರತೀತೀರ್ಥ ಸಭಾಭವನದಲ್ಲಿ ಧೂಳಿ ಪಾದಪೂಜೆ ಹಾಗೂ ಸ್ವಾಗತ ಪತ್ರ ಸಮರೆ​‍್ಣ ಇರುತ್ತದೆ. ರಾತ್ರಿ 8.30 ಗಂಟೆಗೆ ಶ್ರೀ ಭಾರತೀತೀರ್ಥ ಸಭಾಭವನದಲ್ಲಿ ಜಗದ್ಗುರು ವಿಧುಶೇಖರ ಮಹಾಸ್ವಾಮಿಗಳಿಂದ ಶಾರದಾ ಚಂದ್ರಮೌಳೀಶ್ವರ ಸ್ವಾಮಿಗೆ ಅಭಿಷೇಕ ಇದ್ದು ಈ ಸಮಯದಲ್ಲಿ ಭಕ್ತರು ಪಾದಪೂಜೆ ಹಾಗೂ ಪೂಜಾ ಕಾಣಿಕೆಗಳನ್ನು ಸಮರ​‍್ಿಸಬಹುದಾಗಿದೆ ಎಂದರು.  

ಜ.20ರ ಕಾರ್ಯಕ್ರಮಗಳು: ಜ.20 ರಂದು ಬೆಳಿಗ್ಗೆ 8.30 ಗಂಟೆಗೆ ಮಠದ ಅರ್ಚಕರಿಂದ ಶಾರದಾ ಚಂದ್ರಮೌಳೀಶ್ವರ ಸ್ವಾಮಿಯ ಪೂಜೆ, 11.30 ಗಂಟೆಗೆ ಜಗದ್ಗುರುಗಳ ದರ್ಶನ, ಪಾದಪೂಜೆ, ಭಿಕ್ಷಾವಂದನೆ ಇದ್ದು ಈ ಸಂದರ್ಭದಲ್ಲಿ ವಸ್ತ್ರ ಹಾಗೂ ಕಾಣಿಕೆಗಳನ್ನು ಸಮರೆ​‍್ಣ ಮಾಡಬಹುದಾಗಿದೆ. ಸಂಜೆ 5.30 ಗಂಟೆಗೆ ಭಾರತೀತೀರ್ಥ ಸಭಾಭವನದಲ್ಲಿ ಜಿಲ್ಲೆಯ ಸದ್ಭಕ್ತರಿಂದ ಕಲ್ಯಾಣವೃಷ್ಟಿಸ್ತವಃ ಶಿವ ಪಂಚಾಕ್ಷರಿ ನಕ್ಷತ್ರ ಮಾಲಾ ಸ್ತೋತ್ರ,  ನೃಸಿಂಹ ಕರಾವಲಂಬನ ಶ್ಲೋಕಗಳ ಸಮರೆ​‍್ಣ ಇರಲಿದೆ. ಸಂಜೆ 7 ಗಂಟೆಗೆ ಜಗದ್ಗುರುಗಳ ಅನುಗ್ರಹ ಭಾಷಣ ಜರುಗುವುದು. ರಾತ್ರಿ 8.30 ಗಂಟೆಗೆ ಶ್ರೀ ಭಾರತಿ ತೀರ್ಥ ಸಭಾಭವನದಲ್ಲಿ ಜಗದ್ಗುರು ವಿಧುಶೇಖರ ಮಹಾಸ್ವಾಮಿಗಳಿಂದ ಶಾರದಾ ಚಂದ್ರಮೌಳೀಶ್ವರ ಸ್ವಾಮಿಗೆ ಅಭಿಷೇಕ ನಡೆಯುವುದು ಎಂದರು.  

