ಮುಂಬೈ, ನ.25: 70,000 ಕೋಟಿ ರೂ.ಗಳ ನೀರಾವರಿ ಹಗರಣದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ ಸೋಮವಾರ ಕ್ಲೀನ್ ಚಿಟ್ ನೀಡಿದೆ.
ಅಜಿತ್ ಭಾಗಿಯಾಗಿದ್ದ ಕನಿಷ್ಠ ಒಂಬತ್ತು ಪ್ರಕರಣಗಳ ತನಿಖೆಯನ್ನು ಎಸಿಬಿ ಮುಕ್ತಾಯಗೊಳಿಸಿದೆ.
ಅಜಿತ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಆದಾಗ್ಯೂ, ಈ ಯಾವುದೇ ಪ್ರಕರಣಗಳು ಅಜಿತ್ ಅವರಿಗೆ ಸಂಬಂಧಿಸಿಲ್ಲ ಎಂದು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳದ ಮಹಾನಿರ್ದೇಶಕ ಪರಂಬೀರ್ ಸಿಂಗ್ ಹೇಳಿದ್ದಾರೆ.
ವಿದರ್ಭ ಪ್ರದೇಶದ ವಾಶಿಮ್, ಯವತ್ಮಾಲ್, ಅಮರಾವತಿ ಮತ್ತು ಬುಲ್‌ಧನಾದಲ್ಲಿನ ದೊಡ್ಡ ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ ಈ ಪ್ರಕರಣಗಳು ಸಂಬಂಧಿಸಿವೆ ಎನ್ನಲಾಗಿದೆ.
ಈ ಪ್ರಕರಣಗಳು 10 ವರ್ಷ ಹಿಂದಿನದ್ದಾಗಿದೆ. ಆಗ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದಲ್ಲಿ ಅಜಿತ್ ಪವಾರ್ ನೀರಾವರಿ ಸಚಿವರಾಗಿದ್ದರು.