ಎಲ್ಲ ಹಂಡೆವಜೀರ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು: ನಾಗರಾಜ ತಂಗಡಗಿ

All Handevajira Samaj Bandhas should join forces in large numbers and make it successful: Nagaraja

ಎಲ್ಲ ಹಂಡೆವಜೀರ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು:  ನಾಗರಾಜ ತಂಗಡಗಿ 

ಮುದ್ದೇಬಿಹಾ: 30 : ಫೆ, 1 ಮತ್ತು 2 ರಂದು ಬಸವಣ್ಣನವವರ ಐಕ್ಯಸ್ಥಲ ಬಾಗಲಕೋಟ ಜಿಲ್ಲೆಯ ಕೂಡಲ ಸಂಗಮದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದಿಂದ ಇಡರು ದಿನಗಳ ಬ್ರಹತ್ ಸಮಾವೇಶ ಹಾಗೂ ವಿಚಾಶರ ಸಂಕಿರಣ, ಗ್ರಂಥಗಳ ಲೋಕಾರ​‍್ಣ ಎ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಜತೆಗೆ ಹಂಡೆಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಕಾರಣ ತಾಲೂಕಿನ ಎಲ್ಲ ಹಂಡೆವಜೀರ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು  ಎಂದು ಹಂಡೆವಜೀರ ಸಮಾಜದ  ವಿಜಯಪುರ ಜಿಲ್ಲಾಧ್ಯಕ್ಷ ಸಂಗನಗೌಡ ಕರಭಂಟನಾಳ, ಹಾಗೂ ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ತಂಗಡಗಿಯವರು ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಸು ಮನೆತನದಲ್ಲಿ  ರಾಜಾ  ಹಂಡೆ  ಹನುಮಂತಪ್ಪ  ನಾಯಕ  ವಿಶಿಷ್ಟ  ಪರಂಪರೆಯನ್ನು ಹೊಂದಿದ್ದರು ಹಂಡೆವ ಜೀರ ಸಮಾಜರ್ಥಿಕ ಸಮಾಜಿಕ ಹಾಗೂ ರಾಜಕೀಯವ ಆಗಿ ತೀರಾ ಹಿಂದುಳಿದ ಜನಾಂಗವಾಗಿದ್ದರಿಂದ  ಸಂಘಟನೆ ಮೂಲಕ  ಸಂವಿದಾನ ಬದ್ದ ನಮಗಹೂ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ಹಂಡೆವಜೀರ ಸಮಾಜದ ಇತಿಹಾಸವನ್ನು ಇಂದಿನ ಯುವ ಪೀಲೀಗೆಗಳಿಗೆಗಳಲ್ಲಿ ಅರಿವು ಮೂಡಿಸುವುದು ಅತ್ಯವವಶ್ಯಕವಾಗಿದೆ. ಈ ಹಿನ್ನೇಲೆಯಲ್ಲಿ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗುತ್ತದೆ. ಈ ಹಿಂದೆ 2004ರಲ್ಲಿ ಬಸವನ ಬಾಗೇವಾಡಿ ಹಾಗೂ 2014ರಲ್ಲಿ ಶಹಾಪುರದಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಸಮ್ಮೇಳನದಲ್ಲಿ ಸುಮಾರು 1 ಲಕ್ಷ ಜನ ಬಾಗವಹಿಸುವ ನೀರೀಕ್ಷೇ ಇದ್ದು ಕಾರಣ ನಮ್ಮ ತಾಲೂಕಿನಿಂದ ಸುಮಾರು 25 ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರು ಬಾಗವಹಿಸಲಿದ್ದಾರೆ. ಫೆ.1 ರಂದು ಗ್ರಂಥಗಳ ಕುರಿತು ವಿಶೇಷ ಗೋಷ್ಠಿ  ಆಯೋಜಿಸಲಾಗಿದೆ. ಸಮ್ಮೇಳನದ ದಿನ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ರಾಷ್ಟ್ರಮಟ್ಟದ ಹಂಡೆಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜತೆಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್‌ಗೆ ಆಯ್ಕೆಯಾದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ಜ.25 ರೊಳಗಾಗಿ ರಾಜ್ಯದ ಆಯಾ ತಾಲೂಕಿನ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಬಳಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು. 


ಸಮ್ಮೇಳನದಲ್ಲಿ ನಿಡುಮಾ ಮಿಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕೊಟ್ಟೂರು ಪೀಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮತ್ತಿತರ ಮಠಾಧೀಶರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟ ಸಂಸದ ಪಿ ಸಿ ಗದ್ದಿಗೌಡರ, ಸಕ್ಕರೆ ಸಚಿವ ಶಿವವಾನಂದ ಪಾಟೀಲ,   ಶಾಸಕರಾದ ಸಿ ಎಸ್ ನಾಡಗೌಡ(ಅಪ್ಪಾಜಿ) ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಜಿ ಟಿ ಪಾಟೀಲ, ರಾಜುಗೌಡ ಪಾಟೀಲ, ಯಶವಂತರಾಯಗೌಡ ಪಾಟೀಲ, ಅಶೊಕ ಮನಗೂಳಿ, ವಿಜಯಾನಂದ ಕಾಶಪ್ಪನವ ಸೇರಿದಂತೆ ಹಲವಾರು ಗಣ್ಯರು ಹಾಗೂ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಈ ವೇಳೆ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ, ನ್ಯಾಯವಾದಿ ಎಂಬಿ ಬಿರಾದಾರ,ಬಾಲನಗೌಡ ಪಾಟೀಲ, ಭೀಮನಗೌಡ ಬಿರಾದಾರ, ಚನ್ನಪ್ಪಗೌಡ ಹೊಸಗೌಡರ, ಹಣಮಗೌಡ ಪಾಟೀಲ,ಸಾಗರ ಹುನಕುಂಟಿ ಸೇರಿದಂತೆ ಹಲವರು ಇದ್ದರು.