ಎಲ್ಲ ಬ್ಯಾಂಕ್ ಗಳು ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು

All banks should work in a farmer friendly manner

ಎಲ್ಲ ಬ್ಯಾಂಕ್ ಗಳು ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು 

ಹಾವೇರಿ 25: ಸಾಲ ಸೌಲಭ್ಯ ಕೋರಿ ಬ್ಯಾಂಕ್ ಗೆ ಬರುವ ಎಲ್ಲ ರೈತರಿಗೂ ಸಾಲ ಸಿಗುವಂತಾಗಬೇಕು. ಎಲ್ಲ .ಬ್ಯಾಂಕ್ ಗಳು ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು. 

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನೆ ಸಮಿತಿ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿಯ    ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಜಿಲ್ಲೆಯ ಎಲ್ಲ ಬ್ಯಾಂಕ್ ಗಳಲ್ಲಿ ಅರ್ಹತೆ ಹೊಂದಿದ  ಎಲ್ಲ ರೈತರಿಗೂ ಸಾಲ ಸೌಲಭ್ಯ ಸಿಗುವಂತಾಗಬೇಕು. 

   ಪ್ರತಿ ಮೂರು ತಿಗಳಿಗೊಮ್ಮೆ ನಡೆಯುವ ಈ ಸಭೆಯಲ್ಲಿ ಒಂದೊಂದು ಸುಧಾರಣೆಯಗಬೇಕು ಸಿಡಿ ರೆಸಿಯೋ ನಿಯಮ ಪಾಲಿಸಬೇಕು. ದುಡಿಯುವ ಹಾಗೂ ಸಾಧನೆ ಮಾಡುವ ಮನಸುಳ್ಳವರಿಗೆ ಸಹಾಯ ಮಾಡಿದರೆ ಉತ್ತಮ ಕೆಲಸ ಮಾಡಿದ ತೃಪ್ತಿ ನಿಮಗಿರುತ್ತದೆ ಎಂದರು.  

       ಆರ್‌ಬಿಐ ಮಾರ್ಗ ಸೂಚಿಯಾನುಸಾರ 5000 ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ತೆರೆಯಬೇಕುಕಂಚಾರಗಟ್ಟಿ, ಕಳಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಆರಂಭಿಸಲು ಸೂಚನೆ ನೀಡಿದರು. 

        ಮೈಕ್ರೋ ಫೈನಾನ್ಸ್‌ ಗಳು ಸಾಲ ವಸೂಲಿಗೆ ಒತ್ತಾಯಿಸುವಂತಿಲ್ಲ ಮನೆಗಳಿಗೆ ಕೀಲಿ ಹಾಕುವ ಅಧಿಕಾರ ನಿಮಗಿಲ್ಲ ಸಾಲ ಕೊಡುವಾಗ ಅವರ ಆರ್ಥಿಕ ಸ್ಥಿತಿ ನೋಡಿಕೊಂಡು ಸಾಲ ನೀಡಬೇಕು. ವಸೂಲಾತಿಗೆ ಗುಂಡಾಗಳನ್ನು ನೇಮಿಸುವಂತಿಲ್ಲ ಎಂದು ಹಾಗೂ ಆರ್ ಬಿ ಐ ಮಾರ್ಗಶುಚಿಯನ್ವಯ ವ್ಯವಹಾರ ಮಾಡಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.ಮೈಕ್ರೋ ಫೈನಾನ್ಸ್‌ ಗಳ ಚಲನ ವಲನ ಗಳ ಮೇಲೆ ನಿಗಾ ವಹಿಸಲು ಒಂದು ಸಮಿತಿ ರಚಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಕೆಸಿಸಿ ಬ್ಯಾಂಕ್ ನಲ್ಲಿ ಧಾರವಾಡ, ಗದಗ, ಹಾವೇರಿ ಒಳಗೊಂಡಂತೆ ಜಿಲ್ಲೆಯಲ್ಲಿ ಜನರು ಹೆಚ್ಚಿನ ಡೆಪಾಸಿಟ್ ಮಾಡುತ್ತಿದ್ದರೂ ಇಲ್ಲಿನ ಜನರಿಗೆ ಸಾಲ ಸಿಗದಿರುವುದು ವಿಷಾದಕರ ಸಂಗತಿಯಾಗಿದೆ. ಕೂಡಲೇ ಹಾವೇರಿಯಲ್ಲಿ ಕೆಸಿಸಿ ಬ್ಯಾಂಕ್ ಪ್ರಾದೇಶಿಕ ಶಾಖೆ ಆರಂಬಿಸಿ ಇಲ್ಲಿಯ ಜನರಿಗೆ ಅನುಕೂಲ ಮಾಡಿಕೊಡುವಂತೆ ಆರ್‌ಬಿಐ ಗೆ ಪತ್ರ ಬರೆಯುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಸೂಚನೆ ನೀಡಿದರು.ಕೃಷಿ ಸೇರಿದಂತೆ ಎಲ್ಲ ಕ್ಷೆತ್ರ ಗಳಲ್ಲಿ ನಿಗದಿತ ಕಾಲ ಮಿತಿಯೊಳಗೆ ಗುರಿ ಸಾಧನೆಗೆ ಕ್ರಮವಹಿಸಲು ವಿವಿಧ ಅಧಿಕಾರಿಗಳಿಗೆ ಸೂಚನೆ ನೀಡಿದರುಸಭೆಗೆ ಗೈರಾದ ವರ ಬಗ್ಗೆ ಕೇಂದ್ರ ಕಚೇರಿ ಗೆ ಪತ್ರ ಬರೆಯಲು ಸೂಚಿಸಿದರು ಬ್ಯಾಂಕ್ ಗೆ ಬರುವ ರೈತರಿಗೆ ಸಾಲ ಸಿಗುತ್ತಿಲ್ಲ ವೆಂದು ಯಾವುದೇ ರೈತರು ಮರಳಿ ಹೋಗಬಾರದು, ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾ ಗಿರುವುದರಿಂದ ರೈತರಿಗೆ ಸಾಲ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.ಪ್ರಧಾನ್ ಮಂತ್ರಿ ಪಸಲ್ ಭಿಮಾ ಯೋಜನೆ,ಅಮೃತ್ ಕುರಿಗಾಯಿ ಯೋಜನೆ ಸ್ವನಿಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರೀಶೀಲಿಸಿದರು. 

         ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ ಅವರು ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ವಿಧಾನಸಭಾ ಉಪಸಭಾಧ್ಯಕ್ಷರಾದ ರುದ್ರ​‍್ಪ ಲಮಾಣಿ ಭಾಗಯಾಗಿದ್ದರು,ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ,ಜಿಲ್ಲಾ ಪಂಚಾಯತ್ ಸಿಇಒ  ರುಚಿ ಬಿಂದಾಲ್, ಕೆವಿಜಿ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಸೋಮಶೇಖರ್, ನಂಬರ್ಡ್‌ ನ ರಂಗನಾಥ್, ಯೂನಿಯನ್ ಬ್ಯಾಂಕ್ ನ ದೀಪಕ್ ಕುಮಾರ್ ಹಾಗೂ ಇತರ ಬ್ಯಾಂಕ್ ಗಳ ಪ್ರಾದೇಶಿಕ ಅಧಿಕಾರಿಗಳು ಉಪಸ್ಥಿತರಿದ್ದರು.