ಅಕ್ಷಯ್ ಕುಮಾರ್ ಹೆಸರಿನಲ್ಲಿ ವಿಶೇಷ ದಾಖಲೆ ಬರೆದ '2.0'

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಗಳಿಕೆಯಲ್ಲಿ ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. ಬಿಡುಗಡೆಯಾದ 8 ದಿನಗಳಲ್ಲಿ ಜಗತ್ತಿನಾದ್ಯಂತ ಒಟ್ಟು 520 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಭಾರತದಲ್ಲಿ 392 ಕೋಟಿ ಹಾಗೂ ಹೊರದೇಶದಲ್ಲಿ 128 ಕೋಟಿ ಗಳಿಕೆ ಕಂಡಿದೆಯಂತೆ. 

ಈ ನಡುವೆ '2.0' ಸಿನಿಮಾ ಅಕ್ಷಯ್ ಕುಮಾರ್ ವೃತ್ತಿ ಜೀವನದಲ್ಲಿ ಹೊಸ ದಾಖಲೆ ನಿಮರ್ಿಸಿದೆ. ಇದುವರೆಗೂ ಅಕ್ಷಯ್ ಕರಿಯರ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ '2.0' ಆಗಿ ಹೊರಹೊಮ್ಮಿದೆ. ಅಂದ್ರೆ, ಹಿಂದಿ ಭಾಷೆಯಲ್ಲಿ '2.0' ಗಳಿಸಿರುವ ಮೊತ್ತವನ್ನ ಲೆಕ್ಕಾಚಾರ ಮಾಡಿದಾಗ 137 ಕೋಟಿ ಬಾಚಿದೆ. 

ಮೊದಲ ದಿನ 22 ಕೋಟಿ ಗಳಿಸಿದ್ದ 2.0 ಹಿಂದಿ ಸಿನಿಮಾ 8 ನೇ ದಿನ 8 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆ, 8 ದಿನದಲ್ಲಿ 137 ಕೋಟಿ ತನ್ನ ಖಾತೆಗೆ ಹಾಕಿಕೊಳ್ಳುವ ಮೂಲಕ ಅಕ್ಕಿಗೆ ವಿಶೇಷವೆನಿಸಿಕೊಂಡಿದೆ. 

ಇದುವರೆಗೂ ಅಕ್ಷಯ್ ಕುಮಾರ್ ಅಭಿನಯಿಸಿದ್ದ ಚಿತ್ರಗಳ ಪೈಕಿ 'ಟಾಯ್ಲೆಟ್ ಏಕ್ ಪ್ರೇಮ ಕಥಾ' ಸಿನಿಮಾ 133 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ, ಈ ಚಿತ್ರದ ದಾಖಲೆಯನ್ನ 2.0 ಸಿನಿಮಾ ಮುರಿದು ಹಾಕಿದೆ. ಹಾಗ್ನೋಡಿದ್ರೆ, ಅಕ್ಷಯ್ ಕುಮಾರ್ ಅಭಿನಯದ ಹತ್ತು ಸಿನಿಮಾಗಳು ನೂರು ಕೋಟಿ ಕ್ಲಬ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ರೌಡಿ ರಾಥೋರ್, ಏರ್ ಲಿಫ್ಟ್, ರುಸ್ತುಂ, ಜಾಲಿ ಎಲ್.ಎಲ್.ಬಿ 2, ಹೌಸ್ ಫುಲ್ 2, ಹಾಲಿಡೇ, ಹೌಸ್ಫುಲ್ 3 ಹಾಗೂ ಗೋಲ್ಡ್ ಸಿನಿಮಾಗಳು ನೂರು ಕೋಟಿ ಕಲೆಕ್ಷನ್ ಮಾಡಿತ್ತು