ಎಲ್ಲ ಅಧಿಕಾರಿಗಳು ಸಮರ್ಕವಾಗಿ ಕಾರ್ಯನಿರ್ವಹಿಸಿರಿ : ಯಾಸೀರಖಾನ ಪಠಾಣ
ಶಿಗ್ಗಾವಿ 277: ಸಮಸ್ಯೆ ತೆಗೆದುಕೊಂಡು ಸಾರ್ವಜನಿಕರು ನನ್ನ ಹತ್ತಿರ ಬಂದರೆ ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದು ಅರ್ಥ ಆದ್ದರಿಂದ ಎಲ್ಲ ಅಧಿಕಾರಿಗಳು ಸಮರ್ಕವಾಗಿ ಕಾರ್ಯನಿರ್ವಹಿಸಿರಿ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಕಿವಿ ಮಾತು ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಾತನಾಡಿದ ಅವರು ತುರ್ತಾಗಿ ಸಭೆ ಕರೆದ ಉದ್ದೇಶ ಅಧಿಕಾರಿಗಳ ಪರಿಚಯ ಹಾಗೂ ಉತ್ತರ ಕರ್ನಾಟಕ ಅಧಿವೇಶನ ಡಿಶೆಂಬರ 9 ರಂದು ಪ್ರಾರಂಭವಾಗುವ ಕಾರಣ ಸಾಮಾನ್ಯ ಜನರಿಗೆ ಇರುವಂತಹ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ಅಧಿವೇಶನ ಮುಗಿದ ನಂತರ ಪಂಚಾಯತಿ ಮಟ್ಟದ ಸಭೆ ಮತ್ತು ಪುರಸಭೆ ಮಟ್ಟದಲ್ಲಿ ವಾರ್ಡ ಸಭೆ ಮಾಡುವ ಉದ್ದೇಶ ಹೊಂದಿದ್ದೇನೆ ಅಷ್ಟರಲ್ಲಿ ನಿಮ್ಮ ನಿಮ್ಮ ಇಲಾಖೆಯ ಸಮಸ್ಯೆಗಳ ಬಗ್ಗೆ ವರದಿ ಮಾಡಿ ಅವುಗಳನ್ನು ಹೇಗೆ ಬಗೆಹರಿಸಿ ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರಕಾರಿ ಕಚೇರಿಗಳಿಗೆ ಬಂದಂತಹ ಜನ ಸಾಮಾನ್ಯರಿಗೆ ಗೌರವ ಕೊಡಬೇಕು, ಅಧಿಕಾರಿಗಳ ಬೇಟಿ ಸಮಯ ನಿಗದಿಪಡಿಸಬೇಕು, ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು, ವೃದ್ಯಾಪ ವೇತನ, ಅಂಗವಿಕಲರ ವೇತನ ಅರ್ಜಿ ಸಲ್ಲಿಸಿದವರಿಗೆ 24 ಗಂಟೆಯೊಳಗೆ ವೇತನ ಬರಬೇಕು. ಅಕ್ರಮ ಸಕ್ರಮ ಭೂ ನ್ಯಾಯ ಮಂಡಳಿ ಫಲಾನುಭವಿಗಳಿಗೆ ಪರಿಹಾರ ಒದಗಿಸಬೇಕು, ರೈತರು ಸರ್ವೇ ಕಾರ್ಯಕ್ಕೆ ಬಂದಾಗ ಅಲೆದಾಡಿಸಬೇಡಿರಿ, ಸರಕಾರಿ ಜಮೀನುಗಳಲ್ಲಿ ಇರುವ ಅನೇಕ ಕಡು ಬಡವರ ಪಟ್ಟಿ ಮಾಡಿ ಸಿದ್ದತೆ ಮಾಡಬೇಕು, ಅತಿವೃಷ್ಟಿ ಆಶ್ರಯ ಮನೆಗೆ ಬಾಕಿಯಿರುವ ಬಿಲ್ಲುಗಳ ಪಟ್ಟಿ ಮಾಡಿ, ಬಿ.ಪಿ.ಎಲ್ ಕಾರ್ಡ ಅರ್ಜಿ ಸಲ್ಲಿಸಿದ್ದಾರೆ ಪಟ್ಟಿ ಮಾಡಿ, ಪಡಿತರ ದಾನ್ಯ ವಿತರಣೆ ಸರಿಯಾಗಿ ಮಾಡುತ್ತಿಲ್ಲ ಎಂದು ಹೆಚ್ಚು ದೂರಗಳಿವೆ, ಅರ್ಹರಿದ್ದ ಬಡ ಕುಟುಂಬಗಳ ಬಿ.ಪಿ.ಎಲ್ ಕಾರ್ಡ ರದ್ದಾಗದಂತೆ ಜಾಗೃತಿವಹಿಸಬೇಕು, ಗ್ಯಾರಂಟಿ ಯೋಜನೆ ಸರಿಯಾಗಿ ತಲುಪುತ್ತಿವೆ ಇಲ್ಲ ಎಂದು ಪಟ್ಟಿ ಮಾಡಿ, ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಅರ್ಜಿ ಕೊಟ್ಟ ಎಲ್ಲ ಫಲಾನುಭವಿಗಳಿಗೆ ಸಲ್ಲಬೇಕು. 20-21 ಸಾಲಿನ ಅರ್ಹ ಪಲಾನುಭವಿಗಳಿಗೆ ರೈತ ಪರಿಹಾರ ಹಣ ಬಂದಿಲ್ಲ ಅವುಗಳ ಪಟ್ಟಿ ಮಾಡಿ ಸಿದ್ದತೆ ಮಾಡಿಕೊಳ್ಳಬೇಕು.
