ಎಲ್ಲ ಮಠಾಧೀಶರು ಸಕರ್ಾರದ ವಿರುದ್ಧ ನಿಲ್ಲಬೇಕಾಗುತ್ತದೆ: ಪಂಡಿತಾರಾಧ್ಯಶ್ರೀಗಳು

ಲೋಕದರ್ಶನ ವರದಿ

ಬ್ಯಾಡಗಿ08: ಬಿಯರ್ ಕೊಡುವುದನ್ನು ಮೊದಲು ನಿಲ್ಲಿಸಿ ಮೊದಲು ಜನರಿಗೆ ನೀರು ಕೊಡಿ, ನಿಮ್ಮ ಕೊಟ್ಟ ಉಚಿತ ಭಾಗ್ಯಗಳೆಲ್ಲವೂ ರೈತರಿಗೆ ದೌಭರ್ಾಗ್ಯಗಳಾಗಿವೆ, ಶಾಶ್ವತ ಪರಿಹಾರಕ್ಕಾಗಿ ರೈತರಿಗೆ ದುಡಿಮೆ ಭಾಗ್ಯ ಕೊಡಿ, ಕೆರೆಗಳನ್ನು ತುಂಬಿಸದಿದ್ದರೇ ರಾಜ್ಯದ ಎಲ್ಲ ಮಠಾಧೀಶರು ಸಕರ್ಾರದ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಸಾಣೇಹಳ್ಳಿ ಸಿರಿಗೆರೆಮಠದ ಪಂಡಿತಾರಾಧ್ಯಶ್ರೀಗಳು ಎಚ್ಚರಿಸಿದರು.

 ತಾಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಟಾನಕ್ಕೆ ಪಟ್ಟು ಹಿಡಿದು ಪ್ರಸಕ್ತ ಬಜೆಟ್ನಲ್ಲಿ ಅನುದಾನ ಮೀಸಲಿಡುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ ಕಛೇರಿ ಎದುರು ರೈತ ಸಂಘದ ಪುಟ್ಟಣ್ಣಯ್ಯ ಬಣ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಹೋರಾಟಕ್ಕೆ ಬೆಂಬಲಿಸಿ ಸೂಚಿಸಿದರು.

ಜನಪ್ರತಿನಿಧಿಗಳು ಆತ್ಮಸಾಕ್ಷಿಗೆ ವಿರುದ್ಧ ಕೆಲಸ: ನಿಮ್ಮನ್ನು ನೆಚ್ಚಿದ ರಾಜ್ಯದ ಜನರು ಮಹಾದಾಯಿ ನೀರು ಕೈಬಿಟ್ಟಿದ್ದಾಯಿತು, ನೆಲ-ಜಲ-ಭಾಷೆಗಳ ಬಗ್ಗೆ ಬದ್ಧತೆ ತೋರದ ಸಕರ್ಾರಗಳು ಇದ್ದರೆಷ್ಟು ಬಿಟ್ಟರೆಷ್ಟು, ಯಾರಿಗೇನಾದರೂ 

ನಾನೊಬ್ಬ ಸುಖವಾಗಿದ್ದೇನೆ ಎಂಬ ಅಲ್ಪ ಮನೋಭಾವನೆ ಜನಪ್ರತಿನಿಧಿಗಳಲ್ಲಿ ಬರುತ್ತಿರುವದೇ ಇದಕ್ಕೆ ಕಾರಣ ನೀರು ಸಕರ್ಾರಕ್ಕೆ ಸಾಲ ಕೊಡುವಷ್ಟು ಸಮರ್ಥ ರೈತರು ನಮ್ಮಲ್ಲಿದ್ದಾರೆ ಎಂದರು.

       ಪುಕ್ಕಟೆ ಭಾಗ್ಯಗಳಿಂದ ರೈತರಿಗೆ ಪೆಟ್ಟು: ಸಕರ್ಾರ ನೀಡುತ್ತಿರುವ ಪುಕ್ಕಟೆ ಭಾಗ್ಯಗಳು ಎಲ್ಲ ಸಮುದಾಯದವರನ್ನು ದರಿದ್ರರನ್ನಾಗಿ ಮಾಡುತ್ತಿವೆ, ಅವುಗಳಿಂದ ಮೊದಲು ಪೆಟ್ಟು ತಿಂದವರಲ್ಲಿ ರೈತರು ಹೆಚ್ಚು, ದುಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.

   ಕೃಷಿ ಮೇಲಿನ ವೆಚ್ಚಗಳನ್ನು ನೀಗಿಸಲಾಗಿದೆ ರೈತ ಸಾಲ ಮಾಡುತ್ತಿದ್ದಾನೆ. ವರುಣದೇವ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಸರಣಿ ವೈಫಲ್ಯ ಕಾಣುತ್ತಿದೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ.ಇದರ ಅರಿವು ಸಕರ್ಾರದ ಗಮನದಲ್ಲಿಲ್ಲವೇ ಎಂದು ಪ್ರಶ್ನಿಸಿದರು.  

      ನೀವಿರುವ ಬೆಂಗಳೂರು ಏನಾಗಿದೆ ನೋಡಿಕೊಳ್ಳಿ: ಬೆಂಗಳೂರಿನಲ್ಲಿ ಸುಮಾರು 65 ಕೆರೆಗಳನ್ನು ಮುಚ್ಚಿ ನಗರ ಪ್ರದೇಶಗಳನ್ನಾಗಿ ಮಾಡಲಾಗಿದೆ, ಸ್ವಲ್ಪ ಮಳೆಯಾದರೂ ಅಲ್ಲಿನ ನಿವಾಸಿಗಳ ಮನೆಯಲ್ಲಿ ನೀರು ನುಗ್ಗುತ್ತಿವೆ, ರಾಜ ಕಾಲುವೆಗಳನ್ನು ಅಪಾರ್ಟಮೆಂಟ್ಗಳು ನುಂಗಿವೆ ಹೀಗಾದ ಮೇಲೆ ಜಲಸಂಪನ್ಮೂಲ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಎಸ್.ಆರ್.ಪಾಟೀಲ, ಗಂಗಣ್ಣ ಎಲಿ, ಮಲ್ಲಿಕಾಜರ್ುನ ಬಳ್ಳಾರಿ, ಕಿರಣ ಗಡಿಗೋಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.