ಜ.21ರ ಕಾರ್ಯಕ್ರಮಗಳು;ಜ.21 ರಂದು ಬೆಳಿಗ್ಗೆ 8.30 ಗಂಟೆಗೆ ಮಠದ ಅರ್ಚಕರಿಂದ ಶಾರದಾ ಚಂದ್ರಮೌಳೀಶ್ವರ ಸ್ವಾಮಿಯ ಪೂಜೆ, ಬೆಳಿಗ್ಗೆ 11 ಗಂಟೆಗೆ ಭಾರತೀತೀರ್ಥ ಸಭಾಭವನದಲ್ಲಿ ನಗರದ 5 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಂದ ಕಲ್ಯಾಣವೃಷ್ಟಿಸ್ತವಃ ಸ್ತೋತ್ರ ಸಮರೆ​‍್ಣ ಇರಲಿದೆ. ಸಂಜೆ 4 ಗಂಟೆಗೆ ಶ್ರೀಗಳ ವಿಜಯಯಾತ್ರೆ ಮುಂದುವರಿಯಲಿದ್ದು ಬೀಳ್ಕೊಡಲಾಗುತ್ತದೆ. ಜ. 9ರಂದು ಬಾಲಭಾರತಿ ಶಾಲೆಯಲ್ಲಿ ಸಭೆ: ಈ ವಿಜಯಯಾತ್ರೆಯನ್ನು ಸಂಪನ್ನಗೊಳಿಸಲು ಎಲ್ಲ ಸದ್ಭಕ್ತರು ಸಕ್ರಿಯರಾಗಿದ್ದಾರೆ. ಇದೇ ಜ.9ರಂದು ಗುರುವಾರದಂದು ಸಂಜೆ 6 ಗಂಟೆಗೆ ಬಾಲಭಾರತಿ ಶಾಲೆಯಲ್ಲಿ ವಿಶ್ವ ಹಿಂದೂ ಪರಿಷತ್, ರಾಷಿೊಥಯ ಸ್ವಯಂ ಸೇವಕ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಆರ್‌ಎಸ್‌ಎಸ್ ಮಹಿಳಾ ಸೇವಿಕಾ ಸಂಘ ಹಾಗೂ ಭಕ್ತರು ಸೇರಿ ಶ್ರೀಗಳ ವಿಜಯಯಾತ್ರೆಯ ಯಶಸ್ಸಿಗೆ ಕಾರ್ಯಕ್ರಮಗಳ ರೂಪುರೇಶೆಗಳ ಸಿದ್ಧತೆ ನಡೆಸಲಿದ್ದಾರೆ.  

ಸ್ವಯಂ ಸೇವಕರನ್ನು ನೇಮಿಸಲಾಗಿದ್ದು ಭಕ್ತರಿಗಾಗಿ ನಗರದಿಂದ ಸಾರಿಗೆ ವ್ಯವಸ್ಥೆ, ಉಪಹಾರ, ಊಟ, ಸ್ವಚ್ಛತೆ ಇತ್ಯಾದಿ ವ್ಯವಸ್ಥೆಗಳಿಗಾಗಿ ತಂಡಗಳನ್ನು ರಚಿಸಲಾಗುತ್ತಿದೆ. ಈ ಮಹತ್ತರವಾದ ಕಾರ್ಯಕ್ರಮದಲ್ಲಿ ಆಸ್ತಿಕ ಮಹಾಜನರು, ಶ್ರೀಮಠದ ಶಿಷ್ಯರು ಸಕ್ರಿಯವಾಗಿ ಪಾಲ್ಗೊಂಡು ಶಾರದಾ ಚಂದ್ರಮೌಳೀಶ್ವರ ಹಾಗೂ ಉಭಯ ಜಗದ್ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದರು. ಈ ಸಭೆಯಲ್ಲಿ ಶ್ರೀಮಠದ ಪದಾಧಿಕಾರಿಗಳಾದ ಜೆ.ಮೋಹನ್ ಶಾಸಿೊ,್ತ ಕೆ.ರವಿ ಶಾಸಿೊ,್ತ ವಿ.ಮುರಳಿ, ರಘುನಂದನ್, ಶ್ರೀಧರ್, ರಘುನಾಥರಾವ್, ನಾಗರಾಜ್, ಹರಿಪ್ರಸಾದ್, ವಿಜಯಲಕ್ಷ್ಮಿ ಕರೂರು, ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್‌.ಅಶೋಕ್ ಕುಮಾರ್, ಮೃತ್ಯುಂಜಯಸ್ವಾಮಿ ಬಂಡ್ರಾಳ್, ರಾಜು ಸೇರಿದಂತೆ ಹಲವು ಭಕ್ತಾದಿಗಳು ಇದ್ದರು.