ಅಂಬರೀಶ್ರನ್ನು ಕಳೆದುಕೊಂಡ ನಾವೆಲ್ಲರೂ ದುರಾದೃಷ್ಟವಂತರು: ಸುಧಾರಾಣಿ

ಲೋಕದರ್ಶನ ವರದಿ

ಕೊಪ್ಪಳ 05: ಹಿರಿಯ ನಟ ಅಂಬರೀಶ್ ನಿಧನದಿಂದ ನಮ್ಮ ಕನ್ನಡ ಚಿತ್ರರಂಗ ಕುಟುಂಬವು ಒಂದು ದೊಡ್ಡ ಪರ್ವತವನ್ನು ಕಳೆದುಕೊಂಡಿದೆ. ಅಂಬರೀಶ್ ಅವರನ್ನು ಕಳೆದುಕೊಂಡ ನಾವೆಲ್ಲರೂ ನಿಜಕ್ಕೂ ದುರಾದೃಷ್ಟವಂತರು ಎಂದು ನಟಿ ಸುಧಾರಾಣಿ ಹೇಳಿದರು.

ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ನಮ್ಮಂತ ಕಿರಿಯ ನಟ-ನಟಿಯರಿಗಷ್ಟೇ ಅಲ್ಲದೇ ಚಿತ್ರರಂಗಕ್ಕೆ ಮಾರ್ಗದರ್ಶಕರಾಗಿದ್ದರು. ಪ್ರತಿಯೊಬ್ಬರಿಗೂ ಪ್ರೀತಿ ಪಾತ್ರರಾಗಿದ್ದರು. ಇನ್ನೂ ಬಹಳಷ್ಟು ಕಾಲ ಅವರು ನಮ್ಮೊಂದಿಗೆ ಇರಬೇಕಾಗಿತ್ತು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಸಾವು ಇಂದಿಗೂ ಊಹಿಸಿಕೊಳ್ಳಲು ಆಗುವುದಿಲ್ಲ ಎಂದು ಸುಧಾರಾಣಿ ಅಂಬರೀಶ್ರನ್ನು ಸ್ಮರಿಸಿದರು. ನಟಿ ಮಯೂರಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.