ಲೋಕದರ್ಶನವರದಿ
ಹುಬ್ಬಳ್ಳಿ 21: ಮಹಾದೇವಿಯಕ್ಕ ವಿಶ್ವ ಸ್ತ್ರೀಕುಲದ ಸ್ವಾತಂತ್ರ್ಯ, ಸ್ವಾಭಿಮಾನ, ಸದಾಚಾರ, ಸದ್ಭಕ್ತಿ, ಇಂತಹ ಮಹೋನ್ನತ ಮೌಲ್ಯಗಳಿಗೆ ಪ್ರತಿನಿಧಿಯಂತೆ ಕಾಣುತ್ತಾಳೆ. ಅಸಾಧ್ಯವನ್ನು ಸಾಧ್ಯವಾಗಿ ತೋರಿದ ಅಕ್ಕಮಹಾದೇವಿ ಜಗತ್ತಿನ ಪ್ರಪ್ರಥಮ ಸ್ತ್ರೀವಾದಿ ಚಿಂತಕಿಯಾಗಿ, ಪ್ರಗತಿಪರ ವಿಚಾರವಾದಿ ಕಾಣಿಸಿಕೊಳ್ಳುತ್ತಾಳೆ ಎಂದು ಅವರು ಬಸವ ಕೇಂದ್ರದ ವತಿಯಿಂದ ಲಿಂಗೈಕ್ಯ ಶಿವಗಂಗವ್ವ ಹಾಗೂ ಲಿಂಗೈಕ್ಯ ವಿರುಪಾಕ್ಷಪ್ಪ ಹೊಸಕೇರಿ ಅವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳಾ ವಿದ್ಯಾಪೀಠದ ಉಪನ್ಯಾಸಕಿ ಡಾ. ಸರ್ವಮಂಗಳಾ ಕುದರಿ ಹೇಳಿದರು.
ಬಸವಾದಿ ಶರಣರು ಸತ್ಯ ಶುದ್ಧ ಕಾಯಕ ಅಂತರಂಗ ಬಹಿರಂಗ ಶುದ್ಧತೆ, ಧರ್ಮದ ಬದುಕು, ಕಾಯಕ ದಾಸೋಹಗಳ ಆಚರಣೆ, ನೈತಿಕ ಮೌಲ್ಯದ ನಿಲುವು, ದಯೆ ಧರ್ಮಗಳ ಸಮನ್ವಯ, ನೊಂದವರ ದೀನ ದಲಿತರ ಉದ್ದಾರ, ಪರಸ್ತ್ರೀಯರನ್ನು ಕಾಣುವಲ್ಲಿ ಮಾತೃ ವಾತ್ಸಲ್ಯ, ಗುರು ಹಿರಿಯರಲ್ಲಿ ನಿಷ್ಠೆ, ಮುಂತಾದವುಗಳನ್ನು ಪಾಲಿಸುತ್ತಿದ್ದರು. ಬಸವಾದಿ ಶರಣರ ಜೀವನ ಮೌಲ್ಯಗಳನ್ನು ಮನುಷ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಬಂಗಾರಮಯವಾಗುತ್ತದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ವಿ.ಗೊಂಗಡಶೆಟ್ಟಿ, ದತ್ತಿ ದಾನಿ ಬಸವರಾಜ ವಿ. ಹೊಸಕೇರಿ ಮಾತನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಡಾ|| ಬಿ.ವಿ.ಶಿರೂರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಸ್ವಾಗತಿಸಿದರು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ ಹಾಗೂ ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಅವರು ನಿರೂಪಿಸಿದರು. ಬಿ.ಎಲ್.ಲಿಂಗಶೆಟ್ಟರ ವಂದಿಸಿದರು. ಉಮಾ ಹುಲಿಕಂತಿಮಠ ವಚನಗಳನ್ನು ಹಾಡಿದರು.
ಪ್ರೊ ಎಸ್.ಸಿ.ಇಂಡಿ, ಅನ್ನಪೂರ್ಣ ಬಸವರಾಜ ಹೊಸಕೇರಿ, ಪ್ರೊ ವಿ.ಬಿ.ಮಾಗನೂರ, ಎಸ್.ವಿ.ಕೊಟಗಿ ಬಸವರಾಜ ಶೇಡಬಾಳ, ಸುನಿಲಾ ಬ್ಯಾಹಟ್ಟಿ, ಎಂ.ಬಿ.ಕಟ್ಟಿ, ಸೌಜನ್ಯ ಸೊಬರದ, ಸಿ.ಎಸ್.ಕುದರಿ, ಎನ್.ಬಿ.ಬೆಳ್ಳಿಗಟ್ಟಿ, ಸುಜಾತಾ ಎಸ್,ಕೆ., ಕೆ.ಎಸ್.ಇನಾಮತಿ ಲೊಕೇಶ ಕೊರವಿ, ಬಿರಾದಾರಪಾಟೀಲ, ಮುಂತಾದವರು ಇದ್ದರು.