ಲೋಕದರ್ಶನ ವರದಿ
ಇಂಡಿ 07: ನೂತನವಾಗಿ ಆಲಮೇಲ ತಾಲೂಕಿನಲ್ಲಿ ಶಿರಶ್ಯಾಡ, ಹಿರೇಮಸಳಿ, ಚಿಕ್ಕಮಸಳಿ ಗ್ರಾಮಗಳನ್ನು ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿ ಕರವೇ ಅಧ್ಯಕ್ಷ ಬಾಳು ಮುಳಜಿ ನೇತೃತ್ವದಲ್ಲಿ ಶಿರಶ್ಯಾಡ, ಹಿರೇಮಸಳಿ, ಚಿಕ್ಕಮಸಳಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳ ಕಾಯರ್ಾಲಯದ ಶಿರಸ್ತೆದಾರ ವಿರೂಪಾಕ್ಷ ಬಣಕಾರ ಇವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕರವೇ ಅಧ್ಯಕ್ಷ ಬಾಳು ಮುಳಜಿ ಮಾತನಾಡಿ ನೂತನವಾಗಿ ಆಲಮೇಲ ತಾಲೂಕು ಮಾಡಿರುವದು ಆ ಭಾಗದ ಜನರ ಹೋರಾಟದ ಪ್ರತಿಫಲವಾಗಿದ್ದು ಸರಕಾರದ ಕ್ರಮಕ್ಕೆ ಅಭಿನಂದನೆ ಸಲ್ಲಿಸುವದಾಗಿ ಹೇಳಿ ನೂತನ ತಾಲೂಕಿನಲ್ಲಿ ಈಗಾಗಲೆ ಇಂಡಿ ಮತಕ್ಷೇತ್ರದಲ್ಲಿರುವ ಶಿರಶ್ಯಾಡ, ಹಿರೇಮಸಳಿ ಗ್ರಾಮವನ್ನು ಸೇರ್ಪಡೆಯಾಗುತ್ತದೆ ಎಂಬ ಕೂಗು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಶಿರಶ್ಯಾಡ ಗ್ರಾಮ ಇಂಡಿ ತಾಲೂಕಿಗೆ ಅತ್ಯಂತ ಸಮೀಪವಿದ್ದು ಶಿಕ್ಷಣ ಪಡೆಯಲು ಪ್ರತಿ ನಿತ್ಯ ಸಾವಿರಾರು ವಿಧ್ಯಾಥರ್ಿಗಳು, ಹಾಗೂ ವ್ಯಾಪಾರಸ್ಥರು ಇಂಡಿ ನಗರಕ್ಕೆ ಅಲೆದಾಡುವದು ಸವರ್ೆ ಸಾಮಾನ್ಯ. ಅನೇಕ ದಶಕಗಳಿಂದ ಇಂಡಿ ತಾಲೂಕಿನಲ್ಲಿಯೇ ಶಿರಶ್ಯಾಡ, ಹಿರೇಮಸಳಿ ಗ್ರಾಮ ಇರುವದರಿಂದ ಸಾಕಷ್ಟು ಅಭಿವೃದ್ದಿ ಕಂಡಿವೆ. ಈಗಾಗಲೇ ಸಿಂದಗಿ ಮತಕ್ಷೇತ್ರದಲ್ಲಿದ್ದ ಕೆಲವೊಂದು ಗ್ರಾಮಗಳು ಆಡಳಿತ ವ್ಯವಸ್ಥೆ ಬೇರೆ ಕಡೆ ನಡೆಯುತ್ತಿರುವದರಿಂದ ಅಲ್ಲಿನ ಜನರು ದಿಕ್ಕು ತೋಚದಂತಾಗಿದೆ ಇಂತಹ ತಾಂತ್ರಿಕ ಸಮಸ್ಯಗಳು ತಲೆದೂರುವದಕ್ಕಿಂತ ಮುಂಚೆ ಇಂಡಿ ಮತಕ್ಷೇತ್ರದಲ್ಲಿದ ಗ್ರಾಮಗಳು ಇಂಡಿ ತಾಲೂಕಿನಲ್ಲಿಯೇ ಉಳಿಯಬೇಕು. ಒಂದು ವೇಳೆ ಆಲಮೇಲ ತಾಲೂಕಿನಲ್ಲಿ ಕೂಡಿಸಿದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಎಸ್.ಆರ್.ಬಿರಾದಾರ, ಆರ್.ಸಿ. ಶೆಟ್ಟಿ, ಎಸ್.ಎಸ್.ಬಿರಾದಾರ, ಸುಭಾಸ ಕಾಮಾ, ಯಶ್ವಂತ ತೇಲಗ, ಗುರುಪಾದ ನಾವಿ, ಶಿವುಕುಮಾರ ಬಿರಾದಾರ, ಅದೃಶ್ಯಪ್ಪ ವಾಲಿ, ಪ್ರಕಾಶ ಮಲಗಾಣ, ಅನೀಲ ತಡಲಗಿ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.