ಪುರಸಭೆ ವಾರ್ಡಗಳಲ್ಲಿ ಶ್ರೀಮಂತರು ಇರುವ ಕಡೆ ಸ್ವಚ್ಚತೆ ಮಾಡದೇ ಜನಸಾಮಾನ್ಯರ ಇರುವ ಕಡೆ ಸ್ವಚ್ಚತೆ ಇರುವುದಿಲ್ಲ ಆದ್ದರಿಂದ ಜನಸಾಮಾನ್ಯರ ಇರುವ ಕಡೇ ಸ್ವಚ್ಚತೆಗೆ ಆದ್ಯತೆ ನೀಡಿರಿ ಹಾಗೂ ಕಸ ವಿಲೇವಾರಿ ವಾಹನ ಸಮರ್ಕವಾಗಿ ನಿರ್ವಹಿಸಿ ರೋಗ ರುಜಿನಗಳು ಬರದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ ವಸೂಲಿ ಮಾಡಬೇಕು. ಶುದ್ಧ ನೀರಿನ ಘಟಕಗಳ ಆದ್ಯತೆ ಮೇರೆಗೆ ಎಲ್ಲರಿಗೂ ಶುದ್ದ ನೀರು ಸಿಗಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ತಳ ಮಟ್ಟದ ಅಧಿಕಾರಿಗಳ ವೈಪಲ್ಯಕಾರಣವಾಗಿದೆ. ಸಿ.ಸಿ.ಕ್ಯಾಮರಾ ಅಳವಡಿಸಿ ಕಳ್ಳತನ ಆಗದಂತೆ ಜವಾಬ್ದಾರಿವಹಿಸಬೇಕು, ಅಕ್ರಮ ಸರಾಯಿ ಮಾಡುವವರಿಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭಾಕ್ಸ ಸುದ್ದಿ : ಎರಡು ದಿನಗಳಲ್ಲಿ ನನಗೆ ಬಾಕಿಯಿರುವ ಕಾಮಗಾರಿಗಳ ಬಗ್ಗೆ ಚೆಕಲಿಸ್ಟ ಯಾದಿಯನ್ನು ತಯಾರಿಸಿ ಸಂಪೂರ್ಣವಾದ ಮಾಹಿತಿ ನೀಡಬೇಕು.
ಯಾಸೀರ ಅಹ್ಮದಖಾನ ಪಠಾಣ
ಶಿಗ್ಗಾವಿ ಸವಣೂರ ಶಾಸಕ
ಎಲ್ಲ ಅಧಿಕಾರಿಗಳು ನಿಮ್ಮ ನಿಮ್ಮ ಇಲಾಖೆಯ ಪಟ್ಟಿ ಮಾಡಿರಿ ಬಗೆಹರಿಯದೇ ಇರುವ ಸಮಸ್ಯೆಗಳಿದ್ದರೆ ಅಂತವುಗಳ ಬಗ್ಗೆ ನನಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರೇ ನಾನು ಅಂತಹ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಂತೋಷ ಹಿರೇಮಠ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಮಣ್ಣವಡ್ಡರ, ಗ್ಯಾರಂಟಿ ಅದ್ಯಕ್ಷ ಶೇಖಪ್ಪ ಮಣಕಟ್ಟಿ, ಜಿಲ್ಲಾ ಗ್ಯಾರಂಟಿ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಕಾರ್ಯಕ್ರಮ ನಿರ್ವಹಿಸಿದರು.