ಮುಂಬೈ, ಏ 22 ಸೂಪರ್ ಹಿಟ್ ಚಿತ್ರ ಕಂಚನಾ ಹಿಂದಿ ಭಾಷೆಗೆ ರಿಮೇಕ್ ಆಗಲಿದ್ದು, ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ರಾಘವ್ ಲಾರೆನ್ಸ್ ನನಿರ್ದೇಶನ ಸೂಪರ್ ಹಿಟ್ ಚಿತ್ರ ಕಂಚನಾ ಚಿತ್ರ ಹಿಂದಿಯಲ್ಲಿ ಕಾಣಿಸಿಕೊಳ್ಳಲಿದೆ. ಈ ಚಿತ್ರದ ಶೂಟಿಂಗ್ ಈ ತಿಂಗಳಲ್ಲಿನಲ್ಲಿ ಆರಂಭವಾಗಲಿದ್ದು, ಮುಂದಿನ ವರ್ಷ ತೆರೆಗೆ ಬರಲಿದೆ. ಚಿತ್ರದ ಚಿತ್ರಕಥೆಯಲ್ಲಿ ಬದಲಾವಣೆ ಕಂಡುಬರಲಿದೆ. ಹಲವು ಚರ್ಚೆ ನಡೆಸಿದ ಬಳಿಕ ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರಕ್ಕೆ ಅಕ್ಷಯ್ ಅವರನ್ನು ಆಯ್ಕೆ ಮಾಡಲಾಗಿದೆ. ಆರ್.ಮಾಧವನ್ ಹಾಗೂ ಕಿಯಾರ ಅಡ್ವಾಣಿ ಅವರು ಹಾರರ್, ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಯಾರ ಅವರಿಗೆ ಚಿತ್ರದ ಚಿತ್ರಕಥೆ ಇಷ್ಟವಾಗಿದೆ. ಈ ಚಿತ್ರದಲ್ಲಿ ಕಿಯಾರ ಅವರು ಅಕ್ಷಯ್ ಅವರ ಪತ್ನಿಯ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆ ಹಾಗೂ ಅಕ್ಷಯ್ ಪಾತ್ರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.