ರಾಜ್ಯ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ: ಸುನಿಲಕುಮಾರ್

ಕೊಪ್ಪಳ 11: ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದಲೇ ಅಪಘಾತಗಳು ಹೆಚ್ಚಾಗುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡದಿರಿ ಎಂದು ಕೊಪ್ಪಳ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಕೊಪ್ಪಳ ಸಾರಿಗೆ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ರಸ್ತೆ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅತೀ ಹೆಚ್ಚು ಅಪಘಾತ ಆಗುವ ಸ್ಥಳಗಳನ್ನು ಗುರಿತಿಸಿ, ಅಲ್ಲಿ ಎಚ್ಚರಿಕಾ ಸೂಚನಾ ಫಲಕಗಳನ್ನು ಅಳವಡಿಸಬೇಕು.  ಕೆ.ಎಸ್.ಆರ್.ಟಿ.ಸಿ. ಬಸ್ ನಿಲುಗಡೆ ಹಾಗೂ ನಿಲ್ದಾಣಗಳ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸಬೇಕು.  ರಸ್ತೆ ಪಕ್ಕದಲ್ಲಿ ವಾಹನಗಳ ನಿಲುಗಡೆ (ಪಾಕರ್ಿಂಗ್) ಸ್ಥಳವನ್ನು ಗುರುತಿಸಬೇಕು.  ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿಮರ್ಿಸಲಾಗಿರುವ ಹಾಗೂ ಅಪಘಾತವನ್ನುಂಟುಮಾಡುವ ರೋಡ್ ಬ್ರೇಕರ್ಸ್ಗಳ ತೆರವುಗೊಳಿಸಿ.  ಅವಶ್ಯ ವಿರುವ ಕಡೆ ರಸ್ತೆ ಸುರಕ್ಷ ಚಿನ್ಹೆಗಳನ್ನು ಅಳವಡಿಸಿ ಹಾಗೂ ಪೊಲೀಸ್ ಬ್ಯಾರಿಕೇಟ್ ಮತ್ತು ಸಿಸಿ ಕ್ಯಾಮೆರಾಗಳನ್ನು ಸಹ ಅಳವಡಿಕೆಮಾಡಿ.  ರಸ್ತೆ ಮಧ್ಯದಲ್ಲಿ ಗುಂಡಿಗಳು ಕಂಡುಬಂದಲ್ಲಿ ಅವುಗಳನ್ನು ಶೀಘ್ರ ದುರಸ್ಥಿ ಪಡಿಸಿ ಅಪಘಾತ ತಡೆಗೆ ಕೈಗೊಳ್ಳಬೇಕು.  ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಬಗ್ಗೆ ಅರಿವು ಮೂಡಿಸಬೇಕು.  ವಿಶೇಷವಾಗಿ ಶಾಲಾ ಕಾಲೇಜುಗಳ ಬಸ್ಗಳಿಗೆ ಜಿ.ಪಿ.ಆರ್. ಅಳವಡಿಸುವ ಬಗ್ಗೆ ಶಾಲಾ ಕಾಲೇಜುಗಳ ವಾಹನ ಚಾಲಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.  ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೇಲ್ಮೇಟಗಳನ್ನು ಧರಿಸುವಂತೆ ಕ್ರಮ ಕೈಗೊಳ್ಳಿ.  ಐ.ಆರ್.ಸಿ. ಸ್ಟಾಡರ್ಡ್ ಪ್ರಕಾರ ರೋಡಗಳನ್ನು ನಿಮರ್ಿಸಬೇಕು.  ರಸ್ತೆಯಲ್ಲಿ ವಿದ್ಯುತ್ ದ್ವೀಪಗಳನ್ನು ಅಳವಡಿಸಬೇಕು.  ಅನಗತ್ಯ ಅಳವಡಿಸಲಾಗಿರುವ ಬ್ಯಾನರ್ಗಳನ್ನು, ಪುಟ್ಪಾತ್ಗಳನ್ನು ತೆರವುಗೊಳಿಸಬೇಕು.  ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ಮಾಡಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತೀ ವೇಗವಾಗಿ ವಾಹನ ಚಲಾಯಿಸುವುದರ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು.  ಜಿಲ್ಲೆಯಲ್ಲಿ ಕಾವಲು ರಹಿತ ರೈಲ್ವೇ ಲೇವಲ್ ಕ್ರಾಸಿಂಗ್ಗಳಿದ್ದಲ್ಲಿ ಮಾಹಿತಿ ನಿಡಿ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಸ್ನೇಹಾ ಜೈನ್, ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್. ಶೇಖರ್ ಸೇರಿದಂತೆ ಪೊಲೀಸ್ ಇಲಾಖೆ, ಲೋಕೊಪಯೋಗಿ ಹಾಗೂ ವಿವಿಧ ಇಲಾಖೆಗಳ ಮತ್ತು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಉಪಸ್ಥಿತರಿದ್ದರು.