ಮತ್ತೊಮ್ಮೆ ತೆರೆಗೆ ಅಕ್ಷಯ್, ಕತ್ರಿನಾ ಜೋಡಿ

ಮುಂಬಯಿ, ಏ 22  ಅನೇಕ ಚಿತ್ರಗಳಲ್ಲಿ ತೆರೆಹಂಚಿಕೊಂಡು ಪ್ರೇಕ್ಷಕರನ್ನು ರಂಜಿಸಿರುವ  ಕೈಫ್ ಹಾಗೂ ನಟ ಅಕ್ಷಯ್ ಕುಮಾರ್ ಈಗ ಮತ್ತೊಂದು ಚಿತ್ರದಲ್ಲಿ ಜೊತೆಯಾಗಲಿದ್ದಾರೆ. ಈ ಜೋಡಿ ನಿದರ್ೆಶಕ ರೋಹಿತ್ ಶೆಟ್ಟಿ ಅವರ 'ಸೂರ್ಯವಂಶಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸಿಂಬಾ' ಚಿತ್ರದ ಯಶಸ್ಸಿನ ನಂತರ ರೋಹಿತ್ ಶೆಟ್ಟಿ, ಮತ್ತೊಮ್ಮೆ ಅಕ್ಷಯ್ ಕುಮಾರ್ ಅವರೊಂದಿಗೆ 'ಸೂರ್ಯವಂಶಿ' ಚಿತ್ರ ನಿರ್ಮಿಸಲು  ತಯಾರಾಗಿದ್ದಾರೆ. ತುಂಬಾ ದಿನಗಳಿಂದ ನಾಯಕಿಯ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದ ಚಿತ್ರ ತಂಡ, ಕೊನೆಗೆ ಕತ್ರಿನಾ ಕೈಫ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಈಗಾಗಲೇ ಅಕ್ಷಯ್ ಹಾಗೂ ಕತ್ರಿನಾ ಜೋಡಿಯಲ್ಲಿ 'ಸಿಂಗ್ ಈಸ್ ಕಿಂಗ್', 'ನಮಸ್ತೆ ಲಂಡನ್', 'ದೇ ದನಾ ಧನ್' ದಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ  ಕರಣ್ ಜೋಹರ್ ಟ್ವಿಟರ್ ನಲ್ಲಿ,  ಸೂರ್ಯವಂಶಿ ಹುಡುಗಿಗೆ ಚಿತ್ರಕ್ಕೆ ಸ್ವಾಗತ ಎಂದು ಬರೆದುಕೊಂಡು, ನಿರ್ದೇಶಕ ರೋಹಿತ್  ಶೆಟ್ಟಿ, ಕತ್ರಿನಾ ಕೈಫ್, ಅಕ್ಷಯ್ ಕುಮಾರ್ ಹಾಗೂ ತಮ್ಮ ಫೋಟೋವನ್ನು ಶೇರ್ ಮಾಡಿದ್ದಾರೆ. ಮುಂದಿನ ವರ್ಷದ 'ರಂಜಾನ್ ಹಬ್ಬ'ದಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ. ಈ ವರ್ಷದ ರಂಜಾನ್ ನಂದು ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಚಿತ್ರ ತೆರೆ ಕಾಣಲಿದೆ.