ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಬೆಂಬಲ ಬೆಲೆಗೆ ಒತ್ತಾಯಿಸಿ ಮನವಿ
ಧಾರವಾಡ / ಹುಬ್ಬಳ್ಳಿ 18: ಸೋಯಾಬಿನ್ ಬೆಳಗೆ ಬೆಂಬಲ ಬೆಲೆ ನೀಡಬೇಕು ಮತ್ತು ಖರೀದಿ ಕೇಂದ್ರದಲ್ಲಿ ನೋಂದಾಯಿತ ರೈತರ ಸೋಯಾಬೀನ್ ಅನ್ನು ಕೂಡಲೇ ಖರೀದಿ ಮಾಡಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎ.ಐ.ಕೆ.ಕೆ.ಎಂ.ಎಸ್ ) ವತಿಯಿಂದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಗೀತಾ ಸಿ.ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ ಮಾತನಾಡಿ ಧಾರವಾಡ ಜಿಲ್ಲೆಯ ಪ್ರಮುಖ ಬೆಳೆ, ಬಂಗಾರದ ಅವರೇ ಎಂದು ಪ್ರಸಿದ್ಧವಾಗಿರುವ ಸೋಯಾಬೀನ್ ಸರಿಯಾದ ಬೆಲೆ ಸಿಗದೆ ರೈತರಲ್ಲಿ ಸಂತಸ ಮೂಡಿಸುತ್ತಿಲ್ಲ. ಈ ಬಾರಿ ಮುಂಗಾರು ಬೆಳೆ ಕೆಲವೇಡೆ ಮಳೆಯಿಂದಾಗಿ ಸರಿಯಾಗಿ ಬೆಳೆ ಬಂದಿಲ್ಲ ಇನ್ನು ಕೆಲವು ಕಡೆ ಒಳ್ಳೆ ಫಸಲು ಬಂದಿರುವ ಉದಾಹರಣೆಗಳು ಇವೆ. ಬೆಳೆಯ ಪ್ರಮಾಣ ಒಂದೇ ಆಗಿಲ್ಲ. ಇಂದಿನ ದುಬಾರಿ ಕೃಷಿಯಲ್ಲಿ ಹೇಗೋ ಕೃಷಿ ಮಾಡಿ ಬೆಳೆ ಬಂದಾಗ ಅದರದರ ಏರುಪೇರಾಗಿ ರೈತನಿಗೆ ನಷ್ಟವೇ ಜಾಸ್ತಿ.
ಇಂತಹ ಪರಿಸ್ಥಿತಿಯಲ್ಲಿ ಹಲವಾರು ದಶಕಗಳಿಂದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಲು ಹೋರಾಡಿದ ಪ್ರತಿಫಲವಾಗಿ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಖರೀದಿ ಕೇಂದ್ರದಲ್ಲಿ ಸರ್ಕಾರದಿಂದ ಬೆಳೆಯನ್ನು ಖರೀದಿ ಮಾಡಲು ಮುಂದಾಗಿರುವುದು ಸ್ವಾಗತ ಅರ್ಹ. ಆದರೆ ಧಾರ್ವಾಡ ಜಿಲ್ಲೆಯ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ರೈತರು ಆನ್ಲೈನಲ್ಲಿ ನೋಂದಾವಣೆ ಮಾಡಿಸಿದ್ದಾರೆ. ಒಂದು ಎಕರೆಗೆ ಸುಮಾರು 50 ಸಾವಿರ ಖರ್ಚು ಮಾಡಿ 8 ರಿಂದ 10 ಕ್ವಿಂಟಲ್ ಬೆಳೆ ತೆಗೆಯಬಹುದು. ಆದರೆ ಈಗಿರುವ ಬೆಲೆ ನಿಗದಿ ಪ್ರಕಾರ 4890 ರೂಪಾಯಿ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಅಲ್ಲ. ಆದರೂ ಖಾಸಗಿ ಅವರ ಕೈಗೆ ಸಿಕ್ಕರೆ ಈ ಬೆಲೆಯು ಸಿಗುವುದಿಲ್ಲ ಎಂದು ತಡವಾಗಿ ಹಣ ಪಾವತಿಯಾದರೂ ಪರವಾಗಿಲ್ಲ ಒಳ್ಳೆ ಬೆಲೆ ಸಿಗಲಿ ಎಂದು ರೈತರು ಕಾಯುತ್ತಾ ಕೂತಿದ್ದಾರೆ.
ಜಿಲ್ಲೆಯ ಎಷ್ಟೋ ಬಹುಪಾಲು ರೈತರಿಗೆ ಖರೀದಿ ಯಿಕೇಂದ್ರದ ಸುಳಿವೇ ಇಲ್ಲ. ನೊಂದಾವಣಿ ಮಾಡುಸಲು ತಕ್ಕಷ್ಟು ಸಮಯವೂ ಕೊಡಲಿಲ್ಲ. ಈಗ ನೊಂದಾಯಿತ ರೈತರಲ್ಲಿ ಸುಮಾರು ಅರ್ಧಕ್ಕೂ ಹೆಚ್ಚು ರೈತರ ಬೆಳೆ ಖರೀದಿ ಮಾಡಲು ಖರೀದಿ ಕೇಂದ್ರ ಮುಂದಾಗುತ್ತಿಲ್ಲ. ಹಾಗಾಗಿ ಈ ಕೂಡಲೇ ಖರೀದಿ ಕೇಂದ್ರದಲ್ಲಿ ನೊಂದಾಯಿತ ರೈತರ ಸೋಯಾಬೀನನ್ನು ಖರೀದಿ ಮಾಡಬೇಕೆಂದು ಎಐಕೆಕೆಎಂಎಸ್ ಜಿಲ್ಲಾ ಸಮಿತಿಯ ಮನವಿ.